ಸರ್ಕಾರಿ ಶಾಲೆಗೆ ಹೊಸ ರೂಪ ನೀಡಿದ ಶಿಕ್ಷಕರು – ಶಿಕ್ಷಕರ ಕಾರ್ಯಕ್ಕೆ ಕೈ ಜೋಡಿಸಿದ ಸಾರ್ವಜನಿಕರು…..

Suddi Sante Desk
ಸರ್ಕಾರಿ ಶಾಲೆಗೆ ಹೊಸ ರೂಪ ನೀಡಿದ ಶಿಕ್ಷಕರು – ಶಿಕ್ಷಕರ ಕಾರ್ಯಕ್ಕೆ ಕೈ ಜೋಡಿಸಿದ ಸಾರ್ವಜನಿಕರು…..

ಕೊಪ್ಪಳ

ಹೌದು ಇಂತಹ ದೊಂದು ಮಹಾನ್ ಕಾರ್ಯವೊಂದು ಕೊಪ್ಪಳ ಜಿಲ್ಲೆ ಯಲ್ಲಿ ನಡೆದಿದೆ ಸರ್ಕಾರಿ ಶಾಲೆ ಆದರೆ ಯಾವ ಖಾಸಗಿ ಶಾಲೆಗೂ ಕಮ್ಮಿಯಿಲ್ಲದಂತೆ ಕಾಣುತ್ತಿದೆ. ಅನೇಕ ಕಡೆ ಸರ್ಕಾರಿ ಶಾಲೆಗೆ ಮಕ್ಕಳ ಕೊರತೆ ಇದ್ದರೆ ಈ ಒಂದು ಶಾಲೆಯಲ್ಲಿ ಮಕ್ಕಳ ಹಾಜರಾತಿ ಕೂಡ ಹೆಚ್ಚಾಗು ತ್ತಿದೆ. ಇದಕ್ಕೆ ಕಾರಣ ಪಾಲಕರು ಮತ್ತು ಶಿಕ್ಷಕರ ಶ್ರಮ.

ಇದೀಗ ಪಾಲಕರು ಮತ್ತು ಶಿಕ್ಷಕರೇ ಸೇರಿ ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ, ಶಾಲೆಗೆ ಬಣ್ಣ ಹಚ್ಚಿಸಿದ್ದಾರೆ. ಕೊರೋನಾ ನಂತರ ಸರ್ಕಾರಿ ಶಾಲೆಗೆ ಹೋಗುವ ಮಕ್ಕಳ ಸಂಖ್ಯೆ ಕಡಿಮೆಯಾಗಿದ್ದು ಖಾಸಗಿ ಶಾಲೆಗಳಿಗೆ ಹೆಚ್ಚಿನ ಪಾಲಕರು ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ. ಇನ್ನೊಂದಡೆ ಅನೇಕ ಕಡೆ ಈಗಲು ಆಗಲು ಬೀಳುವಂ ತಿರುವ ಕಟ್ಟಡ, ಮಾಸಿ ಹೋಗಿರುವ ಗೋಡೆಗಳನ್ನು ನೋಡಿ, ಪಾಲಕರು, ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಲು ಹಿಂದೇಟು ಹಾಕ್ತಿದ್ದಾರೆ.

