ಶೈಕ್ಷಣಿಕ ಪ್ರವಾಸದ ಗೊಂದಲದ ಕುರಿತು ಸ್ಪಷ್ಟನೆ ನೀಡಿದ ಇಲಾಖೆ – ಶೈಕ್ಷಣಿಕ ಪ್ರವಾಸ ಮಾಡಬೇಕಾ ಮಾಡಬಾರದು ಪ್ರಶ್ನೆಗೆ ಆದೇಶದ ಮೂಲಕ ಉತ್ತರ ನೀಡಿದ ಇಲಾಖೆ…..

Suddi Sante Desk
ಶೈಕ್ಷಣಿಕ ಪ್ರವಾಸದ ಗೊಂದಲದ ಕುರಿತು ಸ್ಪಷ್ಟನೆ ನೀಡಿದ ಇಲಾಖೆ – ಶೈಕ್ಷಣಿಕ ಪ್ರವಾಸ ಮಾಡಬೇಕಾ ಮಾಡಬಾರದು ಪ್ರಶ್ನೆಗೆ ಆದೇಶದ ಮೂಲಕ ಉತ್ತರ ನೀಡಿದ ಇಲಾಖೆ…..

ಬೆಂಗಳೂರು

ಶಾಲೆಗಳ 2024-25 ನೇ ಸಾಲಿನ ‘ಶೈಕ್ಷಣಿಕ’ ಪ್ರವಾಸ ರದ್ದು ಮಾಡಲಾಗಿದೆಯಾ ಅಥವಾ ಇದೆನಾ ಈ ಒಂದು ಗೊಂದಲದ ಕುರಿತು ಇಲ್ಲಿದೆ ಮಹತ್ವದ ಮಾಹಿತಿ ಹೌದು ಶಾಲಾ ಶಿಕ್ಷಣ ಇಲಾಖೆಯ ಶಾಲೆಗಳ 2024-25 ನೇ ಸಾಲಿನ ಶೈಕ್ಷಣಿಕ ಪ್ರವಾಸ ಕುರಿತು ವಾಟ್ಸ್ ಆಪ್ ನಲ್ಲಿ ಕೆಲವೊಂದಿಷ್ಟು ವಿಚಾರ ಗಳು ಹರಿದಾಡುತ್ತಿದೆ ಎನ್ನಲಾದ ಸಂದೇಶದ ಕುರಿತು ಇಲಾಖೆಯು ಈಗ ಸೃಷ್ಟಿಕರಣವನ್ನು ನೀಡಿದೆ

ಶಾಲಾ ಶಿಕ್ಷಣ ಇಲಾಖೆಯ ಶಾಲೆಗಳ ವತಿಯಿಂದ 2024-25 ನೇ ಸಾಲಿನಲ್ಲಿ ಹಮ್ಮಿಕೊಳ್ಳಲಾಗುತ್ತಿ ರುವ ಶೈಕ್ಷಣಿಕ ಪ್ರವಾಸ ಕುರಿತು ವಾಟ್ಸ್ ಆಪ್ ನಲ್ಲಿ ಹರಿದಾಡುತ್ತಿರುವ ಎಲ್ಲಾ ಗೊಂದಲ ಗಳಿಗೆ ತೆರೆ ಎಳೆಯಲಾಗಿದೆ ಜಾಲತಾಣಗಳಲ್ಲಿ ಸದರಿ ಶೈಕ್ಷಣಿಕ ಪ್ರವಾಸ ರದ್ದು ಮಾಡಿರುವ ಬಗ್ಗೆ ಹಾಗೂ ಈಗಾಗಲೇ ಪುವಾಸ ಹೊರಟಿದ್ದಲ್ಲಿ ಕೂಡಲೇ ಹಿಂದಿರುಗಿ ಬರುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಸೂಚಿಸಿರುವುದಾಗಿ ವ್ಯಾಪಕವಾಗಿ ಪುಚಾರವಾಗಿರುವುದರಿಂದ ಈ ಕುರಿತು ಸೃಷ್ಟಿಕರಣವನ್ನು ನೀಡುವಂತೆ ಕೋರಿರು ತ್ತಾರೆ.

