ರಾಜ್ಯ ಸರ್ಕಾರಿ ನೌಕರರಿಗೆ ‘ದಸರಾ’ ಹಬ್ಬದ ಗಿಫ್ಟ್‌ ನೀಡಿದ ರಾಜ್ಯ ಸರ್ಕಾರ – ಆದೇಶದೊಂದಿಗೆ ಹಬ್ಬದಲ್ಲಿ ಗಿಪ್ಟ್ ನೀಡಿದ ರಾಜ್ಯ ಸರ್ಕಾರ…..

Suddi Sante Desk
ರಾಜ್ಯ ಸರ್ಕಾರಿ ನೌಕರರಿಗೆ ‘ದಸರಾ’ ಹಬ್ಬದ ಗಿಫ್ಟ್‌ ನೀಡಿದ ರಾಜ್ಯ ಸರ್ಕಾರ – ಆದೇಶದೊಂದಿಗೆ ಹಬ್ಬದಲ್ಲಿ ಗಿಪ್ಟ್ ನೀಡಿದ ರಾಜ್ಯ ಸರ್ಕಾರ…..

ಬೆಂಗಳೂರು

ರಾಜ್ಯ ಸರ್ಕಾರಿ ನೌಕರರಿಗೆ ‘ದಸರಾ’ ಹಬ್ಬದ ಗಿಫ್ಟ್‌ ನ್ನು  ‘KGID’ಗೆ ಬೋನಸ್ ಘೋಷಣೆಯೊಂದಿಗೆ ನೀಡಿದೆ ಹೌದು ರಾಜ್ಯ ಸರ್ಕಾರದಿಂದ ತನ್ನ ಅಧೀನದಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ದಸರ ಗಿಫ್ಟ್‌ ಅನ್ನು ನೀಡಿದ್ದು, ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಕಡ್ಡಾಯ ಜೀವ ವಿಮಾ ಯೋಜನೆಯಡಿಯಲ್ಲಿ ಬೋನಸ್ ನೀಡಲು ಮುಂದಾಗಿದೆ.ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಕಡ್ಡಾಯ ಜೀವ ವಿಮಾ ಯೋಜನೆಯಡಿ ದಿನಾಂಕ:01.04.2020 ರಿಂದ 31.03.2022 ಕ್ಕೆ ಅಂತ್ಯಗೊಂಡ ದೈವಾರ್ಷಿಕ ಅವಧಿಗೆ ವಿಮಾ ಮೌಲ್ಯ ಮಾಪನ ವರದಿಯ ಆಧಾರದ ಮೇಲೆ ಜೀವ ವಿಮಾ ಪಾಲಿಸಿಗಳ ಸ್ಥಿರಪಡಿಸಿದ ಮೊತ್ತದ ಮೇಲೆ ಬೋನಸ್ ನೀಡಲು ಸರ್ಕಾರದ ಮಂಜೂರಾತಿ ನೀಡುವ ಬಗ್ಗೆ, ಆದೇಶದಲ್ಲಿ ಮಾಹಿತಿ ನೀಡಿದೆ

