ದಡಗುಂಡಿ –
ಇತ್ತೀಚಿಗಷ್ಟೇ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಯಿಂದಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗು ವುದು ಎಂದು ಹೇಳಿದ್ದ ಶಿಕ್ಷಣ ಸಚಿವರು ಈಗ ಅತಿಥಿ ಶಿಕ್ಷಕರನ್ನು ನೇಮಕ ಮಾಡಿದ್ದು ಇಂದು ರಾಜ್ಯದ ಬೇರೆ ಬೇರೆ ಶಾಲೆಗಳಲ್ಲಿ ಕರ್ತವ್ಯಕ್ಕೆ ಸೇರಿಕೊಂಡರು.
ಹೌದು ಈಗಾಗಲೇ ಇಲಾಖೆಯ ಮಾರ್ಗಸೂಚಿ ಮತ್ತು ನಿಯಮಗಳನ್ನು ಮುಗಿಸಿಕೊಂಡು ಇಂದು ಸರ್ಕಾರಿ ಶಾಲೆಗಳಲ್ಲಿ ಸೇವೆಗೆ ಸೇರಿಕೊಂಡರು.ರಾಜ್ಯದ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಇಂದೇ ಕರ್ತವ್ಯದ ವರದಿಯನ್ನು ಮಾಡಿಕೊಂಡರು. ಈಮಧ್ಯೆ ಸರ್ಕಾರಿ ಶಾಲೆಗೆ ಆಗಮಿಸಿದ ಇವರನ್ನು ಶಿಕ್ಷಕರು ಸ್ವಾಗತಿಸಿಕೊಂಡು ಬರಮಾಡಿಕೊಂ ಡರು.ಇತ್ತ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ದಂಡಗುಂಡ ಶಾಲೆಗೆ ಆಗಮಿಸಿದ ಅತಿಥಿ ಶಿಕ್ಷಕರನ್ನು ಕರ್ತವ್ಯಕ್ಕೆ ಹಾಜರು ಪಡಿಸಿಕೊಳ್ಳಲಾಯಿತು.
ಈ ಒಂದು ಶಾಲೆಗೆ ನಾಲ್ಕು ಜನ ಅತಿಥಿ ಶಿಕ್ಷಕರು ಅವಶ್ಯ ಕವಿದ್ದು ಹೀಗಾಗಿ ಇವರನ್ನು ಬರಮಾಡಿಕೊಳ್ಳಲಾಯಿತು ಶಿಕ್ಷಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಾಲತೇಶ್ ಬಬ್ಬಜ್ಜಿ ಹಾಗೇ ಶಾಲೆಯ ಶಿಕ್ಷಕ ಬಂಧುಗಳಾದ ಪ್ರಭಾರಿ ಪ್ರಧಾನ ಗುರುಗಳಾದ ಸಿದ್ದಣ್ಣ,ಸಹ ಶಿಕ್ಷಕರಾದ ಸಿದ್ದರಾಮ ಸೇರಿದಂತೆ ಹಲವರು ಬರಮಾಡಿಕೊಂಡರು ಇದರೊಂದಿಗೆ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಇಂದೇ ಅತಿಥಿ ಶಿಕ್ಷಕರು ಕರ್ತವ್ಯಕ್ಕೆ ಸೇರಿಕೊಂಡಿದ್ದಾರೆ.