ಜಲಾವೃತಗೊಂಡ ಸರ್ಕಾರಿ ಶಾಲೆ – ಶಾಲಾ ತುಂಬೆಲ್ಲಾ ನೀರೊ ನೀರು…..

Suddi Sante Desk
ಜಲಾವೃತಗೊಂಡ ಸರ್ಕಾರಿ ಶಾಲೆ – ಶಾಲಾ ತುಂಬೆಲ್ಲಾ ನೀರೊ ನೀರು…..

ದಾವಣಗೆರೆ

ರಾಜ್ಯಾದ್ಯಂತ ಮಳೆಯ ಅಬ್ಬರ ಜೋರಾಗಿದ್ದು ಈ ಒಂದು ಮಳೆಯ ಆರ್ಭಟಕ್ಕೆ ದಾವಣಗೆರೆ ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದಾಗಿ ಸರ್ಕಾರಿ ಶಾಲೆಯೊಂದು ಜಲಾವೃತಗೊಂಡಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಯಲೋದಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ.

ಶಾಲೆಯ ಆವರಣದಲ್ಲಿ ಮೊಣಕಾಲುದ್ದ ನೀರು ನಿಂತಿದ್ದು, ಶಾಲೆಗೆ ಬಂದಿದ್ದ ವಿದ್ಯಾರ್ಥಿಗಳು ಮರಳಿ ಮನೆಗೆ ತೆರಳಿದ್ದಾರೆ.ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಶಾಲೆಯ ಕಾಂಪೌಂಡ್ ಸಹ ಕುಸಿದು ಬಿದ್ದಿದೆ. ಸದ್ಯ ಶಾಲೆಗೆ ನೀರು ನುಗ್ಗದಂತೆ ಶಾಶ್ವತ ವ್ಯವಸ್ಥೆ ಮಾಡುವಂತೆ ವಿದ್ಯಾರ್ಥಿ ಗಳು, ಪೋಷಕರು ಸಂಬಂಧಪಟ್ಟವರನ್ನು ಆಗ್ರಹಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ದಾವಣಗೆರೆ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.