ಬೆಂಗಳೂರು –
ಈ ಬಾರಿ ಕಪ್ ನಮ್ದೆ ಎನ್ನುತ್ತಾ ಐಪಿಎಲ್ ಕಪ್ ಗೆದ್ದ RCB ಮಹಿಳಾ ಟೀಮ್ – 16 ವರ್ಷದ ಅಭಿಮಾನಿಗಳ ಕನಸನ್ನ ಕನಸು ಮಾಡಿದ ಮಹಿಳಾ ತಂಡ ಹೆಣ್ಮಕ್ಳೇ ಸ್ಟ್ರಾಂಗು ಗುರು ಎಂದ ಅಭಿಮಾನಿಗಳು ಹೌದು
ನಿರೀಕ್ಷಿತ ಮಹಿಳಾ ಐಪಿಎಲ್ 2ನೇ ಆವೃತ್ತಿಯ ಕಪ್ ನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗೆದ್ದುಕೊಂಡಿದೆ.ಹೌದು ಬೆಂಗಳೂರು ಮತ್ತು ಡೆಲ್ಲಿ ತಂಡಗಳ ನಡುವೆ ನಡೆದ ಪೈನಲ್ ಪಂದ್ಯದಲ್ಲಿ ಬೆಂಗಳೂರು ತಂಡ 8 ವಿಕೆಟ್ ಗಳಿಂದ ಭರ್ಜರಿಯಾಗಿ ಗೆಲುವು ಸಾಧಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ನಡೆದ ಮಹಿಳಾ ಪ್ರೀಮಿಯರ್ ಲೀಗ್ 2ನೇ ಸೀಸನ್ನ ಪೈನಲ್ ಪಂದ್ಯದಲ್ಲಿ ಆರ್ಸಿಬಿ ತಂಡವು ಡೆಲ್ಲಿ ವಿರುದ್ಧ ಭರ್ಜರಿ ಗೆಲುವು ದಾಖಲಿ ಸುವ ಮೂಲಕ ಚೊಚ್ಚಲ ಬಾರಿಗೆ ಮಹಿಳಾ ಐಪಿಎಲ್ ಪ್ರಶಸ್ತಿಗೆ ಮುತ್ತಿಕ್ಕಿದೆ.
ಈ ಮೂಲಕ ಆರ್ಸಿಬಿ ಅಭಿಮಾನಿಗಳು 16 ವರ್ಷದಿಂದ ಕಾಯುತ್ತಿದ್ದ ಕಪ್ ಕೊನೆಗೂ ಮಹಿಳಾ ತಂಡ ಗೆಲ್ಲಿಸಿಕೊಟ್ಟಿದೆ.ಈ ಮೂಲಕ ದಶಕದ ಕನಸು ನನಸಾದಂತಾಗಿದೆ.ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆರಂಭದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದರೂ ಬಳಿಕ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡಿತು.
ಅಂತಿಮವಾಗಿ ತಂಡ 18.3 ಓವರ್ಗೆ 113 ರನ್ ಗೆ ಆಲೌಟ್ ಆಯಿತು.ಈ ಒಂದು ಮೊತ್ತವನ್ನು ಬೆನ್ನಟ್ಟಿದ ಆರ್ಸಿಬಿ ತಂಡ 19.3 ಓವರ್ಗೆ 2 ವಿಕೆಟ್ ಕಳೆದುಕೊಂಡು 115 ರನ್ ಗಳಿಸುವ ಮೂಲಕ 8 ವಿಕೆಟ್ ಗಳಿಂದ ಭರ್ಜರಿ ಗೆಲುವು ದಾಖಲಿಸಿ ಇತಿಹಾಸವನ್ನು ಬರೆಯಿತು.ಈ ಮೂಲಕ ಚೊಚ್ಚಲ ಕಪ್ ಮುಡಿಗೇರಿಸಿದೆ.
ಆರ್ಸಿಬಿ ಅಭಿಮಾನಿಗಳು ಭರ್ಜರಿ 16 ವರ್ಷದಿಂದ ಒಂದೇ ಒಂದು ಕಪ್ ಗಾಗಿ ಕಾಯುತ್ತಿದ್ದರು.ಕೊನೆಗೂ ಅಭಿಮಾನಿಗಳು ಕನಸು ಇಂದು ನನಸಾಗಿದೆ.ಐಪಿಎಲ್ 16 ಸೀಸನ್ ನಿಂದ ಪುರುಷರು ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ.ಆದರೆ ಇದೀಗ ಕೇವಲ 2ನೇ ಸೀಸನ್ ನಲ್ಲಿಯೇ ಆರ್ಸಿಬಿ ವುಮೆನ್ಸ್ ತಂಡ ಕಪ್ ಗೆದ್ದು ಕೊನೆಗೂ ಅಭಿಮಾನಿಗಳ ಆಸೆ ಈಡೇರಿಸಿದೆ.
ಆರ್ಸಿಬಿ ಪರ ನಾಯಕಿ ಸ್ಮೃತಿ ಮಂಧನಾ 31 ರನ್, ಸೋಫಿ ಡಿವೈನ್ 32 ರನ್, ಎಲ್ಲಿಸ್ ಪೆರ್ರಿ 35 ರನ್ ಮತ್ತು ರಿಚಾ ಘೋಷ್ 15 ರನ್ ಸಿಡಿಸಿ ಕೊನೆಗೂ ಗೆಲುವಿನ ದಡ ಸೇರಿಸಿದರು.ಟಾಸ್ ಸೋತು ಮೊದಲು ಬೌಲಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಪ್ರದರ್ಶನ ನೀಡಿತು.
ಆರ್ಸಿಬಿ ಪರ ಕನ್ನಡತಿ ಶ್ರೇಯಾಂಕ ಪಟೇಲ್ 3.3 ಓವರ್ಗೆ 12 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು.ಇದಕ್ಕೂ ಮುನ್ನ ಸೋಫಿ ಮೊಲಿನಕ್ಸ್ ಸಹ ಉತ್ತಮ ಬೌಲಿಂಗ್ ಮಾಡುವ ಮೂಲಕ ಪಂದ್ಯಕ್ಕೆ ಪ್ರಮುಖ ಟರ್ನ್ ನೀಡಿದರು. ಸೋಫಿ ಮೊಲಿನಕ್ಸ್ 4 ಓವರ್ಗೆ 20 ರನ್ ನೀಡಿ 3 ವಿಕೆಟ್ ಪಡೆದರು.
ಅದರಲ್ಲಿಯೂ ಸೋಫಿ ಉತ್ತಮವಾಗಿ ಆಡುತ್ತಿದ್ದ ಶಾಫಾಲಿ ವರ್ಮಾ ಅವರ ವಿಕೆಟ್ ಮತ್ತು ಡೇಂಜರ್ ಬ್ಯಾಟರ್ ಆಗಿದ್ದ ಜೇಮಿಮಾ ರಾಡಿಗ್ರಸ್ ವಿಕೆಟ್ ಸೇರಿದಂತೆ ಒಂದೇ ಓವರ್ ನಲ್ಲಿ 3 ವಿಕೆಟ್ ