ಧಾರವಾಡ –
ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರ ಪುತ್ರಿ ಈಗ ಬಾಲ ಲೇಖಕಿಯಾಗಿದ್ದಾರೆ.ಹೌದು ನಗರದ JSS ಶಿಕ್ಷಣ ಸಂಸ್ಥೆಯ ಶ್ರೀಮಂಜುನಾಥೇಶ್ವರ ಕೇಂದ್ರೀಯ ವಿದ್ಯಾಲ ಯದ 8ನೇ ತರಗತಿ ಅಧ್ಯಯನ ಮಾಡುತ್ತಿದ್ದಾರೆ ಈ ವಿದ್ಯಾರ್ಥಿನಿ.
ಹೌದು ಓದಿನೊಂದಿಗೆ ಬಾಲ ಲೇಖಕಿ ಶೃದ್ಧಾ ಎಸ್. ಹಿರೇಮಠ ಈಗ ಪುಸ್ತಕವೊಂದನ್ನು ಬರೆದಿದ್ದಾರೆ ಚೊಚ್ಚಲು ಕೃತಿ ವೈಜ್ಞಾನಿಕ ಚಿಂತನೆಯ ಕಾಲ್ಪನಿಕ ಮಕ್ಕಳ ಕಾದಂಬರಿ ‘ಆ್ಯಸ್ಟ್ರೋಕಿಡ್ಸ್’ ಬಿಡುಗಡೆ ಸಮಾರಂಭ ಅಕ್ಟೋಬರ್ ೨೯ ರಂದು ಸಂಜೆ ೬.೩೦ ಗಂಟೆಗೆ ನಗರದ ಆಲೂರ್ ವೆಂಕಟ ರಾವ್ ಸಭಾಭವನದಲ್ಲಿ ಜರುಗಲಿದೆ.
ಹಿರಿಯ ಸಾಹಿತಿ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಕೃತಿ ಬಿಡುಗಡೆಗೊಳಿಸಲಿದ್ದಾರೆ.ವ್ಯಕ್ತಿತ್ವ ವಿಕಸನದ ಸಂಪನ್ಮೂಲ ವ್ಯಕ್ತಿ ಮಹೇಶ ಮಾಶಾಳ ಪುಸ್ತಕ ಪರಿಚಯ ಮಾಡುವರು. ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಬಿ. ಗುಡಸಿ ಸಮಾರಂಭದ ಅಧ್ಯಕ್ಷತೆ ವಹಿಸುವರು
ಶೃದ್ಧಾ ಪ್ರಾಥಮಿಕ ತರಗತಿಗಳಿಂದಲೇ ನಿರಂತರ ಹೊಸ ಓದನ್ನು ರೂಢಿಸಿಕೊಂಡಿದ್ದು ತಾನು ಓದಿದ್ದನ್ನು ಮೆಲಕು ಹಾಕುವ ಮೂಲಕ ತನ್ನದೇ ಆದ ಹೊಸ ಚಿಂತನೆಯನ್ನು ತಮ್ಮೊಂದಿಗೆ ಹಂಚಿಕೊಂಡು ವಿಶ್ಲೇಷಣೆಗೆ ತೆರೆದುಕೊಳ್ಳು ತ್ತಾಳೆ.ಅವಳ ವಿಸ್ತೃತ ಆಲೋಚನೆಗಳನ್ನು ನೀರೆರೆದು ಪೋಷಿಸಿದ್ದು ಅದೀಗ ಫಲ ನೀಡಿದ್ದು ತಮಗೆ ಅಪಾರ ಖುಷಿಯನ್ನು ಒದಗಿಸಿದೆ ಎಂದು ಶೃದ್ಧಾಳ ಪಾಲಕರಾದ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಹಾಗೂ ಅನುರಾಧಾ ಹಿರೇಮಠ ಹೇಳುತ್ತಾರೆ.
