ಕೃಷ್ಣಗಿರಿ –
ರಂಜಾನ್ ಉಪವಾಸವನ್ನ ಮುರಿಯುವಂತೆ ವಿದ್ಯಾರ್ಥಿ ಗಳಿಗೆ ಸಲಹೆ ನೀಡಿದ ಇಬ್ಬರು ಶಿಕ್ಷಕರ ನಡೆಯನ್ನ ಖಂಡಿಸಿ ಕೋರಲನಾಥಂನ ಸರ್ಕಾರಿ ಪ್ರೌಢಶಾಲೆಯ ಮುಸ್ಲಿಂ ವಿದ್ಯಾರ್ಥಿಗಳ ಪೋಷಕರು ಪ್ರತಿಭಟನೆ ನಡೆಸಿದರು. ಅಲ್ಲದೇ ಪರಿಣಾಮ ಶಿಕ್ಷಣ ಇಲಾಖೆ ತನಿಖೆ ನಡೆಸಿ ಆ ಶಿಕ್ಷಕರನ್ನು ವರ್ಗಾವಣೆ ಮಾಡಿದೆ.ಮೂಲಗಳ ಪ್ರಕಾರ ದೈಹಿಕ ಶಿಕ್ಷಣ ಅವಧಿಯಲ್ಲಿ ಪಿಟಿ ಶಿಕ್ಷಕ ಸೆಂಥಿಲ್ ಕುಮಾರ್ ವಾಡಿಕೆಯ ಅಥ್ಲೆಟಿಕ್ ವ್ಯಾಯಾಮದ ಸಮಯದಲ್ಲಿ ಕೆಲವು ವಿದ್ಯಾರ್ಥಿಗಳು ಹಿಂದೆ ಬಿದ್ದಿರುವುದನ್ನು ಗಮನಿಸಿ ದ್ದಾರೆ.ಅವರನ್ನ ಪ್ರಶ್ನಿಸಿದಾಗ ವಿದ್ಯಾರ್ಥಿಗಳು ರಂಜಾನ್ ಉಪವಾಸ ಇರುವುದರಿಂದ ತಾವು ದಣಿದಿದ್ದೇವೆ ಎಂದಿ ದ್ದಾರೆ.ನಂತ್ರ ಆ ಶಿಕ್ಷಕ ಮತ್ತು ಗಣಿತ ಶಿಕ್ಷಕ ಶಂಕರನ್ ವಿದ್ಯಾರ್ಥಿಗಳಿಗೆ ಉಪವಾಸವನ್ನ ಕೈಬಿಡುವಂತೆ ಸಲಹೆ ನೀಡಿದ್ದಾರೆ.
ಇದು ಅವರ ಆರೋಗ್ಯ ಮತ್ತು ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದು ಈ ಒಂದು ಸುದ್ದಿ ಎಲ್ಲೆಡೆ ಹರಡಿತು ಮತ್ತು ಶಾಲೆಯಲ್ಲಿನ ಮುಸ್ಲಿಂ ವಿದ್ಯಾರ್ಥಿಗಳ ಪೋಷಕರು ಇಬ್ಬರು ಶಿಕ್ಷಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.300ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೋಷಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪೋಷಕರನ್ನು ಸಮಾಧಾನ ಪಡಿಸಲು ಪೊಲೀಸರು ಪ್ರಯತ್ನಿಸಿದರೂ ಪ್ರತಿಭಟನೆ ಸುಮಾರು ಎರಡು ಗಂಟೆಗಳ ಕಾಲ ಮುಂದುವರಿಯಿತು.ನಂತರ ಶಿಕ್ಷಣ ಇಲಾಖೆ ಭರವಸೆ ನೀಡಿದ ನಂತರವೇ ಪ್ರತಿಭಟನಾಕಾರರು ಮನೆಗೆ ಹಿಂದಿರು ಗಿದ್ದಾರೆ ಸಧ್ಯ ಇಬ್ಬರು ಶಿಕ್ಷಕರನ್ನು ವರ್ಗಾವಣೆ ಮಾಡಿ ಶಿಕ್ಷೆ ನೀಡಲಾಗಿದೆ