ತೆಲಂಗಾಣ –
ಕಂದಾಯ ಇಲಾಖೆಯ ಅಧಿಕಾರಿ ಯೊಬ್ಬರ ಮನೆಯಲ್ಲಿ ಕೋಟ್ಯಾಂತರ ರೂಪಾಯಿ ಹಣ ಮತ್ತು ಆಸ್ತಿ ಪಾಸ್ತಿ ಪತ್ತೆಯಾದ ಘಟನೆ ತೆಲಂಗಾಣ ದಲ್ಲಿ ನಡೆದಿದೆ.ಹೈದರಾಬಾದ್‌ನ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ತಂಡ ನಿಜಾಮಾಬಾದ್ ಮಹಾನಗರ ಪಾಲಿಕೆಯ ಅಧೀಕ್ಷಕ ಹಾಗೂ ಪ್ರಭಾರಿ ಕಂದಾಯ ಅಧಿಕಾರಿ ದಾಸರಿ ನರೇಂದರ್ ಅವರ ನಿವಾಸದ ಮೇಲೆ ದಾಳಿ ನಡೆಸಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪಾಸ್ತಿ ಪತ್ತೆಯಾಗಿದೆ .
ಹೈದರಾಬಾದ್ ನಲ್ಲಿ ಮತ್ತೊಂದು ಭ್ರಷ್ಟ ತಿಮಿಂಗಿಲ ಎಸಿಬಿ ಬಲೆಗೆ ಬಿದ್ದಿದೆ. ನಿಜಾಮಾ ಬಾದ್ ನಗರಸಭೆ ಕಚೇರಿಯಲ್ಲಿ ಸೂಪರಿಂಟೆಂ ಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ದಾಸರಿ ನರೇಂದ್ರನ್ ಅವರ ನಿವಾಸದ ಮೇಲೆ ದಾಳಿ ನಡೆಸಿದ ಅಧಿಕಾರಿಗಳೇ ಶಾಕ್ ಗೆ ಒಳಗಾಗೊದ್ದರೆ ಅಂದರೆ ಅಷ್ಟು ಮೌಲ್ಯದ ನಗ ನಗದು ಅಧಿಕಾ ರಿಯ ಮನೆಯಲ್ಲಿ ಪತ್ತೆಯಾಗಿದೆ.
ಆದಾಯಕ್ಕಿಂತಲೂ ಅಧಿಕ ಆಸ್ತಿ ಹೊಂದಿರುವ ಬಗ್ಗೆ ಮಾಹಿತಿ ಪಡೆದ ಎಸಿಬಿ ಅಧಿಕಾರಿಗಳು ದಾಸರಿ ಅವರ ನಿವಾಸದ ಮೇಲೆ ದಾಳಿ ನಡೆಸಿ ದ್ದಾರೆ ಮನೆ ಶೋಧ ನಡೆಸಿದ ವೇಳೆ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದ್ದು ಲೆಕ್ಕಾಚಾರ ಮಾಡಿದ ವೇಳೆ ಮೂರೂ ಕೋಟಿ ರೂಪಾಯಿ ನಗದು ಇರುವುದು ಬೆಳಕಿಗೆ ಬಂದಿದೆ.ನರೇಂದರ್ ಅವರ ಬ್ಯಾಂಕ್ ಖಾತೆಯಲ್ಲಿ 10 ಲಕ್ಷ ರೂ. ಮನೆಯ ಟ್ರಂಕ್‌ನಲ್ಲಿ ಅರ್ಧ ಕಿಲೋ ಚಿನ್ನ ಮತ್ತು ಸ್ಥಿರಾಸ್ತಿಗೆ ಸಂಬಂಧಿಸಿದ 17 ದಾಖಲೆಗಳು ಪತ್ತೆಯಾಗಿವೆ.
ಈವರೆಗೆ ನಡೆಸಿದ ಶೋಧದಲ್ಲಿ ದಾಸರಿ ನರೇಂದರ್ ಅವರಿಂದ ವಶಪಡಿಸಿಕೊಂಡಿರುವ ಒಟ್ಟು ಆಸ್ತಿ ಮೌಲ್ಯ 6.07 ಕೋಟಿ ರೂ ಆಗಿದೆ ಎಂದು ಹೇಳಲಾಗಿದೆ.ತಂದೆಯ ಮರಣದ ನಂತರ ಅನುಕಂಪದ ಆಧಾರದ ನರೇಂದರ್ ಅವರಿಗೆ ಹುದ್ದೆ ನೀಡಲಾಗಿತ್ತು ನರೇಂದರ್ ವಿರುದ್ಧ ಭ್ರಷ್ಟಾ ಚಾರ ತಡೆ ಕಾಯಿದೆ ಸೆಕ್ಷನ್ 13(1)(ಬಿ) ಮತ್ತು 13(2), ಅಡಿಯಲ್ಲಿ ಪ್ರಕರಣ ದಾಖಲಿಸಿ ವಶಕ್ಕೆ ಪಡೆದುಕೊಳ್ಳಲಾಗಿದೆ
ತಂದೆಯ ಮರಣದ ನಂತರ ಅನುಕಂಪದ ಆಧಾರದ ನರೇಂದರ್ ಅವರಿಗೆ ಹುದ್ದೆ ನೀಡ ಲಾಗಿತ್ತು, ನರೇಂದರ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯಿದೆ, ಸೆಕ್ಷನ್ 13(1)(ಬಿ) ಮತ್ತು 13(2), ಅಡಿಯಲ್ಲಿ ಪ್ರಕರಣ ದಾಖಲಿಸಿ ವಶಕ್ಕೆ ಪಡೆದು ಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ತೆಲಂಗಾಣ…..