ದಾವಣಗೇರೆ –
ದಾವಣಗೇರಿಯಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಶಿಕ್ಷಕರೊಬ್ಬರು ಕುಸ್ತಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.ಹೌದು ದಾವಣಗೆರೆಯಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಪಂದ್ಯಾಟದಲ್ಲಿ ಸಹ ಶಿಕ್ಷಕರಾದ ಬಸವರಾಜ ಹೇಳವಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಗರಮಡವು ಇವರು 82 ಕೆಜಿ ಕುಸ್ತಿ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿದ್ದಾರೆ.
ಇದರೊಂದಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಶಿಕ್ಷಣ ಇಲಾಖೆಯ ಮತ್ತು ಶಿಕ್ಷಕರ ಕೀರ್ತಿ ಪತಾಕೆಯನ್ನು ಹೆಚ್ಚಿಸಿದ್ದಾರೆ.ಶಿರಹಟ್ಟಿ ತಾಲ್ಲೂಕಿಗೆ ಅಷ್ಟೆ ಅಲ್ಲ ಗದಗ ಜಿಲ್ಲೆಗೆ ಹಾಗೂ ಶಿಕ್ಷಣ ಇಲಾಖೆಗೆ ಮೆರಗು ತಂದಿದ್ದಾರೆ. ಇವರಿಗೆ ಕೋಗನೂರ ಹಾಗೂ ಸೂರಣಗಿ ಸಿಆರ್‌ಸಿ ಶಿಕ್ಷಕರ ಪರವಾಗಿ ಹಾಗೇ ರಾಜ್ಯದ ಎಲ್ಲಾ ಶಿಕ್ಷಕರು ತುಂಬು ಹೃದಯದ ಅಭಿನಂದನಗೆಳನ್ನು ಹೇಳಿದ್ದಾರೆ.