ಈ ಹಿನ್ನೆಲೆಯಲ್ಲಿ ಸೃಷ್ಟಿಕರಣ ನೀಡಲಾಗಿದ್ದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಈ ಮೇಲಿನಂತೆ ಶಾಲಾ ಶಿಕ್ಷಣ ಇಲಾಖೆಯ ಶಾಲೆ ಗಳ ವತಿಯಿಂದ 2024-25 ನೇ ಸಾಲಿನಲ್ಲಿ ಪ್ರಸ್ತುತ ಹಮ್ಮಿಕೊಳ್ಳಲಾಗುತ್ತಿರುವ ಶೈಕ್ಷಣಿಕ ಪ್ರವಾಸ ಮಾಡದಂತೆ  ಹಮ್ಮಿಕೊಂಡಿದ್ದಲ್ಲಿ ಕೂಡಲೇ ಹಿಂತಿರುಗಿ ಬರುವಂತೆ ಯಾವುದೇ ಸೂಚನೆ ನಿರ್ದೇಶನ ನೀಡಿರುವುದಿಲ್ಲ ಎಂದು ಸ್ಪಷ್ಟ ಪಡಿಸಲಾಗಿದೆ.

ಶಾಲಾ ಶಿಕ್ಷಣ ಇಲಾಖೆಯ ಶಾಲೆಗಳ ವತಿಯಿಂದ 2024-25 ನೇ ಸಾಲಿನಲ್ಲಿ ಪ್ರಸ್ತುತ ಹಮ್ಮಿಕೊಳ್ಳ ಲಾಗುತ್ತಿರುವ ಶೈಕ್ಷಣಿಕ ಪ್ರವಾಸಗಳನ್ನು ಉಲ್ಲೇಖ 2 ಮತ್ತು 3 ರಲ್ಲಿ ನೀಡಿರುವ ಸೂಚನೆಗಳು ಮತ್ತು ನಿರ್ದೇಶನಗಳಂತೆ ಅಂಶಗಳನ್ನೊಳಗೊಂಡಂತೆ ಡಿಸೆಂಬರ್ 2024 ಮಾಹೆಯೊಳಗೆ ಪೂರ್ಣ ಗೊಳಿಸುವಂತೆ ಸೂಚನೆ ನೀಡಲಾಗಿದೆ

 ಪ್ರವಾಸವನ್ನು ವ್ಯವಸ್ಥಿತವಾಗಿ ಕೈಗೊಳ್ಳಲು ಪೂರ್ವಭಾವಿಯಾಗಿ ಯೋಜನೆ ಯನ್ನು ಕೈಗೊಳ್ಳುವುದು ಹಾಗೂ ಅದರಂತೆ ಪುವಾಸ ವನ್ನು ಕೈಗೊಳ್ಳುವುದು.

ಪ್ರವಾಸದ ಸಂಧರ್ಭದಲ್ಲಿ ಮಕ್ಕಳನ್ನು ಯಾವುದೇ ಅಪಾಯಕಾರಿ ಸ್ಥಳಗಳಿಗೆ ಕರೆದುಕೊಂಡು ಹೋಗಬಾರದು,ಹಾಗೂ ಎಲ್ಲಾ ಸ್ಥಳಗಳಲ್ಲಿ ಮತ್ತು ಸಂದರ್ಭಗಳಲ್ಲಿ ಪ್ರವಾಸದ ಉಸ್ತುವಾರಿ ವಹಿಸಿದ ಸಿಬ್ಬಂದಿಯವರು ವಿದ್ಯಾರ್ಥಿಗಳ ಜೊತೆ ಇದ್ದುವಿದ್ಯಾರ್ಥಿಗಳ ಸುರಕ್ಷತೆ ಕುರಿತು ಎಲ್ಲ ಅವಶ್ಯ ಕ್ರಮಗಳನ್ನು ಕೈಗೊಳ್ಳುವುದು.

ಪ್ರವಾಸದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಉಂಟಾಗುವ ಯಾವುದೇ ಅವಘಡಕ್ಕೆ ಹಾನಿಗೆ ಸಂಭಂಧಿಸಿದ ಶಾಲಾ ಮುಖ್ಯಸ್ಥರು ಮತ್ತು ಪ್ರವಾಸದ ಉಸ್ತುವಾರಿ ವಹಿಸಿದ ಸಿಬ್ಬಂದಿಯವರೇ ಜವಾಬ್ದಾರರಾಗಿ ರುತ್ತಾರೆ ಅಂತ ತಿಳಿಸಲಾಗಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.