ಬೆಂಗಳೂರು –
ಮಕ್ಕಳಲ್ಲಿನ ಅಪೌಷ್ಟಿಕತೆ ತಡೆಗಟ್ಟಲು ನಿನ್ನೆ ಯಿಂದ ರಾಜ್ಯಾದ್ಯಂತ ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ ಆರಂಭಗೊಂಡಿದೆ.ಶಾಲೆಯ ಮುಖ್ಯೋಪಾಧ್ಯರು ಇಲ್ಲವೇ ಶಿಕ್ಷಕರಿಗೆ ಹೊಸ ಕರ್ತವ್ಯ ಗಳು ಆರಂಭವಾಗಲಿವೆ. ಹೌದು ಈಗಾಗಲೇ ರಾಜ್ಯದಲ್ಲಿ ಬಿಸಿಯೂಟ ಆರಂಭವಾ ಗಿದ್ದು ಇದರೊಂದಿಗೆ ಪ್ರಮುಖವಾಗಿ ಬಿಸಿಯೂಟದೊಂದಿಗೆ ಮೊಟ್ಟೆ ಮತ್ತು ಬಾಳೆಹಣ್ಣನ್ನು ನೀಡಲಾಗುತ್ತಿದ್ದು ಈ ಒಂದು ವಿಚಾರ ಕುರಿತಂತೆ ಈಗಾಗಲೇ ಇಲಾಖೆ ಆದೇಶವನ್ನು ಮಾಡಿದ್ದು ಸಧ್ಯ ಪೊಟೊ ವೊಂದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ಮೊಟ್ಟೆ ಬಾಳೆಹಣ್ಣು ಹೊತ್ತುಕೊಂಡು ಬೈಕ್ ಮೇಲೆ ಹೋಗುವ ಚಿತ್ರವೊಂದು ವೈರಲ್ ಆಗಿದೆ ಶಾಲೆಗೆ ಹೋಗುವ ಈ ಪೊಟೊ ಶಿಕ್ಷಕರ ಕರ್ತವ್ಯಕ್ಕೆ ಹಿಡಿದ ಕೈ ಕನ್ನಡಿ ಯಾಗಿದೆ.ಇದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು ಸದ್ದು ಮಾಡುತ್ತಿದೆ. ನಿಜಕ್ಕೂ ಕೂಡಾ ಈ ಒಂದು ಪೊಟೊ ಸಧ್ಯದ ಶಿಕ್ಷಕ ಅದರಲ್ಲೂ ಮುಖ್ಯೋಪಾ ಧ್ಯಾಯರ ಕರ್ತವ್ಯವನ್ನು ತೋರಿಸಲಿದ್ದು ದೇವರು ನಮ್ಮ ಶಿಕ್ಷಕರನ್ನು ಕಾಪಾಡಬೇಕು ಅಷ್ಟೇ.ಮತ್ತೊಂದು ಕರ್ತವ್ಯ ಜವಾಬ್ದಾರಿ ಆರಂಭಗೊಂಡಿದ್ದು ಇದಕ್ಕೆ ಪರ್ಯಾಯ ವ್ಯವಸ್ಥೆ ಯನ್ನು ಮಾಡಿ ನೇರವಾಗಿ ಶಾಲೆಗೆ ಮೊಟ್ಟೆ ಬರುವ ಹಾಗೇ ಮಾಡಬೇಕು