ಚಿಗರಿ ಬಸ್ ಚಾಲಕರಿಗೆ ಮತ್ತೊಂದು ದೊಡ್ಡ ತಲೆನೋವಾಗಿದೆ ಹಳೆ ಬಸ್ ನಿಲ್ದಾಣ ನಿಲುಗಡೆ – ಅಲ್ಲೂ ನಿಲ್ಲಿಸಬೇಕು ಮುಂದೆಯೂ ನಿಲ್ಲಿಸಬೇಕು ಟೈಮ್ ಹೇಗೆ ಮ್ಯಾನೇಜ್ ಮಾಡಬೇಕು ಡಿಸಿ ಸಾಹೇಬ್ರೆ…..ಅವೈಜ್ಞಾನಿಕವಾದ ಪ್ಲಾನ್ ಗಳನ್ನು ಒಮ್ಮೆ ನೋಡಿ MD ಮೇಡಂ…..

Suddi Sante Desk
ಚಿಗರಿ ಬಸ್ ಚಾಲಕರಿಗೆ ಮತ್ತೊಂದು ದೊಡ್ಡ ತಲೆನೋವಾಗಿದೆ ಹಳೆ ಬಸ್ ನಿಲ್ದಾಣ ನಿಲುಗಡೆ – ಅಲ್ಲೂ ನಿಲ್ಲಿಸಬೇಕು ಮುಂದೆಯೂ ನಿಲ್ಲಿಸಬೇಕು ಟೈಮ್ ಹೇಗೆ ಮ್ಯಾನೇಜ್ ಮಾಡಬೇಕು ಡಿಸಿ ಸಾಹೇಬ್ರೆ…..ಅವೈಜ್ಞಾನಿಕವಾದ ಪ್ಲಾನ್ ಗಳನ್ನು ಒಮ್ಮೆ ನೋಡಿ MD ಮೇಡಂ…..

ಹುಬ್ಬಳ್ಳಿ

ಚಿಗರಿ ಬಸ್ ಚಾಲಕರಿಗೆ ಮತ್ತೊಂದು ದೊಡ್ಡ ತಲೆನೋವಾಗಿದೆ ಹಳೆ ಬಸ್ ನಿಲ್ದಾಣ ನಿಲುಗಡೆ  ಅಲ್ಲೂ ನಿಲ್ಲಿಸಬೇಕು ಮುಂದೆಯೂ ನಿಲ್ಲಿಸಬೇಕು ಟೈಮ್ ಹೇಗೆ ಮ್ಯಾನೇಜ್ ಮಾಡಬೇಕು ಡಿಸಿ ಸಾಹೇಬ್ರೆ…..ಅವೈಜ್ಞಾನಿಕವಾದ ಪ್ಲಾನ್ ಗಳನ್ನು ಒಮ್ಮೆ ನೋಡಿ MD ಮೇಡಂ…..

ಹುಬ್ಬಳ್ಳಿ ಧಾರವಾಡ ಜನತೆಗೆ ಅನುಕೂಲವಾಗಿ ರುವ ಚಿಗರಿ ಸಾರಿಗೆ ಸೇವೆಯನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ದೇಶದಲ್ಲಿಯೇ ಅದು ಮಾದರಿಯಾಗುತ್ತದೆ.ಆದರೆ ಏನು ಮಾಡೊದು ಸರಿಯಾಗಿ ನಿರ್ವಹಣೆ ವ್ಯವಸ್ಥೆ ಇಲ್ಲದ ಪರಿಣಾ ಮವಾಗಿ ಇಂದು ಬಸ್ ಗಳು ಬಹುತೇಕವಾಗಿ ಹಾಳಾಗುತ್ತಿರುವುದು ಒಂದೆಡೆಯಾದರೆ

ಇನ್ನೂ ಇಲ್ಲದ ವ್ಯವಸ್ಥೆಯ ನಡುವೆ ಕರ್ತವ್ಯವನ್ನು ಮಾಡುತ್ತಿರುವ ಚಾಲಕರಿಗೆ ಈಗಷ್ಟೇ ಡಿಸಿಯಾಗಿ ಬಂದ ಆರಂಭದಲ್ಲಿಯೇ ಸಿದ್ದಲಿಂಗಯ್ಯ ಸಾಹೇಬ್ರು ಚಾಲಕರೊಂದಿಗೆ ಸಭೆ ಮಾಡಿ ಏನೇಲ್ಲಾ ಭರವಸೆಯನ್ನು ನೀಡಿ ಬದಲಾವಣೆಯ ನ್ನು ಮಾಡುವ ವಿಚಾರವನ್ನು ಮುಂದಿಟ್ಟರು

