ಹುಬ್ಬಳ್ಳಿ-
ಸಿನಿಮಾ ಸ್ಟೈಲ್ ನಲ್ಲಿ ಹುಬ್ಬಳ್ಳಿಯ ಎಸ್ ಬಿಐ ಬ್ಯಾಂಕ್ ನಲ್ಲಿ ರಾಬರಿಗಿಳಿದಿದ್ದ ಆರೋಪಿ ಅಂದರ್ ಪ್ರಕರಣ ಕುರಿತು
ಬ್ಯಾಂಕ್ ನ ಸಿಸಿಟಿವಿಯಲ್ಲಿ ಆರೋಪಿ ಹೇಗೆ ಬ್ಯಾಂಕ್ ಗೆ ನುಗ್ಗಿದ್ದ ಎಂಬ ಕುರಿತು ಬ್ಯಾಂಕ್ ನ ಸಿಸಿ ಟಿವಿಯಲ್ಲಿ ವಿಡಿಯೋ ಸೆರೆಯಾಗಿದೆ.ಹೌದು ದರೋಡೆಕೋರನ ಚಲನವಲನ ಸೇರಿದಂತೆ ಎಲ್ಲವೂ ಬ್ಯಾಂಕ್ ನ ಸಿಸಿ ಟಿವಿ ಯಲ್ಲಿ ಸೆರೆಯಾಗಿವೆ ಥೇಟ್ ಸಿನಿಮಿಯ ಸ್ಟೈಲ್ ನಲ್ಲಿ ಎಂಟ್ರಿಕೊಟ್ಟಿದ್ದಾನೆ ಖದೀಮನು.ಕೈ ಯಲ್ಲಿ ಚಾಕು ಹಿಡಿದು ಮಂಕಿ ಕ್ಯಾಪ್ ಧರಿಸಿ ಕ್ಯಾಶಿಯರ್ ಛೇಂಬರ್ ಗೆ ನುಗ್ಗಿದ್ದ.
ದರೋಡೆಕೋರನನ್ನ ನೋಡಿ ಒಂದು ಕ್ಷಣ ಬೆಚ್ಚಿಬಿದ್ದಿದ್ದ ಮಹಿಳಾ ಸಿಬ್ಬಂದಿ.ಮಹಿಳೆಗೆ ಚಾಕು ತೋರಿಸಿ ಬೆದರಿಸಿ ಹಣ ದರೋಡೆ.ಬ್ಯಾಂಕ್ ದರೋಡೆಯ ಸಿಸಿಟಿವಿ ದೃಶ್ಯ ಸುದ್ದಿ ಸಂತೆ ಗೆ ಲಭ್ಯವಾಗಿದೆ.ಜನವರಿ 18 ರಂದು ಹುಬ್ಬಳ್ಳಿ ಕೊಪ್ಪಿಕರ್ ರಸ್ತೆಯ ಎಸ್ ಬಿಐ ಬ್ಯಾಂಕ್ ನಲ್ಲಿ ನಡೆದಿದ್ದ ದರೋಡೆ ಪ್ರಕರಣ ಇದಾಗಿದೆ.ತನ್ನ ಮದುವೆಯನ್ನ ಅದ್ದೂರಿಯಾಗಿ ಮಾಡಿಕೊಳ್ಳಲು ದರೋಡೆ ಮಾಡಿದ್ದ.
ವಿಜಯಪುರ ಮೂಲದ ಪ್ರವೀಣ್ ಎಂಬಾತ ದರೋಡೆ ಮಾಡಿದ್ದನು.ಹಾಡಹಗಲೇ ದರೋಡೆ ಮಾಡಿದ್ದ.
ದರೋಡೆ ಹೊರಬರುವಷ್ಟರಲ್ಲಿ ಖಾಕಿ ಪಡೆ ಮಾಸ್ಟರ್ ಚೇಸಿಂಗ್ ಮೂಲಕ ಆತನನ್ನ ಬಂಧಿಸಿತ್ತು.ಬಂಧಿತನಿಂದ 6.39 ಲಕ್ಷ ವಶಪಡಿಸಿಕೊಂಡಿತ್ತು.ಸಧ್ಯ ಆ ಭಯಾನಕ ಸಿಸಿಟಿವಿ ದೃಶ್ಯ ಸುದ್ದಿ ಸಂತೆ ಗೆ ಲಭ್ಯವಾಗಿದೆ.
ಪರಶು ಗೌಡರ ಜೊತೆ ಮಂಜುನಾಥ ಸರ್ವಿ ಸುದ್ದಿ ಸಂತೆ ಹಿರಿಯ ವರದಿಗಾರ