ಆದರೆ ನಗರ ಪ್ರದೇಶದಲ್ಲಿದ್ದರು ಕೂಡ ಈ ಸರ್ಕಾರಿ ಶಾಲೆಗೆ ಮಕ್ಕಳ ಪ್ರವೇಶ ಸಂಖ್ಯೆ ಹೆಚ್ಚಾಗುತ್ತಿದೆ. ಕೊಪ್ಪಳ ನಗರದ ಕುವೆಂಪು ನಗರದ ಆಶ್ರಯ ಕಾಲೋನಿಯಲ್ಲಿ ರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಇದೀಗ ಶಿಕ್ಷಕರ ಶ್ರಮ, ಪಾಲಕರ ಸಹಕಾರದಿಂದ ಅಂದಚೆಂದ ವಾಗುವದರ ಜೊತೆಗೆ ಗುಣಮಟ್ಟದ ಶಿಕ್ಷಣದಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಒಂದರಿಂದ ಏಳನೇ ತರಗತಿವರಗೆ ಈ ಶಾಲೆಯಲ್ಲಿ ನೂರಾ ಐವತ್ತಕ್ಕೂ ಅಧಿಕ ಮಕ್ಕಳು ಅಧ್ಯಯನ ಮಾಡುತ್ತಿದ್ದಾರೆ. ಆರಂಭದಲ್ಲಿ ಈ ಸರ್ಕಾರಿ ಶಾಲೆಗೆ ಬರಲು ಹಿಂದೇಟು ಹಾಕ್ತಿದ್ದ ಮಕ್ಕಳು ಇದೀಗ ಖುಷಿ ಖುಷಿಯಿಂದ ಶಾಲೆಗೆ ಬರ್ತಿದ್ದಾರೆ. ಇದಕ್ಕೆ ಕಾರಣ, ಪಾಲಕರು ಮತ್ತು ಶಿಕ್ಷಕರು.ತಮ್ಮ ಮಕ್ಕಳು ಕಲಿಯೋ ಶಾಲೆ ಚೆನ್ನಾಗಿ ಇರಬೇಕು ಅಂತ ಪಾಲಕರು, ತಾವು ಕಲಿಸುತ್ತಿರುವ ಶಾಲೆ ಚೆನ್ನಾಗಿರಬೇಕು ಅಂತ ಶಿಕ್ಷಕರು ಮುತುವರ್ಜಿವಹಿಸಿದ್ದರಿಂದ, ಈ ಸರ್ಕಾರಿ ಶಾಲೆ ಇದೀಗ ಅಂದಚಂದವಾಗಿ ಕಾಣುತ್ತಿದೆ.

ಈ ಮೊದಲು ಬಣ್ಣವಿಲ್ಲದ ಕಳೆಗುಂದಿದ್ದ ಸರ್ಕಾರಿ ಶಾಲೆಗೆ, ಪಾಲಕರು ಮತ್ತು ಶಿಕ್ಷಕರೇ ಒಂದು ಲಕ್ಷಕ್ಕೂ ಅಧಿಕ ಹಣವನ್ನು ಹಾಕಿ, ಬಣ್ಣ ಹಚ್ಚಿಸಿದ್ದಾರೆ.ಇಡೀ ಶಾಲೆಗೆ ತಾವೇ ಬಣ್ಣವನ್ನು ಹಚ್ಚಿಸಿ, ಶಾಲೆಯ ಅಂದ ವನ್ನು ಹೆಚ್ಚಿಸಿದ್ದಾರೆ.ಇನ್ನು ಶಿಕ್ಷಕರು ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣವನ್ನು ಕೂಡ ನೀಡ್ತಿದ್ದಾರೆ. ಪಾಲಕರು ಮತ್ತು ಶಿಕ್ಷಕರು ಸ್ವಯಂ ಪ್ರೇರಣೆಯಿಂದ ಹಣ ಹೊಂದಿಸಿ, ಬಣ್ಣ ತಂದು, ಕಾರ್ಮಿಕರಿಂದ ಬಣ್ಣ ಹೆಚ್ಚಿಸಿದ್ದಾರೆ

ಶಾಲೆ ಇದೀಗ ಲಕ ಲಕನೇ ಹೊಳೆಯುತ್ತಿದೆ.ಸದ್ಯ ಶಾಲೆಗೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಸದ್ಯ ಐದು ಕೊಠಡಿಗಳು ಮಾತ್ರವಿದ್ದು, ಅಲ್ಲಿಯೇ ಜಾಗವನ್ನು ಹೊಂದಿಸಿ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಇನ್ನು ಸರ್ಕಾರ ಹೆಚ್ಚಿನ ಮೂಲ ಭೂತ ಸೌಲಭ್ಯಗಳನ್ನು ನೀಡಿದರೆ, ಸರ್ಕಾರಿ ಶಾಲೆ ಕೂಡ ಖಾಸಗಿ ಶಾಲೆಯನ್ನು ಮೀರಿಸುವಂತಾಗುತ್ತದೆ. ಈ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಮತ್ತು ಅವರ ಬೆನ್ನಿಗೆ ನಿಂತಿರುವ ಪಾಲಕರಿಗೆ ಎಲ್ಲರ ಮೆಚ್ಚುಗೆ ವ್ಯಕ್ತವಾಗಿದೆ.

ಸುದ್ದಿ ಸಂತೆ ನ್ಯೂಸ್ ಕೊಪ್ಪಳ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.