ಧಾರವಾಡ –
ಧಾರವಾಡದ ನವಲೂರಿನಲ್ಲಿನ ಶಾಲಾ ಮಕ್ಕಳ ಪರಸ್ಥಿತಿ ಹೇಳತಿರದು.ಹೌದು ಹುಬ್ಬಳ್ಳಿಗೆ ಹೋಗುವ ಧಾರವಾಡ ಮುಖ್ಯ ರಸ್ತೆಯಲ್ಲಿರುವ ಈ ಒಂದು ಗ್ರಾಮವು ಹೆಸರಿಗೆ ಮಾತ್ರ ಪಾಲಿಕೆಯ ವ್ಯಾಪ್ತಿಯಲ್ಲಿ ಹೊಂದು ಕೊಂಡಿದ್ದು ಬಸ್ ಸೌಲಭ್ಯವಿಲ್ಲದೇ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಇದಕ್ಕೆ ಈ ಒಂದು ಚಿತ್ರಣವೇ ಸಾಕ್ಷಿ.ಇದೋ ನೋಡಿ ಶಾಲಾ ಮಕ್ಕಳು ಬಸ್ ಗಾಗಿ ಕಾಯುತ್ತಿರುವ ದೃಶ್ಯ. ಬಿ ಆರ್ ಟಿ ಎಸ್ ಬಸ್ ನಿಲುಗಡೆ ನವಲೂರ ಗೆ ಇದ್ದಿದ್ದರೆ ಈ ಪರಿಸ್ಥಿತಿ ಬರುತ್ತಿತ್ತಾ ಎನ್ನುವ ಪ್ರಶ್ನೆ ಯನ್ನು ಸಾರ್ವಜನಿಕರು ಕೇಳು ತ್ತಿದ್ದಾರೆ.
ಅಲ್ಲದೇ ಪ್ರತಿದಿನ ಶಾಲೆಗೆ ಹೋಗುವ ಮಕ್ಕಳು ಕಾದು ಕಾದು ಬೇಸತ್ತಿದ್ದು ಇದಕ್ಕೆ ಹೋಣೆ ಯಾರು ಜವಾಬ್ದಾರಿ ಯಾರು ಹೀಗ್ಯಾಕೆ ಎಂಬ ಪ್ರಶ್ನೆ ಕಾಡುತ್ತಿದೆ ಇಲ್ಲಿ ಏನಾದರೂ ಅನಾಹುತ ಆದರೆ ಅದರ ಜವಾಬ್ಧರಿ BRTS ???? Where is the smart city ? ಎಂಬ ಪ್ರಶ್ನೆ ಸಾರ್ವಜನಿಕರಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಕೇಳು ತ್ತಿದ್ದಾರೆ.