ನವದೆಹಲಿ –
ಕೇಂದ್ರ ಸರ್ಕಾರಿ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಅಥವಾ ಡಿಎ ಯನ್ನು ಶೇ.3 ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು ಡಿಎಯನ್ನು ಶೇ.31ರಿಂದ ಶೇ.34ಕ್ಕೆ ಹೆಚ್ಚಿ ಸಲು ಒಪ್ಪಿಗೆಯನ್ನು ನೀಡಿದೆ.ಹೌದು ಕೇಂದ್ರ ಸರ್ಕಾರದ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ತುಟ್ಟಿಭತ್ಯೆ ಅಥವಾ ಡಿಎ ಹೆಚ್ಚಳವು ಇಂಧನದ ಬೆಲೆಗಳು ಮತ್ತು ಹೆಚ್ಚುತ್ತಿರುವ ಹಣದುಬ್ಬರದ ನಡುವೆ ಕೇಂದ್ರ ಸರ್ಕಾರಿ ನೌಕರರಿಗೆ ಪರಿಹಾರವಾಗಿದೆ.
ಇನ್ನೂ covid -19 ಸಾಂಕ್ರಾಮಿಕ ರೋಗದಿಂದಾಗಿ ಡಿಎ ಹೆಚ್ಚಳವು ಸ್ಥಗಿತಗೊಂಡಿತ್ತು ನೌಕರರ ವೇತನದ ಮೇಲಿನ ಹಣದುಬ್ಬರದ ಪರಿಣಾಮವನ್ನು ಸರಿದೂಗಿಸಲು ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ನೀಡಲಾಗುತ್ತದೆ.ಇದು ನೌಕರರು ಮತ್ತು ಪಿಂಚಣಿದಾರರಿಬ್ಬರಿಗೂ ಅನ್ವಯಿಸುತ್ತದೆ ಕೇಂದ್ರ ಸರಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಈ ಹಿಂದೆ ನೀಡಲಾಗುತ್ತಿದ್ದ ತುಟ್ಟಿಭತ್ಯೆ ಶೇ.31ರಷ್ಟಿದ್ದು, ಸಭೆ ಯಲ್ಲಿ ಘೋಷಿಸಿದ್ದ ಶೇ.3ರಷ್ಟು ಡಿಎಯನ್ನು ಶೇ.34ಕ್ಕೆ ಹೆಚ್ಚಿಸಲಾಗಿದೆ.
ಈ ನಿರ್ಧಾರವು ಸುಮಾರು 50 ಲಕ್ಷ ಸರ್ಕಾರಿ ನೌಕರರು ಮತ್ತು 65 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವನ್ನು ನೀಡುತ್ತದೆ.ಕಳೆದ ವರ್ಷ ಅಕ್ಟೋಬ ರ್‌ನಲ್ಲಿ 28 ಪ್ರತಿಶತ ದಿಂದ 31 ಪ್ರತಿಶತಕ್ಕೆ ಹೆಚ್ಚಿಸಿದಾಗ ಕೊನೆಯ ಡಿಎ ಹೆಚ್ಚಳ ವನ್ನು ನೀಡಲಾಯಿತು.