ಬೆಂಗಳೂರು –
ರಾಜ್ಯಾದ್ಯಂತ ಮಧ್ಯಾಹ್ನದ ಬಿಸಿಯೂಟದಲ್ಲಿ ಡಿಸೆಂಬರ್ ನಿಂದ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.ಶಿಕ್ಷಣ ಇಲಾಖೆ ಅಧಿಕಾರಿಗಳ ತಂಡ ಈಗಾಗಲೇ ಮಧ್ಯಾಹ್ನದ ಬಿಸಿಯೂಟವನ್ನು ಶಾಲೆಗಳಲ್ಲಿ ನೀಡುತ್ತಿದ್ದು ಮೊಟ್ಟೆಯನ್ನು ಡಿಸೆಂಬರ್ ನಿಂದ ನೀಡಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಹೌದು ಡಿಸೆಂಬರ್ ನಿಂದ 46 ದಿನಗಳ ಕಾಲ ಏಳು ಜಿಲ್ಲೆಗಳಲ್ಲಿ ಮಧ್ಯಾಹ್ನದ ಬಿಸಿ ಯೂಟಕ್ಕೆ ಫೆಬ್ರವರಿವರೆಗೆ ಮೊಟ್ಟೆ ನೀಡಲು ಮುಂದಾಗಿ ದ್ದೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಅಕಾರಿಗಳು ತಿಳಿಸಿದ್ದಾರೆ
ಡಿಸೆಂಬರ್ ನಿಂದ ಫೆಬ್ರವರಿವರೆಗೆ ರಾಜ್ಯ ಸರ್ಕಾರ ಮಧ್ಯಾ ಹ್ನದ ಬಿಸಿಯೂಟದಲ್ಲಿ ಮೊಟ್ಟೆ ನೀಡುವ 46 ದಿನಗಳ ಪ್ರಾಯೋಗಿಕ ಅಧ್ಯಯನ ಮಾಡಲಾಗುತ್ತಿದೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ ಯಾದಗಿರಿ, ರಾಯ ಚೂರು,ಬೀದರ್,ಬಳ್ಳಾರಿ,ಕಲಬುರಗಿ,ಕೊಪ್ಪಳ ಮತ್ತು ವಿಜಯಪುರ ಜಿಲ್ಲಾಗಳಲ್ಲಿ 1ರಿಂದ 8ನೇ ತರಗತಿ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದಲ್ಲಿ ಮೊಟ್ಟೆ ವಿತರಿಸುವ ಬಗ್ಗೆ ಪ್ರಾಯೋಗಿಕ ಅಧ್ಯಯನ ನಡೆಸಲು ಮುಂದಾಗಿದೆ. ಸರ್ಕಾರ 14 ಲಕ್ಷದ 44 ಸಾವಿರದ 322 ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ವಿತರಿಸುವ ಯೋಜನೆಯಿದೆ.
ಬಿಸಿಯೂಟದಲ್ಲಿ ಮೊಟ್ಟೆ ನೀಡುವ ಯೋಜನೆಗೆ 39.53 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರವು ತನ್ನ ಫ್ಲೆಕ್ಸಿಫಂಡ್ ಘಟಕದ ಅಡಿಯಲ್ಲಿ ಭರಿಸುತ್ತದೆ. ಈ ತಂಡವು ಧಾರವಾಡ ಮತ್ತು ಕಲಬುರಗಿ ವಿಭಾಗಗಳನ್ನು ಪ್ರತಿನಿಸುವ ಶಿಕ್ಷಣ ಇಲಾಖೆ ಅಕಾರಿಗಳನ್ನು ಅಧ್ಯಯನಕ್ಕೆ ಸೇರಿಸುತ್ತದೆ ಎಂದು ಹಿರಿಯ ಅಕಾರಿಯೊಬ್ಬರು ತಿಳಿಸಿದ್ದಾರೆ.ಈ ಮಧ್ಯೆ, ಇಲಾಖೆ ಯು ಮೊಟ್ಟೆ ಬದಲಿಗೆ ಸಸ್ಯಾಹಾರಿಗಳಿಗೆ ಪರ್ಯಾಯ ಪೌಷ್ಠಿಕ ಆಹಾರ ನೀಡಲು ಮುಂದಾಗುತ್ತಿದೆ.ಯಾವುದನ್ನು ನೀಡಬೇಕು ಎಂಬುದನ್ನು ಸದ್ಯದಲ್ಲೇ ಅಂತಿಮಗೊಳಿಸ ಲಾಗುವುದು.ಹೆಚ್ಚಾಗಿ ಹಾಲು,ಕ್ಯಾಲ್ಸಿಯಂ ಆಧಾರಿತ, ಧಾನ್ಯ ರಾಗಿಯ ಆಹಾರ ನೀಡಲಾಗುವುದು ಎಂದು ಹೇಳಿದ್ದಾರೆ.