ಇದರಿಂದಾಗಿ ಡ್ರೈವರ್ ಗಳು ಕೂಡಾ ಒಳ್ಳೇಯ ದಾಯಿತು ಎಂದುಕೊಂಡು ಸಂತೋಷಪಟ್ಟಿದ್ದರು ಆದರೆ ನಂತರ ಆಗುತ್ತಿರುವುದೇ ಬೇರೆ ಡ್ರೈವರ್ ಗಳಿಂದ ಏನಾದರೂ ಹೆಚ್ಚು ಕಡಿಮೆಯಾದರೆ ಅಮಾನತು ಮಾಡೊದು ಆರಂಭಗೊಂಡಿತು ಇದರೊಂದಿಗೆ ಟೈಮ್ ಇಲ್ಲದ ಟೈಟ್ ಶೆಡ್ಯೂಲ್ ನ ನಡುವೆ ಸಧ್ಯ ಮತ್ತೊಂದು ತಲೆನೋವಿನ ಕೆಲಸ ಆರಂಭಗೊಂಡಿದೆ.ಹೌದು ಹುಬ್ಬಳ್ಳಿ ರೇಲ್ವೆ ನಿಲ್ದಾಣ ದಿಂದ ಬಸ್ ಗಳು ಹೊರಟರೆ ಅಲ್ಲಿಂದ ಮಹಾನಗರ ಪಾಲಿಕೆ ನಿಲ್ದಾಣ ನಂತರ ಸಧ್ಯ ಹಳೆ ಬಸ್ ನಿಲ್ದಾಣದಲ್ಲಿ ನಿಂತುಕೊಂಡು ಜನರನ್ನು ಹತ್ತಿಕೊಂಡು ಬರುವಂತೆ ಸೂಚನೆಯನ್ನು ನೀಡಲಾಗಿದೆ.

ಇದಾದ ನಂತರ ಮತ್ತೆ ಮುಂದೆ ಮತ್ತೊಂದು ನಿಲ್ದಾಣ ಹೀಗೆ ಗೊಂದಲದ ಮತ್ತೊಂದು ನಿಲ್ದಾಣವನ್ನು ಡಿಸಿ ಸಾಹೇಬ್ರು ಮಾಡಿದ್ದು ಹೊಸದಾಗಿ ಆರಂಭಗೊಂಡಿರುವ ಹಳೆ ಬಸ್ ನಿಲ್ದಾಣದಲ್ಲಿ ಕಾಟಾಚಾರಕ್ಕೆ ಡಬ್ಬಿಯನ್ನು ಮಾಡಿ ಅಲ್ಲಿಗೆ ಬಂದು ನಿಂತುಕೊಂಡು ಹೋಗುವ ವ್ಯವಸ್ಥೆಯನ್ನು ಮಾಡಲಾಗಿದ್ದು ಇದರಿಂದಾಗಿ ಮತ್ತೊಂದು ದೊಡ್ಡ ತಲೆನೋವಿನ ಕೆಲಸ ಆರಂಭವಾಗಿದ್ದು ಇದರೊಂದಿಗೆ ಇಲ್ಲಿ ಕೆಲವರು ಟಿಕೆಟ್ ಇಲ್ಲದೆ ಹತ್ತುತ್ತಿರುವ ವಿಚಾರ ಬೆಳಕಿಗೆ ಬಂದಿದ್ದು ಇದನ್ನು ಪರೀಕ್ಷೆ ಮಾಡುವವರು ಯಾರು ಕೇಳುವವರು ಯಾರು ಇಂತಹ ಅವೈಜ್ಞಾನಿಕವಾಗಿರುವ ದಿನಕ್ಕೊಂದು ಹೊಸ ಹೊಸ ಪ್ಲಾನ್ ಗಳನ್ನು

ಜಾರಿ ಮಾಡಿ ಡ್ರೈವರ್ ಗಳಿಗೆ ಮತ್ತೊಂದು ತಲೆನೋವು ತಂದಿಟ್ಟಿದ್ದು ಇದನ್ನೇಲ್ಲ ಸುಧಾರಣೆ ಮಾಡ್ರಿ ಡಿಸಿ ಸಾಹೇಬ್ರೆ ನಿಮ್ಮ ಒಳ್ಳೊಳ್ಳೇಯ ಕೆಲಸ ಕಾರ್ಯಗಳಿಗೆ ಸದಾ ನಾವು ನಿಮ್ಮ ಜೊತೆ ಇರುತೇವೆ ಈ ಹಿಂದೆ ನಿಮ್ಮ ಜಾಗೆಯಲ್ಲಿ ಕರ್ತವ್ಯ ವನ್ನು ಮಾಡಿ ಒಳ್ಳೇಳ್ಳೆಯ ಹೆಸರನ್ನು ಮಾಡಿ ಇಲಾಖೆಗೆ ಗೌರವ ತಂದಿದ್ದಾರೆ ಇನ್ನಾದರೂ ಒಮ್ಮೆ ನೋಡಿ ಇದರತ್ತ ಗಮನಹರಿಸಿ ಸಾಬೇಹ್ರೆ.|….

 

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.