ಬೆಂಗಳೂರಿನ ಪ್ರಸಿದ್ಧ ಸಪ್ನಾ ಬುಕ್ ಹೌಸ್‌ನ ಪ್ರಕಾಶನ ಅಂಗ ಸಂಸ್ಥೆಯಾದ ‘ಸಪ್ನಾಇಂಕ್ ಈ ಕೃತಿಯನ್ನು ಪ್ರಕಟಿಸಲಿದೆ
‘ಆ್ಯಸ್ಟ್ರೋಕಿಡ್ಸ್’ ಕೃತಿಯ ಕುರಿತು ಮಕ್ಕಳ ಕಾಲ್ಪನಿಕ ಜಗತ್ತು ಬಹು ವಿಸ್ತೃತವಾದದ್ದು ಅದು ತನ್ನದೇ ಆದ ವಿಶಿಷ್ಟ ವಿಚಾರಗಳನ್ನು ಹರಡುತ್ತವೆ. ‘ಆ್ಯಸ್ಟ್ರೋಕಿಡ್ಸ್’ ಕೃತಿಯ ಮೂಲಕ ಶೃದ್ಧಾ ಹಿರೇಮಠ ತನ್ನದೇ ಆದ ವೈಜ್ಞಾನಿಕ ಚಿಂತನೆಯ ಕಾಲ್ಪನಿಕ ಜಗತ್ತನ್ನು ಅನಾವರಣಗೊಳಿಸಿದ್ದಾರೆ.ಬಾನಂಗಳದ ಅಂತರ್ ತಾರೆಗಳ ನಡುವಿನ ಸಂಚಾರಕ್ಕೆ ಪೂರಕವಾರ ‘ಇಂಟರ್ ಸ್ಟಿಲರ್ ರಾಕೆಟ್ ಡಿನೋ-೨.೦’ದಿಂದ ಒಂದು ತಂಡವಾಗಿ ಬಾಹ್ಯಾಕಾಶದಲ್ಲಿ ಪ್ರಯಾಣಿಸುತ್ತಿರುತ್ತಾರೆ. ಆ ಸಂದರ್ಭ ದಲ್ಲಿ ಎಂಜಿನ್ ದುರಸ್ತಿಯಿಂದಾಗಿ ಕ್ಷೀರ ಪಥಕ್ಕೆ ಹೋಗ ಬೇಕಾಗಿದ್ದ ಈ ರಾಕೆಟ್ ಪ್ಲೇಟಂ ಎನ್ನುವ ಗ್ಯಾಲೆಕ್ಸಿಗೆ ಹೋಗಿ ತಲುಪುತ್ತದೆ.ಇಲ್ಲಿಯವರೆಗೂ ಕೇವಲ ಭೂಮಿಯೊಂದೇ ಮಾನವ ವಾಸಕ್ಕೆ ಯೋಗ್ಯವೆಂದು ಭಾವಿಸಿದ್ದ ತಂಡಕ್ಕೆ ಅಲ್ಲಿ ಭೂಮಿಯಷ್ಟೇ ಸುಂದರವಾದ ಇನ್ನೊಂದು ಗ್ರಹ ಕಾಣುತ್ತದೆ. ಅದರ ಹೆಸರು ಸ್ವೀಟಾರ್ಕೈಲ್ (ಇದು ಪ್ಲೇಟಿಯಂ ಗ್ಯಾಲೆಕ್ಸಿಯಲ್ಲಿನ ಗ್ರಹ).