ಬೆಂಗಳೂರು ನಿರ್ದೇಶಕರು, ಕರ್ನಾಟಕ ಸರ್ಕಾರಿ ವಿಮಾ ಇಲಾಖೆ, ಇವರು ಮೇಲೆ ಓದಲಾದ ಪತ್ರದಲ್ಲಿ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯಲ್ಲಿ ನಿರ್ವಹಿಸಲಾಗುತ್ತಿರುವ ಕಡ್ಡಾಯ ಜೀವ ವಿಮಾ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರಿ ನೌಕರರ (ಕಡ್ಡಾಯ ಜೀವ ವಿಮಾ) ನಿಯಮಗಳು, 1958ರ ನಿಯಮ-22ರನ್ವಯ ವಿಮಾ ಮೌಲ್ಯಮಾಪನವನ್ನು ದೈವಾರ್ಷಿಕವಾಗಿ ಮಾಡಿಸಬೇ ಕಾಗಿದ್ದು, ಅದರನ್ವಯ 2020-2022ನೇ ದೈವಾರ್ಷಿಕ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ವಿಮಾ ಪಾಲಿಸಿಗಳ ಮೌಲ್ಯಮಾಪನವನ್ನು ನಡೆಸಿ, ಅಧಿಕ ಲಾಭಾಂಶವನ್ನು ಘೋಷಿಸಲು ಅನುವಾಗುವಂತೆ ಮೌಲ್ಯಮಾಪನ ಕಾರ್ಯ ಕೈಗೊಳ್ಳಲು ವಿಮಾ ಗಣಕಕಾರರನ್ನು ನೇಮಿಸದ್ದು, ವಿಮಾ ಗಣಕಕಾರರು 2020-2022ನೇ ಅವಧಿಗೆ ಸಂಬಂಧಿಸಿದಂತೆ ಮೌಲ್ಯಮಾಪನ ಕಾರ್ಯ ವನ್ನು ಪೂರ್ಣಗೊಳಿಸಿ ಈ ಕೆಳಕಂಡಂತ ಮೌಲ್ಯ ಮಾಪನ ವರದಿ ನೀಡಿರುತ್ತಾರೆ

 

ಇದೇ ವೇಳೆ ವಿಮಾ ವ್ಯವಹಾರದ ಮೇಲಿನ ನಿವ್ವಳ ಹೊಣೆಗಾರಿಕೆ : ರೂ. 5,624.46 ಕೋಟಿಗಳು 7. ಮೌಲ್ಯಮಾಪನದ ಹೆಚ್ಚುವರಿ (Surplus)ರೂ. 2524.53 ಕೋಟಿಗಳು ವಿಮಾ ಗಣಕರು ತಮ್ಮ ವರದಿಯಲ್ಲಿ ದಿನಾಂಕ:31.03.2022 ರಂದು ಚಾಲ್ತಿಯಲ್ಲಿರುವ ಎಲ್ಲಾ ಪಾಲಿಸಿಗಳಿಗೆ ಪ್ರತಿ ಸಾವಿರ ವಿಮಾ ಮೊತ್ತಕ್ಕೆ ಪ್ರತಿ ವರ್ಷಕ್ಕೆ ರೂ.80/- ರಂತ ಪ್ರತ್ಯಾವರ್ತಿ ಲಾಭಾಂಶವನ್ನು ಘೋಷಿಸಲು ಹಾಗೂ ಈ ಉದ್ದೇಶಕ್ಕಾಗಿ ಮೌಲ್ಯಮಾಪನದ ಅನುಸಾರ ಒಟ್ಟಾರೆ ಯಾಗಿ ಹೆಚ್ಚಳವಾಗಿರುವ

ರೂ. 2524.53 ಕೋಟಿಗಳಲ್ಲಿ ರೂ.1955.95 ಕೋಟಿಗಳನ್ನು ಸರಳ ಪ್ರತ್ಯಾವರ್ತಿ ಲಾಭಾಂಶವಾಗಿ ವಿತರಣೆ ಮಾಡಲು ಹಾಗೂ ಉಳಿದ ರೂ.568.57 ಕೋಟಿ ಮೊತ್ತವನ್ನು ಅವರ್ಗೀಕೃತವಾಗಿ ಮುಂದುವರಿಸ ಲ್ಪಟ್ಟ ಮೊಬಲಗು ಎಂದು ಪರಿಗಣಿಸಿ ಮುಂದಿನ ಮೌಲ್ಯಮಾಪನ ಅವಧಿಗೆ ಕೊಂಡೊಯ್ಯಲು ವಿಮಾ ಗಣಕರು ಶಿಫಾರಸ್ಸು ಮಾಡಿರುತ್ತಾರೆ.

