ಬೆಂಗಳೂರು –
ಯಾರಿಗೂ ಯಾವ ಇಲಾಖೆಗೂ ಇಲ್ಲದ ವರ್ಗಾವಣೆಯ ನೀತಿಯಿಂದಾಗಿ ನಾಡಿನ ಶಿಕ್ಷಕರು ಸಿಡಿದೆದ್ದಿದ್ದಾರೆ. ತಾವು ಒಂದು ಕಡೆ ಹೆಂಡತಿ ಒಂದು ಕಡೆ ಮಕ್ಕಳು ಮತ್ತೊಂದು ಕಡೆ ಊರು ಇನ್ನೊಂದು ಕಡೆ ಹೀಗೆ ದಿಕ್ಕಾಪಾಲಾಗಿ ಕೆಲಸ ವನ್ನು ಮಾಡುತ್ತಿರುವ ಶಿಕ್ಷಕರಿಗೆ ಈ ಒಂದು ಅವೈಜ್ಞಾನಿಕ ವರ್ಗಾವಣೆ ನೀತಿ ಆತಂಕವನ್ನು ತಂದಿಟ್ಟಿದ್ದು ನೆಮ್ಮದಿ ಇಲ್ಲದೆ ಕೆಲಸವನ್ನು ಮಾಡುತ್ತಿದ್ದು ಇನ್ನೂ ಇದರಿಂದಾಗಿ ಬೇಸತ್ತ ಶಿಕ್ಷಕಿ ಯೊಬ್ಬರು ಈಗ ಆತ್ಮಹತ್ಯೆಗೆ ಮುಂದಾಗಿ ದ್ದಾರೆ
ಹೌದು ಕಳೆದ ಹಲವಾರು ವರ್ಷಗಳಿಂದ ವರ್ಗಾವಣೆ ಗಾಗಿ ಕಾದು ಕಾದು ಬೇಸತ್ತಿದ್ದೇನೆ ಇನ್ನೊಂದು ವರ್ಷ ಕಾಯ್ತಿನಿ ಆಗಲಿಲ್ಲ ಅಂದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಒಬ್ಬ ಶಿಕ್ಷಕಿ ಸಾವಿನಿಂದಾಗಿ ಆದರೂ ಈ ಒಂದು ವರ್ಗಾವಣೆ ನೀತಿ ನಿಯಮಗಳು ಬದಲಾವಣೆ ಆಗಲಿ ಎಂದು ಬರೆದು ಸಾಮಾಜಿಕ ಜಾಲ ತಾಣಗಳಲ್ಲಿ ಪೊಸ್ಟ್ ಮಾಡಿದ್ದಾರೆ. ಇನ್ನಾದರೂ ಎಚ್ಚೇತ್ತುಕೊಂಡು ಈ ಒಂದು ವರ್ಗಾವಣೆಯ ನೀತಿ ನಿಯಮಗಳನ್ನು ಬದಲಾವಣೆ ಮಾಡಿ ನೆಮ್ಮದಿ ಇಲ್ಲದ ಶಿಕ್ಷಕರಿಗೆ ನೆಮ್ಮದಿಯ ವಾತಾವರಣ ನೀಡಬೇಕು