ದಸರಾ ರಜೆಯ ಮಾರ್ಗಸೂಚಿ ಬಿಡುಗಡೆ – ದಸರಾ ರಜೆಯ ಹೊಸದೊಂದು ಮಾಹಿತಿ…..

Suddi Sante Desk
ದಸರಾ ರಜೆಯ ಮಾರ್ಗಸೂಚಿ ಬಿಡುಗಡೆ – ದಸರಾ ರಜೆಯ ಹೊಸದೊಂದು ಮಾಹಿತಿ…..

ಬೆಂಗಳೂರು

ದಸರಾ ಹಬ್ಬದ ಆಚರಣೆಯ ಸಿಧದತೆಯ ನಡುವೆ ಸಾಂಸ್ಕೃತಿ ನಗರಿ ಮೈಸೂರಿನಲ್ಲಿ 2024ರ ದಸರಾ ಮಹೋತ್ಸವಕ್ಕೆ ಅಕ್ಟೋಬರ್ 3ರಂದು ಚಾಲನೆ ದೊರೆಯಲಿದೆ ಅಕ್ಟೋಬರ್ 12ರ ಶನಿವಾರ ವಿಶ್ವವಿಖ್ಯಾತ ಜಂಬೂ ಸವಾರಿ ನಡೆಯಲಿದ್ದು ದಸರಾಗೆ ತೆರೆ ಬೀಳಲಿದೆ.ಇನ್ನೂ ಇತ್ತ ರಾಜ್ಯದ ಸರ್ಕಾರಿ ಶಾಲೆಗಳ ದಸರಾ ರಜೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಅಕ್ಟೋಬರ್ 3ರಿಂದ ಅಕ್ಟೋಬರ್ 20ರ ತನಕ ರಾಜ್ಯದ ಸರ್ಕಾರಿ ಶಾಲೆಗಳಿಗೆ ದಸರಾ ರಜೆಗಳು ಇರುತ್ತದೆ ಅಕ್ಟೋಬರ್ 21ರಿಂದಲೇ ತರಗತಿಗಳು ಪುನಃ ಆರಂಭವಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಅಕ್ಟೋಬರ್‌ 2ರಂದು ಗಾಂಧಿ ಜಯಂತಿ ಆಚರಣೆ ಬಳಿಕ ದಸರಾ ರಜೆಗಳು ಆರಂಭವಾಗಲಿದೆ.

ಕರ್ನಾಟಕದ ಎಲ್ಲಾ ಸರ್ಕಾರಿ ಶಾಲೆಗಳು, ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಶಾಲೆಗಳಿಗೆ ದಸರಾ ರಜೆ ಇರುತ್ತದೆ ಅಕ್ಟೋಬರ್ 20ರ ತನಕ ದಸರಾ ರಜೆ ಇರಲಿದ್ದು ಅಕ್ಟೋಬರ್ 21ರ ಸೋಮವಾರ ರಜೆ ಮುಗಿದು, ತರಗತಿಗಳು ಆರಂಭವಾಗುತ್ತದೆ.ಶಿಕ್ಷಣ ಇಲಾಖೆ ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಶಾಲೆಗಳ ದಸರಾ ರಜೆ ವೇಳಾಪಟ್ಟಿಯನ್ನು ಪ್ರಕಟಿಸುತ್ತದೆ.

ದಸರಾ ಹತ್ತಿರವಾಗಿರುವುದರಿಂದ ಮತ್ತೊಮ್ಮೆ ದಸರಾ ರಜೆ ಕುರಿತು ಪೋಷಕರಿಗೆ, ಶಾಲೆಗಳಿಗೆ ಮಾಹಿತಿಯನ್ನು ನೀಡಲಾಗಿದೆ.ದಸರಾ ರಜೆ ಸಂದರ್ಭದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಪ್ರವಾಸ ಕೈಗೊಳ್ಳುತ್ತಾರೆ. ಆದ್ದರಿಂದ ವಿವಿಧ ದಸರಾ ಪ್ಯಾಕೇಜ್‌ಗಳನ್ನು ಸಹ ಘೋಷಣೆ ಮಾಡಲಾಗು ತ್ತದೆ. ಆದ್ದರಿಂದ ದಸರಾ ರಜೆಯ ದಿನಾಂಕ ತಿಳಿದುಕೊಳ್ಳಲು ಪೋಷಕರು, ವಿದ್ಯಾರ್ಥಿಗಳು ಕಾದು ಕುಳಿತಿರುತ್ತಾರೆ.

ದಸರಾ ರಜೆಗಳು ಮುಗಿಯುತ್ತಿದ್ದಂತೆಯೇ ಅರ್ಧ ವಾರ್ಷಿಕ ಪರೀಕ್ಷೆಗಳು ನಡೆಯುತ್ತವೆ.ಕೆಲವು ವರ್ಷ ಮೊದಲು ಘೋಷಣೆ ಮಾಡಿದ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ದಸರಾ ರಜೆಯನ್ನು ಕಡಿತ ಮಾಡಿರು ವುದು ಸಹ ಇದೆ. ಆದರೆ ಈ ಬಾರಿ ಯಾವುದೇ ಬದಲಾವಣೆ ಇಲ್ಲ. ಮೊದಲು ನಿಗದಿ ಮಾಡಿದಂತೆ ದಸರಾ ರಜೆಗಳು ಇರಲಿವೆ. ಇದರಿಂದ ವಿದ್ಯಾರ್ಥಿ ಗಳು, ಶಿಕ್ಷಕರು ಸಂತಸಗೊಂಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.