ಚುನಾವಣಾ ಪ್ರಚಾರ ಆರಂಭ ಮಾಡಿದ ಸಿಎಸ್ ಷಡಾಕ್ಷರಿ ಮತ್ತು ಟೀಮ್ – ಬೆಳಗಾವಿ ಜಿಲ್ಲೆಯಲ್ಲಿ ಮಿಂಚಿನ ಸಂಚಾರ ಮತಯಾಚನೆ…..ನೌಕರರಿಂದ ಸನ್ಮಾನ ಗೌರವ…..

Suddi Sante Desk
ಚುನಾವಣಾ ಪ್ರಚಾರ ಆರಂಭ ಮಾಡಿದ ಸಿಎಸ್ ಷಡಾಕ್ಷರಿ ಮತ್ತು ಟೀಮ್ – ಬೆಳಗಾವಿ ಜಿಲ್ಲೆಯಲ್ಲಿ ಮಿಂಚಿನ ಸಂಚಾರ ಮತಯಾಚನೆ…..ನೌಕರರಿಂದ ಸನ್ಮಾನ ಗೌರವ…..

ಬೆಳಗಾವಿ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ಷಡಾಕ್ಷರಿ ಯವರು ತಮ್ಮ ಟೀಮ್ ನೊಂದಿಗೆ ಪ್ರಚಾರ ಕಾರ್ಯ ವನ್ನು ಆರಂಭ ಮಾಡಿದ್ದಾರೆ.ಹೌದು ಅತ್ತ ನಾಮಪತ್ರ ಸಲ್ಲಿಕೆಯ ಬೆನ್ನಲ್ಲೇ ಇತ್ತ  ಚಿಕ್ಕೋಡಿ ಯಲ್ಲಿ  ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ  ಸಿ ಎಸ್ ಷಡಾಕ್ಷರಿ ರವರು ರಾಜ್ಯ ಖಜಾಂಚಿ ಸ್ಥಾನದ ಅಭ್ಯರ್ಥಿ ನಾಗರಾಜ್ ಜುಮ್ಮನ್ನನ ವರು ಚುನಾವಣಾ ಪ್ರಚಾರದ ಭಾಗವಾಗಿ ಜಿಲ್ಲೆ ಹಾಗೂ ತಾಲ್ಲೂಕಿನ ಪದಾಧಿಕಾರಿಗಳನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿ ಮತಯಾಚಿಸಿದರು

ಷಡಾಕ್ಷರಿ ರವರು ಮತ್ತು ಜುಮ್ಮನ್ನನವರು ಸಂಘದಲ್ಲಿ ಪ್ರಾದೇಶಿಕ ಸ್ಥಾನಮಾನ, ಸಾಮಾಜಿಕ ನ್ಯಾಯ, ಸಂಘ ದಲ್ಲಿ ಆರ್ಥಿಕ ಶಿಸ್ತು,ಪಾರದರ್ಶಕ ಆಡಳಿತ, ಮೂಲ ಭೂತ ಸೌಕರ್ಯಗಳ ವ್ಯವಸ್ಥೆ ಕಲ್ಪಿಸುವುದು, 5 ವರ್ಷ ಗಳ ಸಂಘಟನೆಯ ಹೋರಾಟ, ಸಂಘದ ಸಾಮಾಜಿಕ ಕಾರ್ಯಕ್ರಮಗಳು,ಬೆಂಗಳೂ ರಿನಲ್ಲಿ ನೌಕರರ ಭವನ, ಸುಸಜ್ಜಿತ ವಸತಿ ವ್ಯವಸ್ಥೆ, ತಾಲ್ಲೂಕು ಜಿಲ್ಲಾ ಸಂಘದ ಕಟ್ಟಡ –

