ಹುಬ್ಬಳ್ಳಿ –
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿ ನಡೆದ ಮಹಿಳೆಯೊಬ್ಬರ ಮೇಲಿನ ಅತ್ಯಾಚಾರ ಕೊಲೆ ಪ್ರಕರಣ ವನ್ನು ಕುಂದಗೋಳ ಮತ್ತು ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಜಂಟಿಯಾಗಿ ಬೇಧಿಸಿದ್ದಾರೆ.ಹೌದು ಘಟನೆ ನಡೆದು 24 ಗಂಟೆ ಕಳೆಯುವದರೊಳಗಾಗಿ ಕಾರ್ಯಾ ಚರಣೆ ನಡೆಸಿ ಆರೋಪಿಯನ್ನು ಬಂಧನ ಮಾಡಿದ್ದಾರೆ ಹೌದು ದರೋಡೆ ಉದ್ದೇಶದಿಂದ ಮಹಿಳೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಮೊಹಮ್ಮದ್ ಅಲಿ ಕೋಲಕಾರ ಎಂಬ ಆರೋಪಿಯನ್ನು ಬಂಧನ ಮಾಡಲಾ ಗಿದೆ

ಹೌದು ಹುಬ್ಬಳ್ಳಿಯಲ್ಲಿ ಧಾರವಾಡ ಪೊಲೀಸ್ ವರಿಷ್ಠಾ ಧಿಕಾರಿ ಪಿ.ಕೃಷ್ಣಕಾಂತ್ ಸುದ್ದಿಗೋಷ್ಠಿ ನಡೆಸಿ ಪ್ರಕರಣ ಕುರಿತು ಮಾಹಿತಿಯನ್ನು ನೀಡಿದರು.ಘಟನೆ ನಡೆದು ಕೇವಲ 24 ಗಂಟೆಯೊಳಗಾಗಿ ಕೊಲೆ ಆರೋಪಿಯನ್ನು ನಮ್ಮ ಪೊಲೀಸರು ಬಂಧನ ಮಾಡಿದ್ದಾರೆ.ಯರಗುಪ್ಪಿ ಗ್ರಾಮದ ಮಹಮ್ಮದ್ ಅಲಿ ಮಕ್ಬುಲಾ ಕೋಲಕಾರ ಬಂಧಿತ ಆರೋಪಿಯಾಗಿದ್ದಾನೆ.
ಉರುವಲು ಕಟ್ಟಿಗೆ ತರಲು ಹೋಗಿದ್ದ ಲಕ್ಷ್ಮೀ ಕಳ್ಳಿಮನಿ ಎಂಬ ಮಹಿಳೆಯನ್ನು ಹಾಡುಹಗಲೇ ಕೊಲೆ ಮಾಡಿದ್ದ ಆರೋಪಿ.ಕೊಲೆ ಮಾಡಿ ಮಹಿಳೆಯ ಮೈಮೇಲಿನ ಬಂಗಾರದ ಆಭರಣಗಳನ್ನ ದೋಚಿ ಪರಾರಿಯಾಗಿದ್ದ ಆರೋಪಿ.ಕೊಲೆ ಮಾಡಿ ನಂತರ ಕೋಲಾರ ಜಿಲ್ಲೆಯಲ್ಲಿ ತಲೆಮರೆಸಿಕೊಂಡಿದ್ದನು ಮಹಮ್ಮದ ಅಲಿ ಕೋಲಕಾರ.


ಕೇವಲ 24 ಗಂಟೆಯಲ್ಲಿ ಆರೋಪಿಯನ್ನ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಮತ್ತು ಕುಂದಗೋಳ ಪೊಲೀಸರು ಬಂದ್ನ ಮಾಡಿದ್ದಾರೆ.ರಮೇಶ ಗೋಕಾಕ ನೇತೃತ್ವದಲ್ಲಿ ದಲ್ಲಿನ ಟೀಮ್ ಕಾರ್ಯಾಚರಣೆ ನಡೆಸಿ ಆರೋಪಿ ಯನ್ನು ಬಂಧನ ಮಾಡಲಾಗಿದೆ.ಆರೋಪಿಯಿಂದ ಎಂಟು ಗ್ರಾಂ ಚಿನ್ನವನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಪೊಲೀಸರು.