ಮಾದರಿಯಾಗಿದೆ ಇಂದಿರಾನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ – ಪಕ್ಕದಲ್ಲೇ ಖಾಸಗಿ ಶಾಲೆ ಇದ್ದರೂ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಈ ಸರ್ಕಾರಿ ಶಾಲೆಯ ಸಾಧನೆ ಹಿಂದೆ ಇದೆ ಶಿಕ್ಷಕರ ಪರಿಶ್ರಮ ಟೊಂಕಕಟ್ಟಿ ನಿಂತಿದ್ದಾರೆ SDMC ಮತ್ತು ಗ್ರಾಮಸ್ಥರು

Suddi Sante Desk
ಮಾದರಿಯಾಗಿದೆ ಇಂದಿರಾನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ – ಪಕ್ಕದಲ್ಲೇ ಖಾಸಗಿ ಶಾಲೆ ಇದ್ದರೂ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಈ ಸರ್ಕಾರಿ ಶಾಲೆಯ ಸಾಧನೆ ಹಿಂದೆ ಇದೆ ಶಿಕ್ಷಕರ ಪರಿಶ್ರಮ ಟೊಂಕಕಟ್ಟಿ ನಿಂತಿದ್ದಾರೆ SDMC ಮತ್ತು ಗ್ರಾಮಸ್ಥರು

ತುರುವೇಕೆರೆ

ಸಾಮಾನ್ಯವಾಗಿ ಸರ್ಕಾರಿ ಶಾಲೆಗಳು ಕೂಡಾ ಕಾಲಕ್ಕೆ ತಕ್ಕಂತೆ ಬದಲಾವಣೆ ಯಾಗಿ ಖಾಸಗಿ ಶಾಲೆಗಳನ್ನು ಮೀರಿಸುವಂತೆ ಹೈಟೆಕ್ ಆಗಿ ಮಾದರಿಯಾಗಿವೆ ಎನ್ಮೊದಕ್ಕೆ ಇಂದಿರಾನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸಾಕ್ಷಿ ಹೌದು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳನ್ನು ಆರ್ಷಿಸುವ ಮೂಲಕ ತಾಲ್ಲೂಕಿಗೆ ಮಾದರಿ ಶಾಲೆ ಎನಿಸಿಕೊಂಡಿದೆ.

1897ರಲ್ಲಿ ಆರಂಭಗೊಂಡ ಈ ಶಾಲೆ ತಾ‌ಲ್ಲೂಕಿ ನಲ್ಲಿ 250 ಸರ್ಕಾರಿ ಪ್ರಾಥಮಿಕ ಪಾಠ ಶಾಲೆಗಳ  ಎಲ್.ಕೆ.ಜಿಯಿಂದ 8ನೇ ತರಗತಿವರೆಗೆ 750 ಮಕ್ಕಳ ದಾಖಲಾತಿ ಹೊಂದಿರುವ ತಾಲ್ಲೂಕಿನ ಏಕೈಕ ಶಾಲೆ ಎಂಬ ಹೆಗ್ಗಳಿಕೆ ಪಡೆದಿದೆ.ಈ ಶಾಲೆ ಯಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಮಾಧ್ಯಮ ಇದೆ. ಈ ಶಾಲೆಯ ಕೂಗಳತೆ ದೂರ ದಲ್ಲೇ ಖಾಸಗಿ ಶಾಲೆಗಳಿದ್ದರೂ ಹೆಚ್ಚಿನ ಸಂಖ್ಯೆ ಯಲ್ಲಿ ಪೋಷಕರು ಒಳ್ಳೆಯ ಇಂಗ್ಲಿಷ್ ಮತ್ತು ಉಚಿತ ಶಿಕ್ಷಣ ಸಿಗುತ್ತದೆಂದು ಇಲ್ಲಿಗೆ ಸೇರಿಸಲು ಒಲವು ತೋರಿಸಿದ್ದಾರೆ ಇದನ್ನು ಇಲ್ಲಿನ ಶಿಕ್ಷಕರು ಸಾಧನೆ ಮೂಲಕ ತೋರಿಸಿಕೊಟ್ಟಿದ್ದಾರೆ.

2014ರಲ್ಲಿ ಸಿ.ಸತೀಶ್ ಕುಮಾರ್ ಮುಖ್ಯಶಿಕ್ಷಕ ರಾಗಿ ಈ ಶಾಲೆಗೆ ಬಂದಾಗ ಇಲ್ಲಿ ಕೇವಲ 150 ಮಕ್ಕಳು ದಾಖಲಾಗಿದ್ದರು. ಅವರ ಮತ್ತು ಶಾಲೆಯ ಸಮಸ್ತ ಶಿಕ್ಷಕರ ಕ್ರಿಯಾಶೀಲತೆಯಿಂದ ಈಗ 750ಕ್ಕೆ ಹೆಚ್ಚಿದೆ. 23 ಪದವೀದರ ಶಿಕ್ಷಕರಿ ದ್ದಾರೆ.ಶಾಸಕ ಎಂ.ಟಿ.ಕೃಷ್ಣಪ್ಪ ಅವರು ಈ ಶಾಲೆ ಯನ್ನು ದತ್ತು ಪಡೆದಿದ್ದಾರೆ. ಲಯನ್ಸ್, ರೋಟರಿ ಕ್ಲಬ್, ಹಿರಿಯ ವಿದ್ಯಾರ್ಥಿಗಳು, ಎಸ್‌ಡಿಎಂಸಿ, ಪೋಷಕರು ಟೊಂಕಕಟ್ಟಿ ನಿಂತಿದ್ದಾರೆ.

ಟಿ.ವಿ, ಪ್ರೊಜೆಕ್ಟರ್ ಆಧಾರಿತ ಸ್ಮಾರ್ಟ್ ಕ್ಲಾಸ್, ಸ್ಲೋಕನ್ ಇಂಗ್ಲಿಷ್‌ ಕಲಿಕೆ, ಆಧುನಿಕ ಬೋಧ ನೋಪಕರಣ ಬಳಕೆ, ಸುಸಜ್ಜಿತ ಗ್ರಂಥಾಲಯ, ಶುದ್ಧ ಕುಡಿಯುವ ನೀರಿನ ಸೌಲಭ್ಯ, ತಂತ್ರಜ್ಞಾನ ಹಾಗೂ ಚಟುವಟಿಕೆ ಆಧಾರಿತ ಕಲಿಕೆ, ವ್ಯಕ್ತಿತ್ವ ವಿಕಸನದ ತರಬೇತಿ, ಆಟೋಟ ಮತ್ತು ಪೀಠೋ ಪಕರಣ, ಉತ್ತಮ ಕೊಠಡಿ ಮತ್ತು ಆಸನದ ವ್ಯವಸ್ಥೆ ಇದೆ.

ಸುಧಾರಿತ ಶೌಚಾಲಯ, ಶಾಲಾ ಪರಿಸರ, ಮಕ್ಕಳ ಕಲಿಕೆಗೆ ಮತ್ತು ಪೋಷಕರಿಗೆ ಸೂಕ್ತ ಮಾರ್ಗ ದರ್ಶನ ಮತ್ತು ಸಲಹೆ ನೀಡುವುದು, ವಿವಿಧ ಸಂಘ ಸಂಸ್ಥೆಗಳು ನೀಡುವ ಉಚಿತ ಕಲಿಕಾ ಸಾಮಗ್ರಿ,ವ್ಯವಸ್ಥಿತ ಪ್ರಯೋಗಾಲಯ, ಬೇಸಿಕ್ ಕಂಪ್ಯೂಟರ್ ತರಗತಿಗಳು ಪೋಷಕರು ಹಾಗೂ ಮಕ್ಕಳ ಗಮನ ಸೆಳೆದಿದೆ.

ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಅಂಬೇಡ್ಕರ್, ನವೋದಯ ವಸತಿ ಶಾಲೆಗೆ ದಾಖಲಾತಿ ಹಾಗೂ 8ನೇ ತರಗತಿಗೆ ನಡೆಸುವ ಎನ್‌ಎಂಎಸ್‌ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿ ನೀಡುತ್ತಾ ಬರುತ್ತಿರುವುದ ರಿಂದ ಪ್ರತಿ ವರ್ಷವೂ ಈ ಶಾಲೆಯಿಂದ 50ಕ್ಕೂ ಹೆಚ್ಚು ಮಕ್ಕಳು ಆಯ್ಕೆಯಾಗುತ್ತಿರುವುದು ಶಾಲೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದಕ್ಕೆ ಹಿಡಿದ ಕೈಗನ್ನಡಿಯಂತಿದೆ.

ಸುದ್ದಿ ಸಂತೆ ನ್ಯೂಸ್ ತುರುವೆಕೆರೆ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.