ಭೌತಿಕ ಸೌಲಭ್ಯಗಳನ್ನು ನಿರ್ಮಿಸುವುದು ,ನೌಕರರ ಪರವಾಗಿ 25 ಕ್ಕೂ ಹೆಚ್ಚು ಸರ್ಕಾರಿ ಆದೇಶಗಳು, 17% ಮಧ್ಯಂತರ ಪರಿಹಾರ, 7ನೇ ವೇತನ ಆಯೋಗದ ಜಾರಿ, ಭವಿಷ್ಯದ ಹೆಜ್ಜೆಗಳು, NPS ರದ್ಧತಿ, ಕೇಂದ್ರ ಮಾದರಿ ವೇತನ, ನಗದು ರಹಿತ ಆರೋಗ್ಯ ಚಿಕಿತ್ಸೆ ಯೋಜನೆ ಮುಂತಾದ ನೌಕರರ ಪರ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ನವ ಮನ್ವಂತರದ ಮುಂದಣ ಹೆಜ್ಜೆ – ನಮ್ಮೊಂದಿಗೆ ಕೈಜೋಡಿಸಿ ಎಂದು ತಿಳಿಸಿದರು*

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಬಿ ಎ ಕುಂಬಾರ, ಗಂಗರೆಡ್ಡಿ, ಶಿವಾಜಿ ಬೆಳಗಾವಿ, ಎ ಬಿ ಬಸ್ತವಾಡ, ನಾಗರಾಜ್ ಕರನಿಂಗ ಬಸವರಾಜ ರಾಯವ್ವಗೋಳ, ಧಾರವಾಡದ ಎಂ ಎಫ್ ಸಿದ್ದನಗೌಡ್ರು,ಬಿಜಾಪುರದ ಸುರೇಶ್ ಸೇಡಶ್ಯಾಳ ರವರು ಎಲ್ಲಾ ತಾಲೂಕು ಅಧ್ಯಕ್ಷರುಗಳಾದ ಮಹಾದೇವ ಗೋಕಾರ ,

ಮಹಾಂತೇಶ ಹಾರೋಗೋಪ್ಪ, ಆನಂದ ಹಂಜ್ಯಾಗೋಳ, ಉಮೇಶ್ ಪೋಳ, ಅವಿನಾಶ ಹೊಳೆಯಪ್ಪಗೋಳ, ಶಿವನಗೌಡ ಬಾವಿ ವಿನಾಯಕ ಮಾಳಿ ಜಿಲ್ಲೆಯ ಕಾರ್ಯಕಾರಿ ಸಮಿತಿಯ ಸದಸ್ಯರು, ತಾಲೂಕ ಸಂಘದ ಕಾರ್ಯದರ್ಶಿ, ರಾಜ್ಯ ಪರಿಷತ್ ಸದಸ್ಯರು, ಖಜಾಂಚಿ ಸೇರಿದಂತೆ ಎಲ್ಲಾ ಪದಾಧಿಕಾರಿ ಗಳು,

ನಿರ್ದೇಶಕರುಗಳು, ರಾಜ್ಯ ಸಂಘದ ಕಾರ್ಯದರ್ಶಿ ಶ್ರೀನಿವಾಸ್ ತಿಮ್ಮೇಗೌಡರು, ರುದ್ರಪ್ಪ,ಗಿರಿಗೌಡರು, ಬಸವರಾಜ ಎಸ್, ಸದಾನಂದ, ಹರಿ ರಾಮಕೃಷ್ಣರವರು, ಪ್ರಶಾಂತ್, ಪಾಂಡುರಂಗ, ನಾಗಭೂಷಣ್, ದಿನೇಶ್, ಸರ್ವೇ ಇಲಾಖೆಯ ಬಸವರಾಜ್, ಚಂದ್ರಶೇಖರ್ ಸಿದ್ದಬಸಪ್ಪ,ಸತ್ಯರೆಡ್ಡಿ,ರಾಜಶೇಖರ್, ನವೀನ್ ಗಂಗಾರೆಡ್ಡಿ, ಕೊಪ್ಪಳ ಜಿಲ್ಲಾ ಕಾರ್ಯದರ್ಶಿ ಶಿವಪ್ಪ ಜೋಗಿ, ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರುಗಳು ಪ್ರಾಥಮಿಕ ಪ್ರೌಢ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು

ಸುದ್ದಿ ಸಂತೆ ನ್ಯೂಸ್ ಬೆಳಗಾವಿ……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.