ಕಳೆದುಕೊಂಡು ಮೊಬೈಲ್ ನ್ನು ಒಂದು ಗಂಟೆಯಲ್ಲಿ ಹುಡುಕಿಕೊಟ್ಟ HC ಫಕೀರಪ್ಪ ನೇರ್ತಿ – ತರಾತುರಿಯಲ್ಲಿ ಲೊಕೇಶನ್ ತಗೆದುಕೊಂಡು ಒಂದು ಗಂಟೆಯಲ್ಲಿ ಮೊಬೈಲ್ ಹುಡುಕಿಕೊಟ್ಟ ಧಾರವಾಡ ಶಹರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಫಕೀರಪ್ಪ ನೆರ್ತಿ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ…..

Suddi Sante Desk
ಕಳೆದುಕೊಂಡು ಮೊಬೈಲ್ ನ್ನು ಒಂದು ಗಂಟೆಯಲ್ಲಿ ಹುಡುಕಿಕೊಟ್ಟ HC ಫಕೀರಪ್ಪ ನೇರ್ತಿ – ತರಾತುರಿಯಲ್ಲಿ ಲೊಕೇಶನ್ ತಗೆದುಕೊಂಡು ಒಂದು ಗಂಟೆಯಲ್ಲಿ ಮೊಬೈಲ್ ಹುಡುಕಿಕೊಟ್ಟ ಧಾರವಾಡ ಶಹರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಫಕೀರಪ್ಪ ನೆರ್ತಿ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ…..

ಧಾರವಾಡ

ಕಳೆದುಕೊಂಡು ಮೊಬೈಲ್ ನ್ನು ಒಂದು ಗಂಟೆಯಲ್ಲಿ ಹುಡುಕಿಕೊಟ್ಟ HC ಫಕೀರಪ್ಪ ನೇರ್ತಿ – ತರಾತುರಿಯಲ್ಲಿ ಲೊಕೇಶನ್ ತಗೆದುಕೊಂಡು ಒಂದು ಗಂಟೆಯಲ್ಲಿ ಮೊಬೈಲ್ ಹುಡುಕಿಕೊಟ್ಟ ಧಾರವಾಡ ಶಹರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಫಕೀರಪ್ಪ ನೆರ್ತಿ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ……

ಸಾಮಾನ್ಯವಾಗಿ ಹಿಂದೊಮ್ಮೆ ಮೊಬೈಲ್ ಏನಾದರೂ ಕಳೆದುಕೊಂಡರೆ ಮರಳಿ ಸಿಗೊದು ತುಂಬಾ ಕಷ್ಟಕರವಾ ಗಿತ್ತು.ಆದರೆ ಮುಂದುವರೆದ ಇವತ್ತಿನ ತಂತ್ರಜ್ಞಾನದಿಂ ದಾಗಿ ನಾವು ಕಳೆದುಕೊಂಡ ಮೊಬೈಲ್ ನ್ನು ತಕ್ಷಣ ಪಡೆಯಬಹುದು ಎಂಬೊದಕ್ಕೆ ಧಾರವಾಡ ಶಹರ ಠಾಣೆ ಪೊಲೀಸರು ತೋರಿಸಿಕೊಟ್ಟಿದ್ದಾರೆ

