ಧಾರವಾಡ –
ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ 2022ರ ಜನವರಿ 16ರಂದು ಜರುಗಲಿರುವ ಪ್ರಸಕ್ತ ಸಾಲಿನ(2021-22) ಮೊದಲ ಹಂತದ ‘ನ್ಯಾಷನಲ್ ಟ್ಯಾಲೆಂಟ್ ಸರ್ಚ ಎಕ್ಸಾಮಿನೇಷನ್ (ಎನ್‌ಟಿಎಸ್‌ಇ)’ ಪರೀಕ್ಷೆಗಳಿಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಶಿಕ್ಷಣ ಇಲಾಖೆಯ ಅಭಿವೃದ್ಧಿ ಉಪನಿ ರ್ದೇಶಕರಾದ ಶ್ರೀಮತಿ ಎನ್.ಕೆ. ಸಾವಕಾರ ತಿಳಿಸಿದ್ದಾರೆ.
ನವದೆಹಲಿಯ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್‌ಸಿಇಆರ್‌ಟಿ) ನೀಡಿರುವ ಮಾರ್ಗಸೂಚಿಯಂತೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಕೆ.ಎಸ್.ಕ್ಯೂ.ಎ.ಎ.ಸಿ. ವತಿಯಿಂದ ಎರಡು ಹಂತದಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು ಮೊದಲನೆ ಹಂತದ ಪರೀಕ್ಷೆಯನ್ನು ದಿ.16-01-2022 ರಂದು ನಡೆಸ ಲಾಗುತ್ತಿದೆ.ಜಿಲ್ಲೆಯಲ್ಲಿರುವ ಸರ್ಕಾರಿ ಸ್ಥಳಿಯ ಸಂಸ್ಥೆಗಳ, ಅನುದಾನಿತ ಹಾಗೂ ಅನುದಾನರಹಿತ (ಸ್ಟೇಟ್, ಸಿಬಿಎಸ್ ಇ ಅಥವಾ ಐಸಿಎಸ್‌ಇ ಪಠ್ಯಕ್ರಮಕ್ಕೆ ಪೂರಕವಾದ) ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ.(10ನೇತರಗತಿ)ಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬ ಹುದಾಗಿದೆ.
ಪರೀಕ್ಷೆಯನ್ನು ಕನ್ನಡ, ಇಂಗ್ಲೀಷ, ಮರಾಠಿ, ಹಾಗೂ ಉರ್ದು ಮಾಧ್ಯಮಗಳಲ್ಲಿ ನಡೆಸಲಾಗುತ್ತಿದ್ದು ಸಾಮಾನ್ಯ, ಇತರೆ ಹಿಂದುಳಿದ ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು 9ನೇ ತರಗತಿಯಲ್ಲಿ ಶೇಕಡಾ 55ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳು ಶೇಕಡಾ 45 ರಷ್ಟು ಅಂಕಗಳು ಗಳಿಸಿರ ಬೇಕು.ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಜಾಲತಾಣ https://sslc.karnataka.gov.in ಬಳಕೆ ಮಾಡಿ ಆನ್‌ಲೈನ್ ಮೂಲಕ ದಿ.30-11-2021ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ವಿದ್ಯಾರ್ಥಿ ವೇತನ
ಪರೀಕ್ಷೆಯಲ್ಲಿ ಅಂತಿಮವಾಗಿ ಆಯ್ಕೆಯಾಗುವ ವಿದ್ಯಾರ್ಥಿ ಗಳಿಗೆ ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿ. ಹಂತದಲ್ಲಿ ಪ್ರತಿ ತಿಂಗಳು ರೂ:1250/-ಗಳನ್ನು, ಪದವಿ ಮತ್ತು ಸ್ನಾತಕೋತ್ತರ ಪದವಿ ಹಂತದಲ್ಲಿ ರೂ:2000/-ಗಳನ್ನು, ಜೊತೆಗೆ ಉನ್ನತ ಶಿಕ್ಷಣ ವ್ಯಾಸಂಗ ಹಂತದಲ್ಲಿ ಯು.ಜಿ.ಸಿ. ನಿಯಮಾನುಸಾರ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಜಿಲ್ಲೆಯ ಬಿ.ಇ.ಓ. ಅವರು ತಮ್ಮ ತಾಲೂಕಿನ ಪ್ರೌಢ ಶಾಲೆಗಳ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಎನ್.ಟಿ.ಎಸ್.ಇ. ಪರೀಕ್ಷೆಗೆ ಹಾಜರಾಗಿ ವಿದ್ಯಾರ್ಥಿ ವೇತನದ ಪ್ರಯೋಜನ ಪಡೆಯುವಂತೆ ಅಗತ್ಯ ಕ್ರಮಕೈಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ನೋಡಲ್ ಅಧಿಕಾರಿ ಸುಗಂಧಾ ದೊಡಮನಿ ಅವರನ್ನು (ಮೊ. 8317325996) ಸಂಪರ್ಕಿಸುವಂತೆ ಜಿಲ್ಲಾ ಶಿಕ್ಷಣ ಇಲಾಖೆಯ ಅಭಿವೃದ್ಧಿ ಉಪನಿರ್ದೇಶಕರಾದ ಶ್ರೀಮತಿ ಎನ್. ಕೆ. ಸಾವಕಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿ ದ್ದಾರೆ
ವರದಿ ಎಲ್ ಐ ಲಕ್ಕಮ್ಮನವರ