ನಿರ್ದೇಶಕರು, ಕರ್ನಾಟಕ ಸರ್ಕಾರಿ ವಿಮಾ ಇಲಾಖೆ, ಇವರು ವಿಮಾ ಗಣಕರು ಮೌಲ್ಯಮಾಪನ ವರದಿಯಲ್ಲಿ ಮಾಡಿರುವ ಶಿಫಾರಸ್ಸುಗಳನ್ನು ಪರಿಗಣಿಸಿ, ದಿನಾಂಕ:31.03.2022 ರಂದು ಚಾಲ್ತಿಯಲ್ಲಿದ್ದ ಪಾಲಿಸಿಗಳ ಮೇಲೆ ವಿಮಾ ಮೊತ್ತದ ಪ್ರತಿ ರೂ.1000 ಗಳಿಗೆ ವಾರ್ಷಿಕವಾಗಿ ರೂ.80/- ರ ದರದಲ್ಲಿ ಬೋನಸ್ ನೀಡುವುದರ ಜೊತೆಗೆ ದಿನಾಂಕ:01.04.2022 ರಿಂದ 31.03.2024ರ ಅವಧಿಯಲ್ಲಿ ಅವಧಿಪೂರ್ಣ, ಮರಣ ಜನ್ಮ ಹಾಗೂ ಎಲ್ಲಾ ವಿಮಾ ತ್ಯಾಗ ಮೌಲ್ಯಗಳಿಂದ ಹೊರಹೋಗಿರುವ ಪಾಲಿಸಿಗಳಿಗೆ ಮುಂದಿನ ಮೌಲ್ಯಮಾಪನ ಅವಧಿಯವರೆಗೆ

ಪ್ರತಿ ರೂ.1000/- ಗಳಿಗೆ ವಾರ್ಷಿಕವಾಗಿ ರೂ.80/- ಗಳ ಮಧ್ಯಂತರ ಅಧಿಲಾಭಾಂಶವನ್ನು ನೀಡಲು ಸರ್ಕಾರದ ಅನುಮೋದನೆಯನ್ನು ಕೋರಿರುವ ಪ್ರಸ್ತಾವನೆಯನ್ನು ವಿವರವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ ಅಂತ ತಿಳಿಸಿದೆ.(i) ದಿನಾಂಕ: 01.04.2020 ರಿಂದ 31.03.2022 ರ ದೈವಾರ್ಷಿಕ ಅವಧಿಯಲ್ಲಿ ಚಾಲ್ತಿ ಯಲ್ಲಿದ್ದ ಎಲ್ಲಾ ಪಾಲಿಸಿಗಳಿಗೆ ವಿಮಾ ಮೊತ್ತದ ಮೇಲೆ ಪ್ರತಿ ಸಾವಿರ ರೂಪಾಯಿಗಳಿಗೆ ಪ್ರತಿ ವರ್ಷಕ್ಕೆ ರೂ.80/-ರಂತೆ ಲಾಭಾಂಶ(Bonus) ನೀಡುವುದು. (ii) ಅವಧಿ ಪೂರ್ಣ, ಮರಣಜನ್ಯ ಹಾಗೂ ವಿಮಾ ತ್ಯಾಗ ಮೌಲ್ಯ ಗಳಿಂದ

ದಿನಾಂಕ:01.04.2022 ರಿಂದ 31.03.2024 ರ ಅವಧಿಯಲ್ಲಿ ಹೊರ ಹೋಗಿರುವ ವಿಮಾ ಪಾಲಿಸಿಗಳಿಗೆ ಪ್ರತಿ ಸಾವಿರ ರೂಪಾಯಿಗಳಿಗೆ ಪ್ರತಿ ವರ್ಷಕ್ಕೆ ರೂ.80/-ರಂತೆ ಮಧ್ಯಂತರ ಲಾಭಾಂಶವನ್ನು ನೀಡುವುದು ಅಂತ ತಿಳಿಸಿದೆ

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.