ಬೆಂಗಳೂರು –
ಬಹುನಿರೀಕ್ಷಿತ ಕಲಿಕಾ ಚೇತರಿಕೆ ಕಾಟಾಚಾರಕ್ಕೆ ಅನುಷ್ಠಾನ ವಾಗುತ್ತಿದೆಯೇ ಹೌದು ಕೋವಿಡ್‌ನಿಂದಾಗಿ ಹಳಿ ತಪ್ಪಿರುವ ಮಕ್ಕಳ ಕಲಿಕಾ ಚಟುವಟಿಕೆಗಳನ್ನು ಸರಿ ದಾರಿಗೆ ತರಲು ಸರ್ಕಾರ ಹಲವು ಪರಿಣಾಮಕಾರಿ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುತ್ತಿದೆ.ಆದರೆ ಅನುಷ್ಠಾನದ ಆರಂಭ ದಲ್ಲಿ ಅನಪೇಕ್ಷಣೀಯವಾದ ವಿಳಂಬ ಧೋರಣೆಯಿಂದ ಅಮೂಲ್ಯ ಪ್ರಯತ್ನಗಳು ಹರಿಯುವ ನೀರಲ್ಲಿ ಹುಣಸೆ ಹಣ್ಣು ತೊಳೆದಂತೆ ನಿರರ್ತಕವಾಗುತ್ತಿವೆ.ಕೇಂದ್ರ ಸರ್ಕಾರದ ಎನ್‌ಸಿಇಆರ್‌ಟಿ 3ರಿಂದ 9 ವರ್ಷದ ವಿದ್ಯಾರ್ಥಿಗಳಿಗೆ ವಿದ್ಯಾಪ್ರವೇಶ ಎಂಬ ಮಹತ್ವದ ಯೋಜನೆ ಘೋಷಣೆ ಮಾಡಿದೆ.ಹಾಗೆಯೇ ರಾಜ್ಯ ಸರ್ಕಾರ 1ರಿಂದ 9ನೇ ತರಗತಿ ಯ ಮಕ್ಕಳಿಗೆ ಕಲಿಕಾ ಚೇತರಿಕೆ ಯೋಜನೆಯನ್ನು ದೇಶ ದಲ್ಲೇ ಮೊದಲ ಬಾರಿಗೆ ರೂಪಿಸಿದೆ.
ಈ ವಿದ್ಯಾ ಪ್ರವೇಶ ಮಕ್ಕಳು ತರಗತಿಗೆ ಬರುವ ಮುನ್ನ ಅಗತ್ಯವಿರುವ ಮೂಲ ಕಲಿಕೆಗಳನ್ನು ಅರಗಿಸಿಕೊಳ್ಳಲು ಕ್ರೀಡೆ ಹಾಗೂ ಚಟುವಟಿಕೆ ಆಧರಿತ ಕಾರ್ಯಕ್ರಮವಾಗಿದೆ. ಎನ್‌ಸಿಇಆರ್‌ಟಿ ಇದನ್ನು ರೂಪಿಸಿದ್ದು ದೇಶಾದ್ಯಂತ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಸಾರ ಜಾರಿಗೊ ಳ್ಳುತ್ತಿದೆ.ಕಳೆದ ಎರಡು ವರ್ಷಗಳಿಂದ ಭೌತಿಕ ತರಗತಿಗಳು ಇಲ್ಲದೆ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಕುಂದಿ ಹೋಗಿವೆ ಇದು ಭವಿಷ್ಯದಲ್ಲಿ ಮಕ್ಕಳ ಜ್ಞಾನಾರ್ಜನೆ ಮೇಲೆ ಗಂಭೀರ ಪರಿಣಾಮ ಬೀರುವುದನ್ನು ಅರಿತ ರಾಜ್ಯ ಸರ್ಕಾರ 2022 23ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಕಲಿಕಾ ಚೇತರಿಕೆ ಎಂಬ ಕಾರ್ಯಕ್ರಮವನ್ನು ರೂಪಿಸಿದೆ.ಮಾ.4ರಂದೇ ಈ ಕುರಿತು ಸುತ್ತೋಲೆ ಹೊರಡಿಸಿದ್ದು ಕ್ಲಸ್ಟರ್ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಅಧಿಕಾರಿಗಳಿಗೆ ಜವಾಬ್ದಾರಿಗಳನ್ನು ಹಂಚಲಾಗಿದೆ.ಇದಕ್ಕಾಗಿ ಆರು ಭಾಷಗಳು ಐಚ್ಚಿಕ ವಿಷಯ ಗಳಾದ ಗಣಿತ,ಪರಿಸರ ಅಧ್ಯಯನ,ಸಮಾಜ ವಿಜ್ಞಾನ ವಿಜ್ಞಾನ ಸೇರಿದಂತೆ ಹಲವು ಚಟುವಟಿಕೆಗಳಿಗೆ ಪ್ರತ್ಯೇಕ ಪಠ್ಯ ಪುಸ್ತಕ ರೂಪಿಸಲಾಗಿದೆ.ಸರಿಸುಮಾರು ಎರಡು ಕೋಟಿಗೂ ಹೆಚ್ಚು ಪುಸ್ತಕಗಳನ್ನು ಮುದ್ರಿಸಿ ಮೇ 15ರ ಒಳಗೆ ಶಾಲೆಗೆ ವಿತರಿಸಬೇಕು ಎಂದು ಸರ್ಕಾರ ಆದೇಶಿಸಿದೆ
ಕಲಿಕಾ ಚೇತರಿಕೆಯನ್ನು ಶಿಕ್ಷಣ ಸಚಿವರು ಮಾ.18ರಂದು ಉದ್ಘಾಟಿಸಿದ್ದಾರೆ.
