ಜಮ್ಮು ಕಾಶ್ಮೀರ –
ಇದೊಂದು ನನ್ನ ಸಣ್ಣ ಪ್ರಯತ್ನ ಎಂದು ಧಾರವಾಡದ ವಿಜೇತಕುಮಾರ ಹೊಸಮಠ ಬೈಕ್ ನಲ್ಲಿ ಜನ ಜಾಗೃತಿ ಯಾತ್ರೆ ಕೈಗೊಂಡಿದ್ದಾರೆ
ಹೌದು ನಾನು ವಿಜೇತಕುಮಾರ ಹೊಸಮಠ,ಧಾರವಾಡದ ಯುವಕ (29)ಸದ್ಯ KLE ಯುನಿವರ್ಸಿಟಿ ಹುಬ್ಬಳ್ಳಿಯಲ್ಲಿ ಕೆಲಸ ಮಾಡುತ್ತಿದ್ದು ಕೊವಿಡ್ 19 ಕುರಿತಾಗಿ ಜನ ಜಾಗೃತಿ ಮೂಡಿಸುವ ಉದ್ದೇಶದಿಂದಾಗಿ ಮತ್ತೊಮ್ಮೆ ಬೈಕ್ ನಲ್ಲಿ ಭಾರತದ ಕಿರೀಟವಾದ ಕಾಶ್ಮೀರದಿಂದ ಕನ್ಯಾಕುಮಾರಿ ಯವರೆಗೂ ಕೊರೊನಾ ಜಾಗೃತಿ ಜಾಥಾ ಮಾಡುವ ಸಣ್ಣ ಪ್ರಯತ್ನ ಹಮ್ಮಿಕೊಂಡು ಯಾತ್ರೆ ಆರಂಭ ಮಾಡಿದ್ದಾರೆ
ಕೊವಿಡ್ 19 ಕುರಿತಾಗಿ ಜನ ಜಾಗೃತಿ ಮೂಡಿಸಲು ಭಾರತದ ಕಿರೀಟವಾದ ಕಾಶ್ಮೀರದಿಂದ ಕನ್ಯಾಕುಮಾರಿ ಯವರೆಗೂ ಕೊರೊನಾ ಜಾಗೃತಿ ಜಾಥಾ ಮಾಡುವ ಸಣ್ಣ ಪ್ರಯತ್ನ ಹಮ್ಮಿಕೊಂಡಿದ್ದು ಈ ಒಂದು ಬೈಕ್ ನ ಯಾತ್ರೆ ಈಗಾಗಲೇ ಜಮ್ಮು ಕಾಶ್ಮೀರ ತಲುಪಿದೆ ಯಶಸ್ವಿಯಾಗಿ ನಡೆಯುತ್ತಿದೆ
ಹೌದು ನನ್ನ ಪ್ರಯಾಣ ಸುಮಾರು 6000ಕಿ ಮೀ ಇದ್ದು ನಾನು 97 CC ಸಾಮರ್ಥ್ಯವುಳ್ಳ ಬೈಕ್ ನ್ನು ತೆಗೆದುಕೊಂಡು ಹೋಗಿದ್ದಾರೆ ದಾರಿಯುದ್ದಕ್ಕೂ ಹಳ್ಳಿ,ನಗರಗಳ ಮೂಲಕ ಅಲ್ಲಿನ ಜನರಲ್ಲಿ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ
ನನ್ನ ಪಯಣದ ಅವಧಿಯಲ್ಲಿ ಖರ್ಚಾಗುವ ಹಣ ಸರಿ ದೂಗಿಸಲು Crowd Founding ಮೂಲಕ ಸಹೃದಯದ ಗೆಳೆಯರು,ಆಸಕ್ತರ ನೆರವನ್ನು ಪಡೆಯುವ ಯೋಜನೆ ರೂಪಿಸಿಕೊಂಡಿದ್ದಾರೆ
ಈ ಹಿಂದೆ 2018 ರ ಲೋಕಸಭೆ ಚುನಾವಣೆ ಅಂಗವಾಗಿ ಧಾರವಾಡದಿಂದ ಕನ್ಯಾಕುಮಾರಿಯವರೆಗೂ ಇದೆ 97 CC ಬೈಕ್ ಅಲ್ಲಿ ಸುಮಾರು 2800km ಯಶಸ್ವಿ ಜಾಥಾ ಪೂರ್ಣಗೊಳಿಸಿದ್ದರು ಇವರು
ಸದ್ಯದ ಈ ಜಾಗೃತಿಯ ಅಭಿಯಾನಕ್ಕೆ ಹಾಗೂ ಈ ಸಣ್ಣ ಪ್ರಯತ್ನಕ್ಕೆ ಈಗಾಗಲೇ ವಿಜೇತನಿಗೆ ಆಪ್ತರು ಗೆಳೆಯರು ಸೇರಿದಂತೆ ಹಲವರು ನೆರವಾಗಿದ್ದು ಹೀಗಾಗಿ ಒಳ್ಳೆಯ ಉದ್ದೇಶದಿಂದ ಕೈಗೊಂಡ ಯಾತ್ರೆ ಯಶಸ್ವಿಯಾಗಿ ನಡೆಯುತ್ತಿದೆ





























