ಬಿಹಾರ –
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪದಿಂದ ಬಿಹಾರದಲ್ಲಿ ಸರ್ಕಾರಿ ಕಚೇರಿ ಶಾಲಾ ಸಮಯದಲ್ಲೇ ಬದಲಾವಣೆಗಳನ್ನು ಮಾಡಿ ಆದೇಶವನ್ನು ಮಾಡಲಾಗಿದೆ ಹೌದು ಬಿಹಾರ ಬಿಸಿಗಾಳಿಯ ಬಿಗಿ ಹಿಡಿತಕ್ಕೆ ಒಳಗಾಗಿ ತತ್ತರಿಸುತ್ತಿದೆ.ಹೀಗಾಗಿ ರಾಜಧಾನಿ ಪಾಟ್ನಾ ಸೇರಿದಂತೆ ರಾಜ್ಯದ ಹಲವು ಜಿಲ್ಲಾಡಳಿತಗಳು ಶಾಲಾ ಸಮಯವನ್ನು ಬದಲಾಯಿಸಲು ನಿರ್ಧರಿಸಿವೆ.
ಮುಂಜಾನೆ 6.30ರಿಂದ ಬೆಳಗ್ಗೆ 11.30ರವರೆಗೆ ಕ್ಲಾಸ್
ವರದಿಯ ಪ್ರಕಾರ, ಪಾಟ್ನಾ, ರೋಹ್ತಾಸ್, ಸಮಸ್ತಿಪುರ್, ಜಮುಯಿ, ಕೈಮೂರ್, ಸಿತಾಮರ್ಹಿ, ಪೂರ್ಣಿಯಾ, ಶೇಖ್‌ಪುರ, ಭೋಜ್‌ಪುರ ಮತ್ತು ಪಶ್ಚಿಮ ಚಂಪಾರಣ್ ನಂತಹ ಜಿಲ್ಲೆಗಳು ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಬೆಳಗಿನ ವೇಳೆಯಲ್ಲಿ ನಡೆಸಲು ನಿರ್ಧರಿಸಿವೆ. ಅಂದರೆ.ಬೆಳಿಗ್ಗೆ 6:30 ರಿಂದ 11:30 ರವರೆಗೆ ಮಾತ್ರ ತರಗತಿ ನಡೆಸಲು ನಿರ್ಧರಿಸಿವೆ. ಈ ವ್ಯವಸ್ಥೆಯು ಬೇಸಿಗೆ ರಜೆ ಪ್ರಾರಂಭವಾಗುವವರೆಗೆ ಮುಂದುವರಿಯುತ್ತದೆ
ಕಳೆದ ತಿಂಗಳ ಹವಾಮಾನ ವರದಿ
ಕಳೆದ ತಿಂಗಳು ಒಟ್ಟಾರೆ ದೇಶದ ಸರಾಸರಿ ಗರಿಷ್ಠ, ಕನಿಷ್ಠ ಮತ್ತು ಸರಾಸರಿ ತಾಪಮಾನ ಕ್ರಮವಾಗಿ 33.10 ಡಿಗ್ರಿ ಸಿ, 20.24 ಡಿಗ್ರಿ ಸಿ ಮತ್ತು 26.67 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಕ್ರಮವಾಗಿ ಸಾಮಾನ್ಯ 31.24 ಡಿಗ್ರಿ ಸಿ, 18.87 ಡಿಗ್ರಿ ಸಿ ಮತ್ತು 25.06 ಡಿಗ್ರಿ ಸಿ ಆಗಿದೆ ಎಂದು ಐಎಂಡಿ ಹೇಳಿದೆ. , 1981-2010 ರ ಅವಧಿಯಲ್ಲೇ ಈ ಮಾರ್ಚ್ ತಿಂಗಳಲ್ಲಿ ಅತ್ಯಂಕತ ಉಷ್ಣ ದಾಖಲಾಗಿದೆ.