ರಾಜ್ಯ ಸರ್ಕಾರಿ ನೌಕರರ ಕನಕಪುರ ತಾಲ್ಲೂಕು ಸಂಘದ ಹೊಸ ಟೀಮ್ – ಹೊಸ ತಂಡದ ಕಂಪ್ಲೀಟ್ ಮಾಹಿತಿ…..

Suddi Sante Desk
ರಾಜ್ಯ ಸರ್ಕಾರಿ ನೌಕರರ ಕನಕಪುರ ತಾಲ್ಲೂಕು ಸಂಘದ ಹೊಸ ಟೀಮ್ – ಹೊಸ ತಂಡದ ಕಂಪ್ಲೀಟ್ ಮಾಹಿತಿ…..

ಕನಕಪುರ

ರಾಜ್ಯ ಸರ್ಕಾರಿ ನೌಕರರ ತಾಲ್ಲೂಕು ಸಂಘದ ನಿರ್ದೇಶಕರ ಆಯ್ಕೆಗಾಗಿ ನಗರದ ಶಿಕ್ಷಕರ ಭವನ ಮತ್ತು ಸರ್ಕಾರಿ ನೌಕರರ ಭವನದಲ್ಲಿ ಚುನಾವಣೆ ನಡೆಯಿತು.ರಾಜ್ಯ ಸರ್ಕಾರಿ ನೌಕರರ ತಾಲ್ಲೂಕು ಸಂಘಕ್ಕೆ ಎಲ್ಲಾ ಇಲಾಖೆಗಳಿಂದ 27 ನಿರ್ದೇಶಕರ ಆಯ್ಕೆ ಮಾಡಬೇಕಿದ್ದುಅದರಲ್ಲಿ 19 ನಿರ್ದೇಶಕರ ಅವಿರೋಧವಾಗಿ ಆಯ್ಕೆಯಾಗಿದ್ದರು.ಉಳಿದಂತೆ 8 ನಿರ್ದೇಶಕರನ್ನು 6 ಇಲಾಖೆಗಳಿಂದ ಆಯ್ಕೆ ಮಾಡಬೇಕಿದ್ದು ಅದಕ್ಕಾಗಿ ಚುನಾವಣೆ ನಡೆಯಿತು

ಚುನಾವಣೆಯಲ್ಲಿ ಪಶುಪಾಲನಾ ಇಲಾಖೆಯಿಂದ ಡಾ.ಗಿರೀಶ್.ಎಸ್, ಪ್ರಾಥಮಿಕ ಶಿಕ್ಷಣ ಇಲಾಖೆ ಯಿಂದ ಚಂದ್ರಶೇಖರ್.ಎಚ್.ವಿ, ರಾಘವೇಂದ್ರ ಸ್ವಾಮಿ.ಎಸ್, ಶ್ರೀನಾಥ್.ಟಿ, ಪ್ರೌಢ ಶಿಕ್ಷಣ ಇಲಾಖೆ ಯಿಂದ ಪ್ರಸನ್ನ ಕುಮಾರ್, ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ತಮ್ಮಣ್ಣ.ಕೆ, ಅರಣ್ಯ ಇಲಾಖೆಯಿಂದ ರಮೇಶ್.ಎಂ. ಯಂಕುಂಚಿ, ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯಿಂದ ಶಿವಲಿಂಗೇಗೌಡ.ಎಚ್‌.ಪಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಚುನಾವಣೆಯು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆ ವರೆಗೆ ನಡೆಯಿತು.ನಾಲ್ಕು ಗಂಟೆ ನಂತರ ಮತ ಎಣಿಕೆ ಕಾರ್ಯವನ್ನು ನಡೆಸಿ ಫಲಿತಾಂಶವನ್ನು ಪ್ರಕಟಿಸಲಾಯಿತು.ರೇಷ್ಮೆ ಇಲಾಖೆ ನಿವೃತ್ತ ಅಧಿಕಾರಿ ಚಿಕ್ಕೆಂಪೇಗೌಡ ಚುನಾವಣಾ ಅಧಿಕಾರಿ ಯಾಗಿ, ಶಿಕ್ಷಣ ಇಲಾಖೆಯ ನಿವೃತ್ತ ಮುಖ್ಯ ಶಿಕ್ಷಕ ಸಿ.ಗಂಗಾಧರಯ್ಯ ಸಹಾಯಕ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಸುದ್ದಿ ಸಂತೆ ನ್ಯೂಸ್ ಕನಕಪುರ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.