OPS ಮರು ಜಾರಿಗಾಗಿ ಶೀಘ್ರದಲ್ಲೇ ನಡೆಯಲಿದೆ ಹೋರಾಟ – ಕಲಘಟಗಿ ಯಲ್ಲಿ ನಡೆಯಿತು NPS ರಾಜ್ಯಾಧ್ಯಕ್ಷರ ಸನ್ಮಾನ ಅಭಿನಂದನಾ ಕಾರ್ಯಕ್ರಮ…..

Suddi Sante Desk
OPS ಮರು ಜಾರಿಗಾಗಿ ಶೀಘ್ರದಲ್ಲೇ ನಡೆಯಲಿದೆ ಹೋರಾಟ – ಕಲಘಟಗಿ ಯಲ್ಲಿ ನಡೆಯಿತು NPS ರಾಜ್ಯಾಧ್ಯಕ್ಷರ ಸನ್ಮಾನ ಅಭಿನಂದನಾ ಕಾರ್ಯಕ್ರಮ…..

ಕಲಘಟಗಿ

ಕಲಘಟಗಿ ತಾಲೂಕು ನೌಕರರ ಸಂಘದಲ್ಲಿ ಅಖಿಲ ಕರ್ನಾಟಕ ರಾಜ್ಯ NPS ನೌಕರರ ಸಂಘದ ರಾಜ್ಯಾಧ್ಯಕ್ಷ ರಾದ ನಾಗನಗೌಡ ಮತ್ತು  ಹಾವೇರಿ ಜಿಲ್ಲಾಧ್ಯಕ್ಷರಾದ  ಮಂಜುನಾಥ ಯಾಲಕ್ಕಿ ರವರನ್ನು ಸನ್ಮಾನಿಸಲಾಯಿತು

ರಾಜ್ಯ ಸರಕಾರಿ ನೌಕರರ ಜ್ವಲಂತ ಸಮಸ್ಯೆ ನೌಕರರ ಸಂಧ್ಯಾಕಾಲದ ಬದುಕಿನ ಆಸರೆ ಯಾದ OPS ಮರುಜಾರಿ ಅತ್ಯಾವಶ್ಯಕವಾಗಿದ್ದು ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಕ್ಷರಿ ರವರು ops ಮರು ಜಾರಿ ಮಾಡಲು ಕಂಕಣ ಬದ್ಧರಾಗಿದ್ದು ಆ ನಿಟ್ಟಿನಲ್ಲಿ ರಾಜ್ಯದಲ್ಲಿ ನೌಕರರ ಎಲ್ಲ ಬೇಕು ಬೇಡಿಕೆಗಳಿಗೆ ಸ್ಪಂದಿಸುತ್ತಿದ್ದು ops ಮರು ಜಾರಿಗಾಗಿ nps ಮತ್ತು ops ನೌಕರರು ಒಗ್ಗಟ್ಟಾಗಿ ಹೋರಾಟ ಮಾಡುವುದು ಅವಶ್ಯ ಇದ್ದು ಅದಕ್ಕಾಗಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಕ್ಷರಿ ರವರ ಬೆಂಬಲ ಹಾಗೂ ಮಾರ್ಗದರ್ಶನದಲ್ಲಿ ನಡೆಯುತ್ತಿದೆ ಎಂದರು.

ಅಖಿಲ ಕರ್ನಾಟಕ NPS ನೌಕರರ ಸಂಘ(ರಿ) ಬೆಂಗಳೂರು ಇದರ ರಾಜ್ಯಾಧ್ಯಕ್ಷರಾದ ನಾಗನಗೌಡ .ಎಂ.ಎ ರವರು ಸಂಘಟನೆಯ ಸಲುವಾಗಿ ದಾಂಡೇಲಿಗೆ ಹೋಗುವ ಮಾರ್ಗ ಮಧ್ಯ ನಮ್ಮ ಕಲಘಟಗಿ ಗೆ ಕೂಡ ಆಗಮಿಸಿ ನಮ್ಮ ಕಲಘಟಗಿ ತಾಲೂಕು ನೌಕರರ ಸಂಘದ ಸನ್ಮಾನ ಸ್ವೀಕರಿಸಿ ಮಾತನಾಡಿದರು

