ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ – ನೌಕರರು ಎಲ್ಲಾ ಮಾಹಿತಿಗಳನ್ನು ಹೇಗೆ ಪಡೆಯಬಹುದು ಗೊತ್ತಾ…..

Suddi Sante Desk
ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ – ನೌಕರರು ಎಲ್ಲಾ ಮಾಹಿತಿಗಳನ್ನು ಹೇಗೆ ಪಡೆಯಬಹುದು ಗೊತ್ತಾ…..

ಬೆಂಗಳೂರು

ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿಗಳು ನೌಕರರು ಹೆಚ್‌ಆರ್‌ಎಂಎಸ್‌ನ ನೌಕರರ ಸ್ವಯಂ ಸೇವೆ ಅಪ್ಲಿಕೇಶನ್ ನಲ್ ನೋಂದಣಿ ಮಾಡಿಕೊಂಡು, ಸರ್ಕಾರಿ ನೌಕರರು ತಮ್ಮ ವೇತನ ಪ್ರಮಾಣ ಪತ್ರ,ರಜೆ ಬಾಕಿ, ಸಾಲ ಮುಂಗಡ,ಕಡಿತದ ವಿವರಗಳು,ವಿಮೆ,ಇ-ಸೇವಾ ಪುಸ್ತಕ,HRMS ಟಿಕೆಟ್,ಪ್ರಧಾನ ಮಂತ್ರಿ ಜೀವನ ಜ್ಯೋತಿ ಬೀಮ ಯೋಜನೆ (ಪಿಎಂಜೆಜೆಬಿವೈ),ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ ಬಿವೈ) ಮುಂತಾದ ಮಾಹಿತಿ ಪಡೆಯಬಹುದು.

ರಾಜ್ಯ ಸರ್ಕಾರಿ ನೌಕರರಿಗೆ ಅನುಕೂಲವಾಗಲು ಹೆಚ್‌ಆರ್ ಎಂಎಸ್‌ ನಿರ್ದೇಶನಾಲಯವು ನೌಕರರ ಸ್ವಯಂ ಸೇವೆ ಪೋರ್ಟಲ್ ನ್ನು ಸಿದ್ಧಪಡಿಸಿದೆ. ಸದರಿ ಪೋರ್ಟಲ್ ಬಳಕೆದಾರರ ಸ್ನೇಹಿಯಾಗಿದ್ದು ಈ ಕೆಳ ಕಂಡಂತೆ ಹಲವು ರೀತಿಯ ಸೌಲಭ್ಯಗಳನ್ನು ಪಡೆಯ ಬಹುದಾಗಿದೆ.

1) ವೇತನ ಚೀಟಿ ಸರ್ಕಾರಿ ನೌಕರರು ತಮ್ಮ ಕೆಜಿಐಡಿ ಸಂಖ್ಯೆಯ ಮೂಲಕ ನೋಂದಣಿಯಾಗಿ ನೇರವಾಗಿ ತಮ್ಮ ವೇತನ ಚೀಟಿಯನ್ನು ಅನ್ನು ಪಡೆಯಬಹುದು. ರಜೆ ಬಾಕಿ ನೌಕರರು ತಮ್ಮ ರಜೆ ಬಾಕಿಯನ್ನು ವೀಕ್ಷಿಸ ಬಹುದು. ಸಾಲ ಮುಂಗಡ ನೌಕರರು ಸಾಲ ಮುಂಗಡದ ವಿವರಗಳನ್ನು ವೀಕ್ಷಿಸಬಹುದು.ಕಡಿತದ ವಿವರಗಳು ನೌಕರರು ತಮ್ಮ ಕಡಿತಗಳಾದ ಆದಾಯ ತೆರಿಗೆ (IT)ಕೆಜಿಐಡಿ, ಸಾಮಾನ್ಯ ಭವಿಷ್ಯ ನಿಧಿ (GPF), ಎನ್‌ಪಿಎಸ್, ಮುಂತಾದವುಗಳನ್ನು ವೀಕ್ಷಿಸಬಹುದು.

