ಹೊಸದೊಂದು ದಾಖಲೆ ಬರೆದ ಈ ಸರ್ಕಾರಿ ಶಾಲೆ – ರಾಜ್ಯದಲ್ಲಿನ ಖಾಸಗಿ ಶಾಲೆಗಳಿಗೆ ಮಾದರಿಯಾಗಿದೆ ಈ ವಿಶೇಷ ಸರ್ಕಾರಿ ಶಾಲೆ ಮತ್ತು ಶಿಕ್ಷಕರ ಟೀಮ್…..

Suddi Sante Desk
ಹೊಸದೊಂದು ದಾಖಲೆ ಬರೆದ ಈ ಸರ್ಕಾರಿ ಶಾಲೆ – ರಾಜ್ಯದಲ್ಲಿನ ಖಾಸಗಿ ಶಾಲೆಗಳಿಗೆ ಮಾದರಿಯಾಗಿದೆ ಈ ವಿಶೇಷ ಸರ್ಕಾರಿ ಶಾಲೆ ಮತ್ತು ಶಿಕ್ಷಕರ ಟೀಮ್…..

ವಿಜಯನಗರ

ವಿದ್ಯಾರ್ಥಿಗಳ ದಾಖಲಾತಿ ಕೊರತೆಯಿಂದ ಸರ್ಕಾರಿ ಶಾಲೆಗಳು ಮುಚ್ಚುವ ಆತಂಕದ ನಡುವೆಯೂ ರಾಮನಗರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹರಪನಹಳ್ಳಿ ತಾಲ್ಲೂಕಿ ನಲ್ಲಿ ಎರಡನೇ ಅತೀ ಹೆಚ್ಚು ದಾಖಲಾತಿ ಹೊಂದಿ ರುವ ಕೀರ್ತಿಗೆ ಭಾಜನವಾಗಿದೆ.

ಗುಣಮಟ್ಟದ ಶಿಕ್ಷಣ,ಕಟ್ಟಡ, ಉತ್ತಮ ವಾತಾವರ ಣದ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪೈಪೋಟಿ ನಡೆಸಿದೆ.ಶಾಲೆಗೆ ಮಕ್ಕಳನ್ನು ಆಕರ್ಷಿ ಸಲು ಖಾಸಗಿ ಶಾಲೆ ಮಕ್ಕಳಂತೆ ಸಮವಸ್ತ್ರ, ಶಿಸ್ತು, ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಮೂಲಕ ಗಮನ ಸೆಳೆದಿದೆ.

ಶಾಲೆಗೆ ಹೈಟೆಕ್ ಶೌಚಾಲಯ, ಪ್ರಯೋಗಾಲಯ, ಕೈ ತೋಟ,ಗಣಕಯಂತ್ರ ಅಲ್ಲದೆ,ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯ ಹೊಂದಿ ಪೋಷಕರ ಗಮನ ಸೆಳೆಯುವುದರ ಮೂಲಕ ದಾಖಲಾತಿ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಇದ್ದರೂ ಶಾಲೆಯಲ್ಲಿ ದೇಣಿಗೆ ರೂಪದಲ್ಲಿ 500 ಲೀ. ಸಾಮರ್ಥ್ಯದ ಟ್ಯಾಂಕರ್,100 ಲೀ. ಸಾಮರ್ಥ್ಯದ ಶುದ್ಧ ಕುಡಿಯುವ ನೀರು ಘಟಕ ಹೊಂದಿದೆ. ಶಾಲಾ ಕಾಂಪೌಂಡ್,ಕಲಿಕೆಗೆ ಆದ್ಯತೆ ನೀಡುವ ವಾತಾವರಣ ಇದೆ.