ಹೌದು ಪೊಲೀಸ್ ಠಾಣೆಯಲ್ಲಿನ ಚಿತ್ರಣವೇ ಸಾಕ್ಷಿ  ಧಾರವಾಡದ ಮಾರುಕಟ್ಟೆಯಲ್ಲಿ ಕೆ ಬಿ ಕುರಹಟ್ಟಿ ಎಂಬುವರು ಅಂಗಡಿಯೊಂದರಲ್ಲಿ ಎಲಿ ಅಡಕಿ ಯನ್ನು ತಗೆದುಕೊಂಡು ಅಲ್ಲಿಯೇ ಮೊಬೈಲ್ ನ್ನು ಮರೆತು ಹೋಗಿದ್ದರು ಧಾರವಾಡದ ಸಿಬಿಟಿ ಯಲ್ಲಿನ ಅಂಗಡಿ ಯೊಂದರಲ್ಲಿ ಈ ಒಂದು ಮೊಬೈಲ್ ನ್ನು ಬಿಟ್ಟು ಹೋಗಿದ್ದರು ಕೆಲ ಸಮಯದ ನಂತರ ಮೊಬೈಲ್ ನೆನಪಾದಾಗ ಮರಳಿ ಬಂದ ಅಂಗಡಿಯಲ್ಲಿ ಮೊಬೈಲ್ ನ್ನು ಕೇಳಿದ್ದಾರೆ ಇಲ್ಲ ಎಂಬ ಸಂದೇಶ ಬರುತ್ತಿದ್ದಂತೆ ಕೂಡಲೇ ಉಪನಗರ ಪೊಲೀಸ್ ಠಾಣೆಗೆ ಹೋಗಿದ್ದಾರೆ

ಠಾಣೆಗೆ ಹೋಗುತ್ತಿದ್ದಂತೆ ವಿಷಯವನ್ನು ಸ್ಥಳದಲ್ಲಿದ್ದ ಹೆಡ್ ಕಾನ್ಸ್ ಟೇಬಲ್ ಫಕೀರಪ್ಪ ನೆರ್ತಿ ಕೂಡಲೇ ಠಾಣೆಯ ಮೇಲಾಧಿಕಾರಿಗಳ ಗಮನಕ್ಕೆ ತಗೆದುಕೊಂಡು ಬಂದು ಪಿಎಸ್ಐ ಕುಮಾರಿ ಸ್ವಾತಿ ಮುರಾರಿ ಅವರಿಗೆ ಕಳೆದುಕೊಂಡ ಮೊಬೈಲ್ ಲೊಕೇಶನ್ ಕೇಳಿದ್ದಾರೆ ಅತ್ತ ಲೊಕೇಶನ್ ಬರುತ್ತಿದ್ದಂತೆ ಇತ್ತ ಕೈಯಲ್ಲೊಂದು ಮೊಬೈಲ್ ಹಿಡಿದುಕೊಂಡು ತರಾತುರಿಯಲ್ಲಿ ಗಲ್ಲಿ ಗಲ್ಲಿಯಲ್ಲಿ ಹುಡುಕಾಡಿ ಮೊಬೈಲ್ ಪತ್ತೆ ಹಚ್ಚಿದ್ದಾರೆ.

ಲೊಕೇಷನ ಹಾಕಿಸಿಕೊಂಡು ಕಳೆದುಕೊಂಡ ಮೊಬೈಲ್ ನ್ನು ಹುಡುಕಾಡಲು ನೆರ್ತಿ ಅವರೊಂದಿಗೆ ಕುರಹಟ್ಟಿ ಅವರು ಕೂಡಾ ಬೆನ್ನತ್ತಿದ್ದು ಇಪ್ಪತ್ತು ನಿಮಿಷಗಳಲ್ಲಿ ಸೈದಾಪೂರದಲ್ಲಿ ಮೊಬೈಲ್ ಹಿಡಿದುಕೊಂಡು ಮನೆ ಯಲ್ಲಿ ಕುಳಿತುಕೊಂಡಿದ್ದವನನ್ನು ಹುಡುಕಿ ಕರೆದು ಕೊಂಡು ಬಂದಿದ್ದಾರೆ.

ಇನ್ನೂ ಕಳೆದುಕೊಂಡ ಮೊಬೈಲ್ ನ್ನು ಹುಡುಕಿಕೊಟ್ಟು ಕಳ್ಳನನ್ನು ಹೆಡೆಮುರಿ ಕಟ್ಟಿದ ಪೊಲೀಸ್ ಸಿಬ್ಬಂದಿ ಫಕೀರಪ್ಪ ನೆರ್ತಿ ಅವರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ ಹರಿದು ಬಂದಿದ್ದು ಸಾಮಾಜಿಕ ಜಾಲ ತಾಣಗಳಲ್ಲಿ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.