ಯಾದಗಿರಿ –
ಯಾದಗಿರಿಯ ಶಾಲೆಯೊಂದರ ಊಟದಲ್ಲಿ ಸತ್ತ ಹಾವಿನ ಮರಿ ಕಂಡು ಬಂದು ಅದನ್ನು ಸೇವಿಸಿ ಅಸ್ವಸ್ಥಗೊಂಡ 50 ವಿದ್ಯಾರ್ಥಿಗಳು ಈ ಒಂದು ಘಟನೆ ನಡೆದು ಎರಡು ದಿನಗಳು ನಡೆದರು ಇನ್ನೂ ಕೂಡಾ ಘಟನೆ ಕುರಿತು ನಿಖರವಾದ ಕಾರಣ ಪತ್ತೆಯಾಗಿಲ್ಲ.ಘಟನೆ ನಡೆದ ನಂತರ ಸ್ಥಳಕ್ಕೇ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು ಆದರೂ ಕೂಡಾ ಈವರೆಗೆ ಎರಡು ದಿನ ಕಳೆದ ನಂತರವೂ ಈವರೆಗೆ ಯಾಕೇ ಹೀಗೆ ಆಯಿತು ಎಂಬ ಕುರಿತು ಕಾರಣ ತಿಳಿದು ಬಂದಿಲ್ಲ
ಹೌದು ಶಾಲೆಯ ಉಪಹಾರದಲ್ಲಿ ಹಾವು ಪತ್ತೆಯಾಗಿ ನೋಡಲಾರದೆ ಅದನ್ನು ಸೇವಿಸಿ ನಂತರ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು ಯಾದಗಿರಿಯಲ್ಲಿ ಈ ಒಂದು ಘಟನೆ ನಡೆದಿತ್ತು ಉಪ್ಪಿಟ್ಟು ಸೇವಿಸಿ 50 ವಿದ್ಯಾರ್ಥಿಗಳು ಅಸ್ವಸ್ಥ ಗೊಂಡಿದ್ದರು ಯಾದಗಿರಿ ತಾಲೂಕಿನ ಅಬ್ಬೆ ತುಮಕೂರಿನ ವಿಶ್ವರಾಧ್ಯ ವಿದ್ಯಾವರ್ಧಕ ವಸತಿ ಶಾಲೆಯಲ್ಲಿ ಈ ಒಂದು ಘಟನೆ ನಡೆದಿತ್ತು ಎರಡು ದಿನಗಳಾದರೂ ಕೂಡಾ ಈ ಒಂದು ಘಟನೆಯ ಹಿಂದಿನ ಸತ್ಯ ಹೊರಬಂದಿಲ್ಲ
ಸಧ್ಯ ವಿದ್ಯಾರ್ಥಿಗಳು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದು ಕೆಲವರು ಗುಣಮುಖರಾಗಿದ್ದು ಇನ್ನೂ ಕೆಲ ವಿದ್ಯಾರ್ಥಿಗಳು ಚಿಕಿತ್ಸೆ ಯನ್ನು ಪಡೆದುಕೊಳ್ಳುತ್ತಿದ್ದು ಉಪಹಾರದಲ್ಲಿ ಸತ್ತ ಹಾವಿನ ಮರಿ ಹೇಗೆ ಬಂತು ಈ ಒಂದು ವಿಚಾರ ಕುರಿತು ಎರಡು ದಿನಗಳಾದರೂ ಇನ್ನೂ ಪತ್ತೆಯಾಗಿಲ್ಲ ಹಾವಿನ ಮರಿ ಪತ್ತೆಯಾದ ನಂತರ ಆತಂಕ ಗೊಂಡಿದ್ದ ವಿದ್ಯಾರ್ಥಿಗಳಿಗೆ ಇನ್ನೂ ಕಾರಣ ಪತ್ತೆಯಾ ಗಿಲ್ಲ ಈಗಾಗಲೇ ಸಂಪೂರ್ಣವಾದ ಮಾಹಿತಿಯನ್ನು ಪಡೆದು ಕೊಂಡಿದ್ದರು ಪೊಲೀಸರು ಕೂಡಾ ಪರಿಶೀಲನೆ ಮಾಡು ತ್ತಿದ್ದರು ಕೂಡಾ ಸತ್ಯಾಸತ್ಯತೆ ನಿಗೂಢವಾಗಿ ಉಳಿದಿದೆ