ಕುಂದಾಪುರ –
ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯೂ ಕೋವಿಡ್ ಹಾಗೂ ಇನ್ನಿತರ ಕಾರಣಗಳಿಂದ ಕಳೆದ 3 ವರ್ಷಗಳಿಂದ ನೆನೆಗು ದಿಗೆ ಬಿದ್ದಿದೆ.ಹೀಗಾಗಿ ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆದಿಲ್ಲ.ಇನ್ನೂ ಈ ಒಂದು ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ನಾನು ಎಲ್ಲಾ ರೀತಿಯ ಪ್ರಯತ್ನ ಗಳನ್ನು ಮಾಡಲಾಗುತ್ತಿದೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದರು.
ಕುಂದಾಪೂರದಲ್ಲಿ ಮಾತನಾಡಿದ ಅವರು ಶೀಘ್ರದಲ್ಲೇ ವರ್ಗಾವಣೆ ಪ್ರಕ್ರಿಯೆ ಕುರಿತು ಶೀಘ್ರವೇ ಹೊಸ ಅಧಿಸೂಚ ನೆಯನ್ನು ಪ್ರಕಟಿಸಲಾಗುವುದ ಎಂದರು. ಹೆಮ್ಮಾಡಿಯಲ್ಲಿ ಉಡುಪಿ ಜಿ.ಪಂ.ಸಾರ್ವಜನಿಕ ಶಿಕ್ಷಣ ಇಲಾಖೆ,ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆಯೋಜಿಸಿದ ಶಿಕ್ಷಕ ರೊಂದಿಗಿನ ಸಂವಾದದಲ್ಲಿ ಅವರು ಶಿಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದ ವರ್ಗಾವಣೆ ಸಿಗದೇ ಆತಂಕ ದಲ್ಲಿರುವ ನಾಡಿನ ಶಿಕ್ಷಕರಿಗೆ ಈ ಮೂಲಕ ಶಿಕ್ಷಣ ಸಚಿವರು ಸ್ವಲ್ಪು ನೆಮ್ಮದಿಯ ಸುದ್ದಿಯನ್ನು ನೀಡಿದರು.






















