ರಾಯಚೂರು –
ಮೂರನೇಯ ಹಂತದಲ್ಲಿ ಇಂದಿನಿಂದ ರಾಜ್ಯದಲ್ಲಿ ಶಾಲೆ ಗಳು ಆರಂಭವಾಗಿವದ್ದು ಎಲ್ಲೇಡೆ ಸಡಗರ ಸಂಭ್ರಮದಿಂದ ಮಕ್ಕಳನ್ನು ಶಾಲೆಯಲ್ಲಿ ಅದ್ದೂರಿಯಾಗಿ ಬರಮಾಡಿಕೊಳ್ಳ ಲಾಗುತ್ತಿದ್ದು ಇತ್ತ ರಾಯಚೂರಿನಲ್ಲಿ ಶಾಲಾ ಆರಂಭದ ಮೊದಲ ದಿನವೇ ಶಾಲೆಗೆ ಶಿಕ್ಷಕರು ಬಂದಿಲ್ಲ
ಹೌದು ಶಿಕ್ಷಕರಿಗಾಗಿ ಶಾಲೆಯ ಮುಂದೆ ಕಾದು ಕುಳಿತ ಮಕ್ಕಳ ಚಿತ್ರಣ ಕಂಡು ಬಂದಿತು.ರಾಯಚೂರಿನ ಮುನ್ನೂರು ವಾಡಿ ಕಿರಿಯ ಪ್ರಾಥಮಿಕ ಶಾಲೆಗೆ ಬಾರದ ಶಿಕ್ಷಕರು ಹೀಗಾಗಿ ಶಾಲೆಯ ಮುಂದೆ ಶಿಕ್ಷಕರಿಗಾಗಿ ಕಾಯುತ್ತಾ ಕುಳಿತಿರುವ ದೃಶ್ಯ ಗಳು ಕಂಡು ಬಂದವು
ಸಮಯ 9:40 ಆದರೂ ಶಾಲೆಯ ಮುಂದೆ ಸಾಕಷ್ಟು ಪ್ರಮಾಣದಲ್ಲಿ ಮಕ್ಕಳು ಬಂದರೆ ಇತ್ತ ಶಿಕ್ಷಕರು ಬಾರದಿರೊ ದು ಕಂಡು ಬಂದಿತು ಹೀಗಾಗಿ ಹೀಗ್ಯಾಕೆ ಎಂಬ ಬೇಸರದ ಮಾತುಗಳು ಪೋಷಕರಿಂದ ಕೇಳಿ ಬಂದವು
ಶಿಕ್ಷಕರಿಗಿಂತ ಮುಂಚೆಯೇ ಶಾಲೆಗೆ ಬಂದಿದ್ದಾರೆ ಮಕ್ಕಳು. ಶಾಲೆಯ ಬಾಗಿಲಲ್ಲಿ ಶಿಕ್ಷಕರಿಗಾಗಿ ಕಾದು ಕುಳಿತ ಮಕ್ಕಳು ಶಾಲೆ ಸ್ವಚ್ಛ ಗೊಳಿಸದೆ ಯಾವುದೇ ಸಿದ್ದತೆ ಮಾಡಿಕೊಳ್ಳದೇ ಬಣಗುಡುತ್ತಿರುವ ಚಿತ್ರಣ ಕಂಡು ಬಂದಿತು.

























