ರಜೆ ಸುದ್ದಿ ಹರಡಿದ್ದು ಯಾರು ಗೊತ್ತಾ – ಕಿಡಗೇಡಿಗಳ ಕಿಡಗೇಡಿಗೆ ರಾಜ್ಯ ಸರ್ಕಾರವು ಗೊಂದಲ…..

Suddi Sante Desk
ರಜೆ ಸುದ್ದಿ ಹರಡಿದ್ದು ಯಾರು ಗೊತ್ತಾ – ಕಿಡಗೇಡಿಗಳ ಕಿಡಗೇಡಿಗೆ ರಾಜ್ಯ ಸರ್ಕಾರವು ಗೊಂದಲ…..

ಬೆಂಗಳೂರು

ಸಾಲುಮರದ ತಿಮ್ಮಕ್ಕ ನಿಧನ ಹಿನ್ನಲೆಯಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಸುದ್ದಿ ನಿಜವೋ? ಸುಳ್ಳೋ?
ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ನಿಧನ ಹಿನ್ನಲೆಯಲ್ಲಿ ಶನಿವಾರ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಿಗೆ ಸರ್ಕಾರ ರಜೆ ಘೋಷಣೆ ಮಾಡಿದೆ ಎನ್ನುವ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. ಸರ್ಕಾರವೇ ಲಿಖಿತ ಆದೇಶ ನೀಡಿದೆ ಎನ್ನುವ ಅರ್ಥದ ಆರ್ಡರ್‌ ಕಾಪಿ ಫೋಟೋಗಳು ವೈರಲ್‌ ಆಗಿದ್ದವು.

ಈ ಸುದ್ದಿ ವೈರಲ್‌ ಆಗುತ್ತಿದ್ದಂತೆ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದ್ದು ಸಾಲು ಮರದ ತಿಮ್ಮಕ್ಕ ಅವರ ನಿಧನದ ಹಿನ್ನೆಲೆಯಲ್ಲಿ ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎನ್ನುವುದು ಸುಳ್ಳು. ಸಾಮಾಜಿಕ‌ ಜಾಲ ತಾಣದಲ್ಲಿ ಈ ಬಗ್ಗೆ ಹರಿದಾಡುತ್ತಿರುವ ಪತ್ರ ನಕಲಿಯದ್ದಾಗಿದೆ’ ಎಂದು ಸ್ಪಷ್ಟನೆ ನೀಡಿದೆ. ಅದರಿಂ ದಾಗಿ ಶನಿವಾರ ಎಂದಿನಂತೆ ಶಾಲಾ ಕಾಲೇಜುಗಳು ಇರಲಿದೆ ಎಂದು ಸರ್ಕಾರ ತಿಳಿಸಿದೆ.

ಖ್ಯಾತ ಪರಿಸರವಾದಿ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಲುಮರದ ತಿಮ್ಮಕ್ಕ (114) ಇಂದು ಬೆಳಿಗ್ಗೆ ನಿಧನ ರಾದರು. ಉಸಿರಾಟದ ತೊಂದರೆಯಿಂದಾಗಿ ನವೆಂಬರ್ 2 ರಿಂದ ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿರಂತರ ವೈದ್ಯಕೀಯ ಪ್ರಯತ್ನಗಳ ಹೊರತಾಗಿಯೂ, ‘ವೃಕ್ಷಮಾತೆ’ (ವೃಕ್ಷಗಳ ತಾಯಿ) ಎಂದು ಪ್ರೀತಿಯಿಂದ ಕರೆಯಲ್ಪಡುವ ತಿಮ್ಮಕ್ಕ ಚೇತರಿಸಿಕೊಳ್ಳಲಿಲ್ಲ ಮತ್ತು ಚಿಕಿತ್ಸೆಯ ಸಮಯದಲ್ಲಿ ನಿಧನರಾದರು.

 

ಕರ್ನಾಟಕದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದ ಅವರು ಬಡತನದಿಂದ ಜಾಗತಿಕವಾಗಿ ಗುರುತಿಸಲ್ಪಟ್ಟ ಪರಿಸರವಾದಿಯಾಗು ವವರೆಗಿನ ಪ್ರಯಾಣವು ಅನೇಕರಿಗೆ ಸ್ಫೂರ್ತಿ ತುಂಬಿದೆ. ತನ್ನ ಕುಟುಂಬಕ್ಕೆ ಕೃಷಿ ಕೆಲಸದಲ್ಲಿ ಸಹಾಯ ಮಾಡಲು ಚಿಕ್ಕ ವಯಸ್ಸಿನಲ್ಲಿಯೇ ಶಾಲೆ ಬಿಟ್ಟಿದ್ದ ತಿಮ್ಮಕ್ಕ, ಪ್ರಕೃತಿಯ ಬಗ್ಗೆ ಆಳವಾದ ಪ್ರೀತಿಯನ್ನು ಬೆಳೆಸಿಕೊಂ ಡರು, ತಮ್ಮ ಹಳ್ಳಿಯ ಸುತ್ತಮುತ್ತಲಿನ ಹೊಲಗಳು ಮತ್ತು ಕಾಡುಗಳಲ್ಲಿ ಹೆಚ್ಚಿನ ಸಮಯವನ್ನು ಕಳೆದರು.

ಅವರು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದ ಚಿಕ್ಕಯ್ಯ ಅವರನ್ನು ವಿವಾಹ ವಾದರು. ದಂಪತಿಗೆ ಮಕ್ಕಳಿರಲಿಲ್ಲ, ಮತ್ತು ಮಕ್ಕಳಿಲ್ಲದ ದುಃಖವನ್ನು ನಿಭಾಯಿಸಲು, ತಿಮ್ಮಕ್ಕ ಮರಗಳನ್ನು ನೆಡಲು ಪ್ರಾರಂಭಿಸಿದರು. ಕಡೂರು ಮತ್ತು ಹುಲಿಕಲ್ ನಡುವಿನ ರಾಜ್ಯ ಹೆದ್ದಾರಿ 99 ರ ಉದ್ದಕ್ಕೂ ಅವರು ನೆಟ್ಟ ಆಲದ ಮರಗಳು ಇಂದು ಭವ್ಯವಾದ ಹೆಗ್ಗುರುತುಗಳಾಗಿ ತಲೆಯೆತ್ತಿವೆ. ಅವರು ಈ ಮರಗಳನ್ನು ತಮ್ಮ ಸ್ವಂತ ಮಕ್ಕಳೆಂದೇ ಅವರು ಸಾಕಿದ್ದರು.

ನಾಡೋಜ ಸಾಲುಮರದ ತಿಮ್ಮಕ್ಕ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ನ.15ರ ಶನಿವಾರ ಬೆಳಗ್ಗೆ 12 ಗಂಟೆಗೆ ಜ್ಞಾನಭಾರತಿ ಬಳಿಯ ಕಲಾ ಗ್ರಾಮದ ಆವರಣದಲ್ಲಿ ನೆರವೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಮರಗಳನ್ನೇ ಮಕ್ಕಳಂತೆ ಸಲಹಿ, ಲಕ್ಷಾಂತರ ಜನರಿಗೆ ಪ್ರೇರಣೆಯಾಗಿದ್ದ ತಿಮ್ಮಕ್ಕನವರ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಬೆಳಗ್ಗೆ 7.30ರಿಂದ 10.30 ಗಂಟೆಯವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗುವುದು, ನಂತರ ಜ್ಞಾನಭಾರತಿ ಬಳಿಯ ಕಲಾ ಗ್ರಾಮದ ಆವರಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗು ವುದು ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.