ವಿಮೆ ನೌಕರರು ತಮ್ಮ ವಿಮೆಗಳಾದ ಕೆಜಿಐಡಿ, ಜಿಪಿಎಪ್ ಮುಂತಾದ ವಿವರಗಳನ್ನು ಸಹ ವೀಕ್ಷಿಸಬಹುದು.ಇ-ಸೇವಾ ಪುಸ್ತಕ ನೌಕರರ ಸೇವಾ ವಹಿಯನ್ನು ವಿದ್ಯುನ್ಮಾನ ಸೇವಾ ವಹಿ (ESR) ಯಲ್ಲಿ ಅಪ್‌ಲೋಡ್ ಮಾಡಿ ಪಬ್ಲಿಷ್ ಮಾಡಿದ ಇ-ಸೇವಾ ಪುಸ್ತಕವನ್ನು ಈ ಪರದೆಯಲ್ಲಿ ವೀಕ್ಷಿಸಬಹುದು.

ಹೆಚ್‌ಆರ್‌ಎಂಎಸ್ ಟಿಕೆಟ್  ನೌಕರರು ಹೆಚ್‌ಆರ್‌ ಎಂಎಸ್‌ನಲ್ಲಿ ಸೃಜಿಸಿದ ಟಿಕೇಟ್‌ನ ವಿವರಗಳನ್ನು ವೀಕ್ಷಿಸಬಹುದು.ಪ್ರಧಾನ ಮಂತ್ರಿ ಜೀವನ ಜ್ಯೋತಿ ಬೀಮ ಯೋಜನೆ (ಪಿಎಂಜೆಜೆಬಿವೈ) ಪಿ ಎಂ ಜೆ ಜೆ ಬಿ ವೈ ಮತ್ತು ಪಿ ಎಂ ಎಸ್ ಬಿ ವೈ ಯೋಜನೆಗಳಲ್ಲಿ ಸಿಬ್ಬಂದಿ ಗಳು ನೋಂದಣಿಯಾದ ವಿವರಗಳನ್ನು ವೀಕ್ಷಿಸಬಹುದು ಹಾಗೂ ಮುದ್ರಿಸಬಹುದು.

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ ಬಿವೈ)ಪ್ರತಿ ಸಿಬ್ಬಂದಿಗಳು ಹಾಗೂ ಡಿಡಿಓಗಳು ಈ ಯೋಜನೆಯನ್ನು ಖಚಿತವಾಗಿ ಪಡೆದುಕೊಳ್ಳುವುದು ಹಾಗು ಇಎಸ್‌ಎಸ್ ಪೋರ್ಟಲ್‌ನಲ್ಲಿ ಈ ದಾಖಲೆ ಯನ್ನು ನವೀಕರಿಸುವುದು ಅವರ ಜವಾಬ್ದಾರಿ ಯಾಗಿರುತ್ತದೆ

ದಯವಿಟ್ಟು ತಮ್ಮ ನಗದು ರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಫಲಾನುಭವಿಗಳನ್ನು ಅಪ್ಡಟ್ ಮಾಡಿದ್ದಲ್ಲಿ ಮಾತ್ರ ಯೋಜನೆಯ ಸದುಪ ಯೋಗವನ್ನು ಸಿಬ್ಬಂದಿಗಳು ಹಾಗೂ ಅವರ ಕುಟುಂ ಬವು ಪಡೆಯಬಹುದು ಕೆಜಿಐಡಿ ವಿಮಾ ಪತ್ರಗಳ ಪರಿಶೀಲನೆ

ಈ ಪರದೆಯಲ್ಲಿ ಸಿಬ್ಬಂದಿಗಳು ತಮ್ಮ ಕೆಜಿಐಡಿ ವಿಮಾ ಪತ್ರಗಳ ಹೆಚ್‌ಆರ್‌ಎಂಎಸ್‌ ನಲ್ಲಿನ | ಮಾಹಿತಿ ಹಾಗೂ ಕೆಜಿಐಡಿಯಲ್ಲಿನ ಮಾಹಿತಿಯನ್ನು ವೀಕ್ಷಿಸಬಹುದು. ಸಿಬ್ಬಂದಿಗಳು ಎರಡು ಅಂಕಣಗಳನ್ನು ಪರಿಶೀಲಿಸಿ ತಾಳ ಮಾಡಿ ಸರಿಯಾಗಿದ್ದಲ್ಲಿ ಸರಿಯಾಗಿ ಕಂಡು ಬಂದಿದೆ ಎಂಬ ಚೆಕ್ ಬಾಕ್ಸ್‌ ಅನ್ನು ಕ್ಲಿಕ್ ಮಾಡಿ ಉಳಿಸಬೇಕು (Save) ಒಂದು ವೇಳೆ ಯಾವುದಾದರೂ ವಿಮಾ ಮಾಹಿತಿಯು ತಪ್ಪಾಗಿದ್ದಲ್ಲಿ ಅದನ್ನು ಸೂಚಿಸಬಹು ದಾಗಿದೆ.

