ಹುಬ್ಬಳ್ಳಿ –
ಮತಾಂತರ ವಿರುದ್ದದ ಹೋರಾಟದಲ್ಲಿ ನಿನ್ನೆ ಪೊಲೀಸ್ ಠಾಣೆಯೆದುರು ಹಿಂದೂಪರ ಸಂಘಟನೆಗಳ ಪ್ರತಿಭಟನೆ ಯಲ್ಲಿ ಹಿಂದೂ ಪರ ಸಂಘಟಟನೆಯ ಮುಖಂಡರೊ ಬ್ಬರು ನಾಲಿಗೆಯನ್ನು ಹರಿ ಬಿಟ್ಟಿದ್ದಾರೆ.
ಹೌದು ಪ್ರತಿಭಟನೆ ವೇಳೆ ನಾಲಿಗೆಯನ್ನು ಹರಿ ಬಿಟ್ಟಿರುವ ಮುಖಂಡರು ಪೊಲೀಸ್ ಅಧಿಕಾರಿ ವಿರುದ್ದ ಕೀಳಾಗಿ ಮಾತನಾಡಿದ್ದಾರೆ.ಹುಬ್ಬಳ್ಳಿ-ಧಾರವಾಡ ಡಿಸಿಪಿ ವಿರುದ್ದ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ.ಐಪಿಎಸ್ ಅಧಿಕಾರಿಯಾಗಿರೋ ರಾಮರಾಜನ್ ವಿರುದ್ದ ಅವಾಚ್ಯ ಪದಬಳಕೆ ಕೇಳಿ ಬಂದಿದೆ.
ಕ್ರೈಸ್ತ ಧರ್ಮಕ್ಕೆ ಮತಾಂತರ ಆರೋಪದ ಬೆನ್ನಲ್ಲೇ ನಿನ್ನೆ ಪ್ರತಿಭಟನೆ ಮಾಡಲಾಗಿತ್ತು. ಆರೋಪಿಗಳ ಪರವಾಗಿ ಡಿಸಿಪಿ ಇದ್ದಾರೆಂದು ಆರೋಪಿಸಿದ್ದ ಹಿಂದೂಪರ ಸಂಘಟನೆ ಮುಖಂಡರು ಕಾರ್ಯಕರ್ತರು ಶಾಸಕ ಅರವಿಂದ ಬೆಲ್ಲದ ನೇತ್ರತ್ವದಲ್ಲಿ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಿದ್ದರು.
ಭಾಷಣದ ಭರದಲ್ಲಿ ಸರ್ಕಾರಿ ಅಧಿಕಾರಿ ವಿರುದ್ದ ಅವಾಚ್ಯ ಪದ ಬಳಕೆ ಮಾಡಲಾಗಿದೆ. ಹರಾಮ್ ಕೋರ್ ಡಿಸಿಪಿ ಅಂತ ಬೈದಿದ್ದಲ್ಲದೇ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಮುಖಂಡರೊಬ್ಬರು. ಹಿಂದೂ ಮುಖಂಡನ ಭಾಷಣದ ವೀಡಿಯೋ ಸಾಮಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