ರಾಜ್ಯ ಸರಕಾರಿ ನೌಕರರ ಸಂಘದ ಬಹುದಿನದ ಬೇಡಿಕೆ ಯಾದ nps ರದ್ದು ಪಡಿಸಿ ops ಮರುಜಾರಿ ಮಾಡಲು ಸರಕಾರದ ಮೇಲೆ ಒತ್ತಡ ಹೇರಲು ನಿರ್ಣಾಯಕ ಹೋರಾಟಕ್ಕೆ ಅಣಿಯಾಗಲು ನೌಕರ ಸಂಘದ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಕ್ಷರಿ ರವರು ಕಟಿ ಬದ್ದರಾಗಿದ್ದು ಆ ನಿಟ್ಟಿನಲ್ಲಿ ಅಖಿಲ ಕರ್ನಾಟಕ nps ನೌಕರರ ಸಂಘವು ರಾಜ್ಯಾದ್ಯಂತ ಸಂಘಟನೆ ಮಾಡುತ್ತಿದ್ದು

ಕಲಘಟಗಿ ತಾಲೂಕಿನಲ್ಲಿಯೋ ಕೂಡಾ ರಾಜ್ಯ ಸರಕಾರಿ ನೌಕರರ ಸಂಘದ ನೇತೃತ್ವದಲ್ಲಿ ಆದಷ್ಟು ಶೀಘ್ರ ತಾಲೂಕು ಘಟಕ ರಚಿಸಿ ಸಂಘಟನೆ ಮಾಡಲು ಸೂಚಿಸಿದರು ಹಾಗೂ ಅಖಿಲ ಕರ್ನಾಟಕ nps ನೌಕರರ ಸಂಘದ ಏಕೈಕ ಗುರಿ nps ರದ್ದುಪಡಿಸಿ ops ಮರು ಜಾರಿ ಮಾಡಿಸುವುದೇ ಆಗಿದ್ದು ಅದಕ್ಕಾಗಿ ಯಾವುದೇ ನೌಕರರ ರಿಂದ ಹಣವನ್ನು ಪಡೆಯದೇ ಸಂಘಟನೆ ಮಾಡುವುದು

ಹಾಗೂ ರಾಜ್ಯ ಸರಕಾರಿ ನೌಕರರ ಸಂಘ ಕರೆ ಕೊಟ್ಟಾಗ ಎಲ್ಲ nps ಹಾಗೂ ops ನೌಕರರು ಎಲ್ಲರೂ ಸೇರಿ ಸಮಾವೇಶ ಹಾಗೂ ಹೋರಾಟ ಗಳಲ್ಲಿ ಭಾಗಿಯಾಗಲು ಸಿದ್ಧಾರಗಲು ಕರೆ ನೀಡಿದರು ಈ ಸಂದರ್ಭದಲ್ಲಿ ಕಲಘಟಗಿ ತಾಲೂಕು ನೌಕರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಪ್ರತಿನಿಧಿಗಳು ವಿವಿಧ ವೃಂದ ಸಂಘಗಳ ಅಧ್ಯಕ್ಷರು ಪ್ರತಿನಿಧಿಗಳು ನೌಕರ ಬಂಧುಗಳು ಉಪಸ್ಥಿತರಿದ್ದರು

ಅಖಿಲ ಕರ್ನಾಟಕ nps ನೌಕರರ ಸಂಘಟನೆಯ ಆಶಯಗಳಿಗೆ ಬೆಂಬಲ ನೀಡಿ ಆದಷ್ಟು ಬೇಗನೆ nps ರದ್ದುಪಡಿಸಿ ops ಮರು ಜಾರಿ ಆಗಲಿ ಅದಕ್ಕೆ ನಮ್ಮ ತಾಲೂಕಿನ ಸಂಪೂರ್ಣ ಬೆಂಬಲ ಇರುತ್ತದೆ ಎಂದು ಒಕ್ಕೋರಲಿನಿಂದ ತಿಳಿಸಿದರು

ಸುದ್ದಿ ಸಂತೆ ನ್ಯೂಸ್ ಕಲಘಟಗಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.