ಒಂದೆಡೆ ಕಾರ್ಯಕ್ರಮ ಜಾರಿಗೆ ಸರ್ಕಾರ ಬದ್ಧತೆ ಹಾಗೂ ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸುತ್ತಿದ್ದರೆ. ಮತ್ತೊಂದೆಡೆ ಅಗತ್ಯ ಸಲಕರಣೆಗಳನ್ನು ಒದಗಿಸುವಲ್ಲಿ ವಿಳಂಬ ಧೋರ ಣೆಗಳನ್ನು ಅನುಸರಿಸಲಾಗುತ್ತಿದೆ.ಸರ್ಕಾರಿ ವ್ಯವಸ್ಥೆಗಳ ಪ್ರಕಾರ ಯಾವುದೂ ಏಕಕಾಲಕ್ಕೆ ಮತ್ತು ಚುರುಕು ವೇಗ ದಲ್ಲಿ ನಡೆಯುವುದಿಲ್ಲ.ಈ ಸತ್ಯ ಅರಿವಿದ್ದರೂ ಮಾ.4ರಿಂದ ಈವರೆಗೂ ಪಠ್ಯ ಪುಸ್ತಕಗಳು ಹಾಗೂ ಶೈಕ್ಷಣಿಕ ಸಾಮಗ್ರಿ ಗಳ ಪೂರೈಕೆಗೆ ಟೆಂಡರ್ ಪ್ರಕ್ರಿಯೆಗಳನ್ನು ನಿಗದಿತ ಕಾಲಾ ವಧಿಯಲ್ಲಿ ನಡೆಸದೆ ವಿಳಂಬ ಮಾಡಲಾಗಿದೆ.ಈಗಾಗಲೇ ಪಠ್ಯ ಪುಸ್ತಕಗಳ ಮುದ್ರಣಕ್ಕೆ ಕಾಗದದ ಅಭಾವ ತೀವ್ರ ವಾಗಿದ್ದು ಇಡೀ ವಿಶ್ವದ ಮುದ್ರಣ ಉದ್ಯಮವೇ ಬಳಲಿ ಬೆಂಡಾಗಿದೆ. ಕಾಗದದ ಕೊರತೆಯಿಂದ ಪಠ್ಯಪುಸ್ತಕಗಳ ಮುದ್ರಣವೇ ಕಷ್ಟವಾಗಿರುವಾಗ ಹೆಚ್ಚುವರಿಯಾಗಿ ರೂಪಿಸಿ ರುವ ಕಲಿಕಾ ಚೇತರಿಕೆಗೆ ಎರಡು ಕೋಟಿ ಪುಸ್ತಕಗಳನ್ನು ಮುಂದಿನ 14 ದಿನಗಳಲ್ಲಿ ಒದಗಿಸುವುದು ಕನಸಿನ ಮಾತಾ ಗಿದೆ.ಪ್ರಸ್ತುತ ಎದುರಾಗಿರುವ ಸವಾಲಿನ ಪರಿಸ್ಥಿತಿಗಳ ಅರಿವಿದ್ದರೂ ವ್ಯವಸ್ಥೆಗಳ ಬಗ್ಗೆ ಎಚ್ಚೆತ್ತುಕೊಳ್ಳದೆ ವಿಳಂಬ ಮಾಡಿರುವುದು ಸರ್ಕಾರದ ಯೋಜನೆ ಮೇಲೆ ಪರಿಣಾಮ ಬೀರಲಿದೆ.ಮಕ್ಕಳ ಕಲಿಕೆಯಲ್ಲಿ ಸುಧಾರಣೆಯಾಗಬೇಕು. ಆನ್ ಲೈನ್ ಶಿಕ್ಷಣದಿಂದಾಗಿ ಬರೆದು ಓದುವುದನ್ನೇ ಮರೆತಿ ರುವ ಮಕ್ಕಳು ಮತ್ತೆ ಬರೆಯುವುದನ್ನು ಅಭ್ಯಾಸ ಮಾಡಿ ಕೊಳ್ಳಬೇಕು.ಅವರ ಕೈ ಬರವಣಿಗೆ ಸುಧಾರಿಸಬೇಕು. ಗ್ರಹಿಕೆಯ ಪ್ರಮಾಣ ಸಹಜ ಸ್ಥಿತಿಗೆ ಬರಬೇಕು ಎಂಬುದು ಯೋಜನೆಯ ಮಹತ್ವದ ಉದ್ದೇಶ.ಇದಕ್ಕಾಗಿ ಪೂರಕ ಪಠ್ಯಪುಸ್ತಕಗಳು ಹಾಗೂ ಕಲಿಕಾ ಸಾಮಗ್ರಿಗಳೊಂದಿಗೆ ಚಟುವಟಿಕೆಗಳು ಸಕಾಲದಲ್ಲಿ ಆರಂಭಗೊಂಡಿದ್ದರೆ ಹೆಚ್ಚು ಪರಿಣಾಮಕಾರಿಯಾಗುತ್ತಿತ್ತು.ಆದರೆ ಅಧಿಕಾರಿಗಳ ಅನ ಗತ್ಯ ವಿಳಂಬದಿಂದಾಗಿ ಎಲ್ಲವೂ ತಿರುವು-ಮುರುಗಾಗಿದೆ. ಸರ್ಕಾರದ ಮಹತ್ವದ ಯೋಜನೆಯೊಂದು ಕಾಟಾಚಾರಕ್ಕೆ ಅನುಷ್ಠಾನಗೊಳ್ಳುತ್ತಿದೆಯೇ ಎಂಬ ಅನುಮಾನ ಮೂಡಿ ಸುತ್ತಿದೆ.