ಈ ಪ್ಲೇಟಿಯಂ ಗ್ಯಾಲೆಕ್ಸಿಯಲ್ಲಿ ಏಲಿಯನ್ ಸಮೂಹಗಳು ಹಾಗೂ ತಿನ್ನಲು ಯೋಗ್ಯವಾದ ಸಿಹಿ ಪದಾರ್ಥಗಳಿಂದ ತುಂಬಿತ್ತು.ಅದರಲ್ಲಿನ ಏಲಿಯನ್‌ಗಳು ನಮ್ಮನ್ನು ಗುರುತಿ ಸುತ್ತಿದ್ದರೂ ಸಮೀಪ ಬರುವುದಕ್ಕೆ ಮಾತ್ರ ಭಯಗೊಂಡಿ ದ್ದವು.ಕಾರಣ ಇಷ್ಠೇ ಭೂಮಿಯು ವ್ಯಾಪಕ ಮಾಲಿನ್ಯ, ನ್ಯೂಕ್ಲಿಯರ್ ತ್ಯಾಜ್ಯ ಹಾಗೂ ಭಾವನಾತ್ಮಕ ತಾರತಮ್ಯ ಗಳಿಂದ ಕೂಡಿದ್ದಕ್ಕಾಗಿ ಅವು ಕೂಡ ನೊಂದುಕೊಂಡಿದ್ದವು. ಸ್ವೀಟಾರ್ಕೈಲ್ ಗ್ರಹವು ಸೂರ್ಯನಿಂದ ೩ನೇ ಕಕ್ಷೆಯಲ್ಲಿ ಸುತ್ತುತ್ತಿತ್ತು.ಇದು ಹೊಳೆಯುವಂತಹ ಕಲ್ಲುಸಕ್ಕರೆ, ಚಾಕಲೇಟ್ ನದಿ,ಮಿಠಾಯಿ ಕಟ್ಟಡಗಳು,ಲಾಲಿಪಪ್ ಹಾಸಿಗೆ,ಮಿಂಟ್ ಸ್ಮಾರಕಗಳಿಂದ ಕೂಡಿದ್ದು ಇದು ಶಾಂತಿ ಹಾಗೂ ಸಾಮರಸ್ಯವನ್ನು ಒಳಗೊಂಡಿತ್ತು.
ಕ್ರಿ.ಶ. ೧೯೫೬ರಲ್ಲಿ ಜಿಲ್ಲಿಯಂ ಎನ್ನುವ ಏಲಿಯನ್ ಆಕ್ರಮಿಸಿಕೊಂಡು ಸಿಹಿಪದಾರ್ಥದಿಂದ ತುಂಬಿದ್ದ ಈ ಗ್ರಹದ ಅರ್ಧಭಾಗವನ್ನು ಜಂಕ್ ಫುಡ್‌ಗಳಿಂದ ಪರಿವರ್ತಿ ಸಲಾಗಿತ್ತು. ಆಗ ಈ ಗ್ರಹದಲ್ಲಿ ಪಿಜ್ಜಾ, ಫ್ರೆಂಚ್ ಫ್ರೈ ಫಾರೆಸ್ಟ್ ಸೂಪ್ ಪೂಲ್ ಇಂತಹ ವಸ್ತುಗಳನ್ನು ಹೊಂದಿತ್ತು.ಈ ಏಲಿಯನ್‌ಗಳು ಮಾನವರಂತೆ ಭಾವನೆ ಗಳನ್ನು ಹೊಂದಿದ್ದವು.ಅವುಗಳು ಸಹ ಪ್ರೀತಿ,ಕೋಪ, ದ್ವೇಷ,ಅಸೂಯೆ,ದುಃಖ ಇವುಗಳನ್ನು ವ್ಯಕ್ತಪಡಿಸುತ್ತಿ ದ್ದವು. ಅವುಗಳ ಭಾವನೆಗಳನ್ನು ಹಣೆಯ ಮೇಲೆ ಬೆಳಗುತ್ತಿದ್ದ ವಿವಿಧ ಬಣ್ಣಗಳ ಚೆಂಡಿನ ಮೂಲಕ ಗುರುತಿಸಬಹುದಾಗಿತ್ತು.ಭಾವನೆಗಳನ್ನು ವ್ಯಕ್ತಪಡಿಸದ ಕೆಲವು ಏಲಿಯನ್‌ಗಳು ತಮ್ಮ ಹಣೆಯನ್ನು ವಿಶೇಷ ಟೋಪಿಯಿಂದ ಮುಚ್ಚಿಕೊಂಡಿದ್ದವು.
ವರದಿ ಎಲ್ ಐ ಲಕ್ಕಮ್ಮನವರ ಶಿಕ್ಷಕರು