ಇನ್ನು ಮುಂದೆ ವಾರದಲ್ಲಿ 6 ದಿನ ಮಕ್ಕಳಿಗೆ ಸಿಗಲಿಗೆ ಮೊಟ್ಟೆ – 1 ರಿಂದ 10 ನೇ ತರಗತಿ ಮಕ್ಕಳಿಗೆ ಸಿಗಲಿದೆ ಮೊಟ್ಟೆ…..ಒಡಂಬಡಿಕೆಗೆ ಸಹಿ ಹಾಕಿದ ನಾಡದೊರೆ……

Suddi Sante Desk
ಇನ್ನು ಮುಂದೆ ವಾರದಲ್ಲಿ 6 ದಿನ ಮಕ್ಕಳಿಗೆ ಸಿಗಲಿಗೆ ಮೊಟ್ಟೆ – 1 ರಿಂದ 10 ನೇ ತರಗತಿ ಮಕ್ಕಳಿಗೆ ಸಿಗಲಿದೆ ಮೊಟ್ಟೆ…..ಒಡಂಬಡಿಕೆಗೆ ಸಹಿ ಹಾಕಿದ ನಾಡದೊರೆ……

ಬೆಂಗಳೂರು

ಇನ್ನು ಮುಂದೆ ವಾರದಲ್ಲಿ 6 ದಿನ ಮಕ್ಕಳಿಗೆ ಸಿಗಲಿಗೆ ಮೊಟ್ಟೆ – 1 ರಿಂದ 10 ನೇ ತರಗತಿ ಮಕ್ಕಳಿಗೆ ಸಿಗಲಿದೆ ಮೊಟ್ಟೆ ಒಡಂಬಡಿಕೆಗೆ ಸಹಿ ಹಾಕಿದ ನಾಡದೊರೆ……

ಇನ್ನು ಮುಂದೆ ವಾರದಲ್ಲಿ 6 ದಿನ ಸರ್ಕಾರಿ ಶಾಲಾ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಮೊಟ್ಟೆ ಸಿಗಲಿದೆ.ಮಕ್ಕಳಲ್ಲಿನ ಅಪೌಷ್ಠಿಕತೆಯನ್ನು ಹೊಗಲಾಡಿಸುವ ಉದ್ದೇಶದಿಂದ ಮಹತ್ವದ ಯೋಜನೆಯನ್ನು ಆರಂಭ ಮಾಡಲಾಗಿದೆ.

ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಇನ್ನು ಮುಂದೆ ವಾರದ 6 ದಿನವೂ ಮೊಟ್ಟೆ ಸಿಗಲಿದೆ. ಈ ಕುರಿತು ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದೊಂದಿಗೆ 1ರಿಂದ 10ನೇ ತರಗತಿ ಮಕ್ಕಳಿಗೆ ವಾರದ 6 ದಿನವೂ ಮುಂದಿನ 3 ವರ್ಷಗಳ ಕಾಲ ಮೊಟ್ಟೆ ಸೇರಿದಂತೆ ಪೌಷ್ಟಿಕ ಆಹಾರ ನೀಡುವ ಒಪ್ಪಂದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿ ಹಾಕಿದರು.

ಮೊದಲು ವಾರಕ್ಕೆ ಒಂದು ನೀಡುತ್ತಿದ್ದ ಮೊಟ್ಟೆ ಯನ್ನು ಕಳೆದ ವರ್ಷದಿಂದ 2ಕ್ಕೇರಿಸಲಾಗಿತ್ತು. ಇನ್ನು ಮುಂದೆ 6 ಮೊಟ್ಟೆಗಳನ್ನು ನೀಡಲಾಗು ತ್ತದೆ.55.50 ಲಕ್ಷ ಮಕ್ಕಳಿಗೆ ಇದರ ಪ್ರಯೋಜನ ಲಭಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾ ಮಯ್ಯ ಹೇಳಿದರು.ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಲು ಆರೋಗ್ಯ ಪೂರ್ಣವಾಗಿರುವುದು ಅವಶ್ಯಕ.

ಉಪಾಹಾರವಿಲ್ಲದೆ ಶಾಲೆಗೆ ಬಂದು ಮಧ್ಯಾಹ್ನ ದವರೆಗೆ ಉಪವಾಸ ಇರುವ ಮಕ್ಕಳನ್ನು ನೋಡಿ ದ್ದೇನೆ.ಈ ಹಿನ್ನೆಲೆಯಲ್ಲಿ ಈ ಒಂದು ಕ್ರಮವನ್ನು ಕೈಗೊಳ್ಳಲಾಗಿದೆ ಎಂದರು.ಇನ್ನೂ ಮಕ್ಕಳು ವೈಜ್ಞಾನಿಕ ಮತ್ತು ವೈಚಾರಿಕ ಶಿಕ್ಷಣ ಹೊಂದಿ ವಿಕಾಸಗೊಂಡರೆ ಮಾತ್ರ ಸಮಾಜಮುಖಿಗಳಾಗಿ ಬೆಳೆಯಲು ಸಾಧ್ಯ.

ಜ್ಞಾನ ವಿಕಾಸವಾಗಬೇಕು ಎಂದಾದರೆ ಅವರು ಆರೋಗ್ಯ ಪೂರ್ಣವಾಗಿರಬೇಕು. ಬಡವರು, ಶ್ರೀಮಂತರು, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಎಲ್ಲಾ ಮಕ್ಕಳು ಗುಣಮಟ್ಟದ ಸಮಾನ ಶಿಕ್ಷಣ ಪಡೆಯಬೇಕು.

ಜಾತ್ಯತೀತರಾಗಿ ಬೆಳೆಯುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದರು.ಅಜೀಂ ಜೀ ಪ್ರತಿಷ್ಠಾನದ ಅಧ್ಯಕ್ಷ ಅಜೀಂ ಪ್ರೇಮ್‌ ಜೀ ಮಾತನಾಡಿ,ಮೊಟ್ಟೆ ನೀಡಲು ಸರಕಾರದೊಂದಿಗೆ ಸಹಭಾಗಿ ಆಗುತ್ತಿರುವುದು ಗೌರವದ ಕೆಲಸ ಎಂದು ನಾನು ಭಾವಿಸಿದ್ದೇನೆ.ನನ್ನ ತವರು ರಾಜ್ಯಕ್ಕೆ ಸೇವೆ ಸಲ್ಲಿಸಲು ನಾನು ಬದ್ಧನಾಗಿದ್ದೇನೆ.

ಕರ್ನಾಟಕ ಸರಕಾರದೊಂದಿಗೆ ನಮ್ಮದು 25 ವರ್ಷಗಳ ರಚನಾತ್ಮಕ ಸಹಭಾಗಿತ್ವವಿದೆ ಎಂದರು.ಈ ಒಂದು ಸಂದರ್ಭದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಯಾಸ್ಮಿನ್‌ ಪ್ರೇಮ್‌ ಜೀ, ಶಾಸಕ ರಿಜ್ವಾನ್‌ ಅರ್ಷದ್‌, ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್‌ ಕುಮಾರ್‌, ಪ್ರಾಥಮಿಕ ಶಾಲಾ ಆಯುಕ್ತೆ ಬಿ.ಬಿ. ಕಾವೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.