ಬೆಂಗಳೂರು –
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಾಡಿನಾದ್ಯಂತ ಅಪಾರ ಅಭಿಮಾನಿಗಳ ಬಳಗ ಹೊಂದಿರೋ ಸ್ಟಾರ್ ನಟ. ಹತ್ತಾರು ವಿಭಿನ್ನ ಸಿನಿಮಾಗಳಲ್ಲಿ ನಟಿಸಿ ರಂಜಿಸ್ತಿರೋ ಅಪ್ಪುಗೆ ಅಭಿಮಾನಿಗಳು ಪ್ರೀತಿಯಿಂದ ಪವರ್ ಸ್ಟಾರ್, ರಾಜರತ್ನ, ಕಲಾ ಸಾರ್ವಭೌಮ ಸೇರಿದಂತೆ ಕೆಲವೊಂದು ಬಿರುದು ಪಡೆದುಕೊಂಡಿದ್ದಾರೆ.ಈ ನಡುವೆ 46 ವರ್ಷಗಳಿಗೆ ಕನ್ನಡ ಕಲಾಭಿಮಾನಿಗಳಿಂದ ಭೌತಿಕವಾಗಿ ಪುನೀತ್ ರಾಜ್ ಕುಮಾರ್ ದೂರವಾಗಿದ್ದಾರೆ.
ಹೌದು 1975 ರ ಮಾರ್ಚ್ 17 ರಂದು ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಪಾರ್ವತಮ್ಮ ದಂಪತಿಯ ಕಿರಿಯ ಮಗನಾಗಿ ಪುನೀತ್ ರಾಜ್ ಕುಮಾರ್ ಜನಿಸಿದ್ದರು. ಪುನೀತ್ 6 ವರ್ಷದವರಿದ್ದಾಗ ಅವರ ಕುಟುಂಬ ಬೆಂಗಳೂರಿಗೆ ತೆರಳಿತು.10ನೇ ವಯಸ್ಸಿನವರೆಗೂ ತಂದೆ ಜೊತೆ ಹಾಗೂ ಸಹೋದರಿ ಪೂರ್ಣಿಮಾ ಅವರ ಸಿನಿಮಾ ಸೆಟ್‌ಗೆ ಹೋಗುತ್ತಿದ್ದರು.
ಡಿಸೆಂಬರ್ 1 ,1999 ರಂದು ಅಶ್ವಿನಿ ರೇವಂತ್ ಜೊತೆ ವಿವಾಹವಾಗಿದ್ದರು ಪುನೀತ್ -ಅಶ್ವಿನಿ ರೇವಂತ್ ದಂಪತಿಗೆ ದ್ರಿತಿ ಹಾಗೂ ವಂದಿತಾ ಎಂಬ ಇಬ್ಬರು ಪುತ್ರಿಯರಿದ್ದಾರೆ. ಕನ್ನಡ ಸಿನಿ ರಂಗಕ್ಕೆ ಬಾಲ ನಟರಾಗಿ ಪಾದಾರ್ಪಣೆ ಮಾಡಿದ್ದ ಪುನೀತ್ ಅವರು ಇದುವರೆಗೂ 29 ಸಿನಿಮಾ ಗಳಲ್ಲಿ ನಾಯಕ ನಟರಾಗಿ ನಟಿಸಿದ್ದಾರೆ.ಅಲ್ಲದೇ ಹಿನ್ನೆಲೆ ಗಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಬಾಲ್ಯದಿಂದಲೇ ಸಿನಿ ಜೀವನ ಆರಂಭಿಸಿದ್ದ ಪುನೀತ್ ರಾಜ್ ಕುಮಾರ್ ತಂದೆ ಡಾ.ರಾಜ್ ಅಭಿನಯದ ಚಿತ್ರ ಗಳಲ್ಲಿ ಬಾಲ್ಯ ನಟನಾಗಿ ಅಭಿನಯಿಸಿದ್ದರು.ಬಾಲ ನಟರಾಗಿ ವಸಂತ ಗೀತ(1980)ಭಾಗ್ಯದಾತ(1981) ಬೆಟ್ಟದ ಹೂವು(1985)ಚಲಿಸುವ ಮೋಡಗಳು(1982), ಎರಡು ನಕ್ಷತ್ರಗಳು(1983)ಪ್ರೇಮದ ಕಾಣಿಕೆ,ಭಾಗ್ಯವಂತ, ಶಿವ ಮೆಚ್ಚಿದ ಕಣ್ಣಪ್ಪ,ಪರಶುರಾಮ್,ಯಾರಿವನು,ಭಕ್ತ ಪ್ರಹ್ಲಾದ,ವಸಂತ ಗೀತಾ ಸೇರಿದಂತೆ ಹಲವು ಸಿನಿಮಾ ಗಳಲ್ಲಿ 1989ರ ವರೆಗೂ ನಟಿಸಿದ್ದರು.