ಶಾಲೆಯಲ್ಲಿ 1ನೇ ತರಗತಿಯಿಂದ 5ನೇ ತರಗತಿ ಇರುವ ಶಾಲೆಯಲ್ಲಿ 7 ಜನ ಶಿಕ್ಷಕರಿದ್ದು ಒಟ್ಟು 137 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಹರಪ ನಹಳ್ಳಿ ತಾಲೂಕಿನಲ್ಲಿ ಎರಡನೇ ಅತೀ ಹೆಚ್ಚು ದಾಖಲಾತಿ ಹೊಂದಿದ ಶಾಲೆ ಆಗಿದೆ ಮೊದಲೇ ಸ್ಥಾನ ಚಿಗಟೇರಿ ಹೋಬಳಿಯ ಚಿಗಟೇರಿ ಮ್ಯಾಸರಹಟ್ಟಿ ಪ್ರಥಮ ಸ್ಥಾನ ಹೊಂದಿದೆ.

ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಹೆಚ್ಚು ದಾಖ ಲಾತಿ ಹೊಂದಿದ ಅರಸೀಕೆರೆ ಹೋಬಳಿಯ ರಾಮನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೋಟ ತುಂಬಾ ಅಂದ ಚೆಂದ ವಾಗಿ ಕಾಣುತ್ತಿದೆ.ಗ್ರಾಮಸ್ಥರ ಸಹಭಾಗಿತ್ವದಲ್ಲಿ ಶಿಕ್ಷಕರ ಗುಣಮಟ್ಟದ ಶಿಕ್ಷಣ ದಾಖಲಾತಿ ಏರಿಕೆಗೆ ಸಹಕಾರಿಯಾಗಿದೆ.

ಕಿರಿಯ ಪ್ರಾಥಮಿಕ ಶಾಲಾ ದಾಖಲಾತಿಯಲ್ಲಿ ರಾಮನಗರ ಶಾಲೆ ಎರಡನೇ ಸ್ಥಾನದಲ್ಲಿದೆ. ಡಯಟ್ ಸರ್ವೇ ತಂಡ ಪ್ರಥಮ ಸ್ಥಾನ ನೀಡಿದ್ದು ಶಾಲೆಯ ಮತ್ತೊಂದು ಗರಿಯಾಗಿದೆ.

180 ಕುಟುಂಬ ಹೊಂದಿದ್ದರೂ ಉರ್ದು ಶಾಲೆಯ ಗೋಜಿಗೆ ಹೋಗದೆ ಕನ್ನಡ ಶಾಲಾ ಪ್ರೇಮವನ್ನು ಹೊಂದಿದ್ದಾರೆ.ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಹಾಗೂ ಉರ್ದು ಶಾಲೆಗೆ ದಾಖಲಿಸಿದೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ದಾಖಲಿಸಿ ಅಭಿ ಮಾನ ಮೆರೆದಿದ್ದಾರೆ.

ಉಚಿತ ಗುಣಮಟ್ಟದ ಉಚಿತ ಶಿಕ್ಷಣ ಪುಸ್ತಕ ವಿತರಣೆ ಬಿಸಿಯೂಟ ಯೋಜನೆ ಸೇರಿದಂತೆ ಮಕ್ಕಳಿಗೆ ಮೂಲಭೂತ ಸೌಲಭ್ಯ ಇಲ್ಲೇ ಸಿಗುವು ದರಿಂದ ಬೇರೆ ಶಿಕ್ಷಣವಾಗಲಿ ಬೇರೆ ಶಾಲೆಯಾ ಗಲಿ ಅವಶ್ಯಕತೆ ಇಲ್ಲ. ಮಕ್ಕಳನ್ನು ಕನ್ನಡ ಶಾಲೆ ಯಲ್ಲಿ ಓದಿಸುತ್ತಿರುವುದು ಹೆಮ್ಮೆ ಪಡುತ್ತೇವೆ’ ಎನ್ನುತ್ತಾರೆ ಎಸ್‌ಡಿಎಂಸಿ ಅಧ್ಯಕ್ಷರು

ಸುದ್ದಿ ಸಂತೆ ನ್ಯೂಸ್ ವಿಜಯನಗರ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.