ಅದಲ್ಲದೇ ಯಾವುದಾದರೂ ವಿಮಾ ವಿವರಗಳು ಬಿಟ್ಟುಹೋದಲ್ಲಿ ಅದನ್ನು ಸೇರಿಸಬಹುದು. ಕೊನೆ ಯದಾಗಿ ಎಲ್ಲಾ ಮಾಹಿತಿಯನ್ನು ಪರಿಶೀಲಿಸಿದ ನಂತರ ಇ-ಸಹಿ ಯನ್ನು ಮಾಡಬೇಕು.

ರಾಜ್ಯ ಸರ್ಕಾರದ ಪ್ರಮುಖ ಜಾಲತಾಣವಾದ ಕೆಜಿಐಡಿ, ಮಹಾಲೇಖಪಾಲರು-ಸಾಭನಿ, ಖಜಾನೆ-2, ಎನ್‌ಎಸ್‌ ಡಿಎಲ್, ಮಹಾಲೇಖಪಾಲರು-ಜಿಇ, ಹೆಚ್‌ಆರ್‌ ಎಂಎಸ್ ಅಪ್ಲಿಕೇಷನ್ ಗಳ ಪ್ರಮುಖ ಲಿಂಕ್‌ಗಳನ್ನು ಒದಗಿಸಲಾಗಿದೆ.

ಮುಂದುವರೆದು, ಉಲ್ಲೇಖಿತ ಸರ್ಕಾರಿ ಆದೇಶದಲ್ಲಿ, ರಾಜ್ಯ ಸರ್ಕಾರದ ಸೇವೆಯಲ್ಲಿ ಕರ್ತವ್ಯ ನಿರ್ವಹಿಸು ತ್ತಿರುವ ಎಲ್ಲಾ ಅಧಿಕಾರಿ/ಸಿಬ್ಬಂದಿ ವರ್ಗದವರು ಪ್ರಧಾನ ಮಂತ್ರಿ ಜನ ಸುರಕ್ಷಾ ಯೋಜನೆಯ ವ್ಯಾಪ್ತಿಗೆ ಬರುವ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ), ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್‌ಬಿವೈ) ಯೋಜನೆಗಳಡಿ ಮಾಡಿಸಿದ ವಿಮಾ ಪಾಲಿಸಿಗಳ ಮಾಹಿತಿಯನ್ನು HRMS-ESS Login ನಲ್ಲಿ ಭರ್ತಿ ಮಾಡಲು ಸಹ ಈಗಾಗಲೇ ತಿಳಿಸಿರುತ್ತಾರೆ.

ಆದುದರಿಂದ ರಾಜ್ಯ ಸರ್ಕಾರದ ಪ್ರತಿ ಸಿಬ್ಬಂದಿಗಳ ತಮ್ಮದೇ ಆದ ವೇತನ ಚೀಟಿ, ರಜೆ ವಿವರಗಳು ಮತ್ತು ಕಡಿತದ ಸಾರಾಂಶವನ್ನು ಡೌನ್‌ಲೋಡ್ ಮಾಡಿ ಕೊಳ್ಳುವ ಸದುಪಯೋಗವನ್ನು ಪಡೆದುಕೊಳ್ಳಲು HRMSESS Login (https://hrmsess.karnataka.gov.in) ដ មួយ ជ. ಹಾಗೂ ಪ್ರತಿ ಸಿಬ್ಬಂದಿಗಳು ESS ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡು, ಸದರಿ ಸೌಲಭ್ಯವನ್ನು ಪಡೆಯುತ್ತಿರುವ ಬಗ್ಗೆ ಡಿಡಿಓರವರು ಖಚಿತಪಡಿಸಿ ಕೊಳ್ಳಲು ಈ ಮೂಲಕ ತಿಳಿಸಲಾಗಿದೆ

ಹಾಗೂ ತಮ್ಮ ಎಲ್ಲಾ ಉದ್ಯೋಗಿಗಳು ಮೇ-2024 ರ ಮೊದಲು ಈ ಪೋರ್ಟಲ್‌ನಲ್ಲಿ ನೋಂದಾಯಿಸಲು ಅನುವು ಮಾಡಿಕೊಡುವ ಜವಾಬ್ದಾರಿ ಡಿಡಿಓರ ವರದಾಗಿರುತ್ತದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.