2002ರಲ್ಲಿ ನಾಯಕ ನಟನಾಗಿ ಮೊದಲ ಸಿನಿಮಾ ಅಪ್ಪು ಬಿಡುಗಡೆ
2003ರಲ್ಲಿ ಅಭಿ, 2004ರಲ್ಲಿ ವೀರ ಕನ್ನಡಿಗ, ಮೌರ್ಯ
2005ರಲ್ಲಿ ಆಕಾಶ್ ಮತ್ತು ನಮ್ಮ ಬಸವ
2006ರಲ್ಲಿ ಅಜಯ್, 2007ರಲ್ಲಿ ಅರಸು, ಮಿಲನ ರಿಲೀಸ್
2008ರಲ್ಲಿ ಬಿಂದಾಸ್ ಮತ್ತು ವಂಶಿ
2009ರಲ್ಲಿ ರಾಜ್, ಪೃಥ್ವಿ, 2010ರಲ್ಲಿ ರಾಮ್, ಜಾಕಿ ಮೂವೀ
2011ರಲ್ಲಿ ಹುಡುಗರು, ಪರಮಾತ್ಮ
2012ರಲ್ಲಿ ಅಣ್ಣ ಬಾಂಡ್ ಮತ್ತು ಯಾರೇ ಕೂಗಾಡಲಿ ಬಿಡುಗಡೆ
2014 ವರ್ಷದಲ್ಲಿ ಪುನೀತ್ರ ನಿನ್ನಿಂದಲೇ
2015ರಲ್ಲಿ ಮೈತ್ರಿ, ಪವರ್ ಸ್ಟಾರ್, ಧೀರ ರಣ ವಿಕ್ರಮ ತೆರೆಗೆ
2016ರಲ್ಲಿ ಚಕ್ರವ್ಯೂಹ ಮತ್ತು ದೊಡ್ಮನೆ ಹುಡುಗ
2017ರಲ್ಲಿ ರಾಜಕುಮಾರ ಮತ್ತು ಅಂಜನಿ ಪುತ್ರ
2019ರಲ್ಲಿ ನಟಸಾರ್ವಭೌಮ
2020ರಲ್ಲಿ ಬಿಡುಗಡೆಯಾದ ಯುವರತ್ನ ಅವರ ಕೊನೆಯ ಚಿತ್ರ
ಸದ್ಯ ಬಿಡುಗಡೆಗೆ ಸಿದ್ಧವಾಗಿದ್ದ ಬಹುನಿರೀಕ್ಷಿತ ಜೇಮ್ಸ್ ಸಿನಿಮಾ
ಅಪ್ಪುಗೆ ಒಲಿದಿದ್ದ ಪ್ರಶಸ್ತಿಗಳು…
1985ರಲ್ಲಿ ಬಿಡುಗಡೆಯಾಗಿದ್ದ ಬೆಟ್ಟದ ಹೂವು ಚಿತ್ರದ ಅಭಿನಯಕ್ಕೆ ಬಾಲನಟರಾಗಿ ರಾಷ್ಟ್ರ ಚಲನಚಿತ್ರ ಪ್ರಶಸ್ತಿ
ಚಲಿಸುವ ಮೊಡಗಳು, ಎರಡು ಕನಸುಗಳು,ಮಿಲನ, ಜಾಕಿ ಸಿನಿಮಾಗಳ ನಟನೆಗಾಗಿ ಕರ್ನಾಟಕ ರಾಜ್ಯ ಉತ್ತಮ ನಟ ಪ್ರಶಸ್ತಿ
ಹುಡುಗರು,ಯಾರೇ ಕೂಗಾಡಲಿ,ರಣ ವಿಕ್ರಮ, ರಾಜಕುಮಾರ,ನಟಸಾರ್ವಭೌಮ ಸಿನಿಮಾಗಳಿಗೆ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವೀ ಅವಾರ್ಡ್ನಲ್ಲಿ ಅತ್ಯುತ್ತಮ ಪ್ರಶಸ್ತಿ ಲಭಿಸಿದೆ.ಬೆಟ್ಟದ ಹೂ, ಅರಸು, ಹುಡುಗರು, ರಣವಿಕ್ರಮ, ರಾಜಕುಮಾರ ಸಿನಿಮಾಗಳಿಗೆ ಫಿಲ್ಮ್ ಫೇರ್ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳು ಪುನೀತ್ ರಾಜ್ಕುಮಾರ್ ಅವರಿಗೆ ಲಭಿಸಿದೆ.