This is the title of the web page
This is the title of the web page

Live Stream

[ytplayer id=’1198′]

July 2024
T F S S M T W
 123
45678910
11121314151617
18192021222324
25262728293031

| Latest Version 8.0.1 |

National News

ಭೀಕರ ಅಪಘಾತ 18 ಜನ ಸಾವು – ಹಾಲಿನ ಟ್ಯಾಂಕರ್ ಬಸ್ ನಡುವೆ ಅಪಘಾತ…..

ಭೀಕರ ಅಪಘಾತ 18 ಜನ ಸಾವು – ಹಾಲಿನ ಟ್ಯಾಂಕರ್ ಬಸ್ ನಡುವೆ ಅಪಘಾತ…..
WhatsApp Group Join Now
Telegram Group Join Now

ಉ‌ನ್ನಾವ್‌

ಬಸ್ ಮತ್ತು ಹಾಲಿನ ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ 18 ಜನ ಮೃತ ಪಟ್ಟಿರುವ ಘಟನೆ ಉತ್ತರ ಪ್ರದೇಶದ ಉನ್ನಾವ್‌ ಬಳಿ ನಡೆದಿದೆ.ಮಗು ಮಹಿಳೆಯರು ಸೇರಿದಂತೆ 18 ಮಂದಿ ಸಾವನ್ನಪ್ಪಿದ್ದು ಉನ್ನಾವೊದ ಲಕ್ನೋ-ಆಗ್ರಾ ಎಕ್ಸ್ಪ್ರೆಸ್ವೇಯಲ್ಲಿ ಅಪಘಾತ ಸಂಭವಿಸಿದೆ ಬೆಹ್ತಾ ಮುಜಾವರ್ ಪ್ರದೇಶದ ಗರ್ಹಾ ಗ್ರಾಮದ ಬಳಿ ಮುಂದೆ ಚಲಿಸುತ್ತಿದ್ದ ಹಾಲಿನ ಟ್ಯಾಂಕರ್ ನ ಹಿಂಭಾಗಕ್ಕೆ ಸ್ಲೀಪರ್ ಬಸ್ ಡಿಕ್ಕಿ ಹೊಡೆದಿದೆ.

ಈ ಅಪಘಾತದಲ್ಲಿ ಮಗು ಸೇರಿದಂತೆ 18 ಜನರು ಸಾವನ್ನಪ್ಪಿದ್ದು 20 ಜನರು ಗಾಯಗೊಂಡಿದ್ದಾರೆ. ಮುಂಜಾನೆ 5:30 ರ ಸುಮಾರಿಗೆ ಅಪಘಾತ ಸಂಭವಿಸಿದೆ.ಸ್ಲೀಪರ್ ಬಸ್ ಹಿಂದಿನಿಂದ ಮುಂದೆ ಚಲಿಸುತ್ತಿದ್ದ ಹಾಲಿನ ಟ್ಯಾಂಕರ್ ಗೆ ಡಿಕ್ಕಿ ಹೊಡೆ ದಿದೆ ಅಪಘಾತದ ನಂತರ ಕಿರುಚಾಟ ಸ್ಥಳದಲ್ಲಿ ಕೇಳಿ ಬಂದಿತು ಸ್ಥಳಕ್ಕೆ ರಕ್ಷಣಾ ಟೀಮ್ ಆಗಮಿಸಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.

ಬಂಗಾರಮೌ, ಬೆಹ್ತಮುಜಾವರ್ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸಹಾಯದಿಂದ ಬಸ್ಸಿನಲ್ಲಿ ಸಿಲುಕಿದ್ದ ಜನರನ್ನು ಹೊರತೆಗೆಯಲಾಯಿತು.ಬಸ್ ಬಿಹಾರದಿಂದ ದೆಹಲಿಗೆ ಹೋಗುತ್ತಿತ್ತು ಅದರಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ಕಾರ್ಮಿಕರು ಪ್ರಯಾಣಿಸುತ್ತಿದ್ದರು

ಬಸ್ಸಿನಲ್ಲಿ ಸುಮಾರು 50 ಜನರಿದ್ದರು ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ ಎಂಬ ಶಂಕೆ ಯನ್ನು ವ್ಯಕ್ತಪಡಿಸಿದ್ದು ಮೃತರ ಹೆಸರುಗಳು ಮತ್ತು ವಿಳಾಸಗಳು ಮತ್ತು ಗಾಯ ಗೊಂಡವರೆಲ್ಲರನ್ನು ಬಂಗರ್ಮೌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುದ್ದಿ ಸಂತೆ ನ್ಯೂಸ್ ಉನ್ನಾವ್……


Google News

 

 

WhatsApp Group Join Now
Telegram Group Join Now
Suddi Sante Desk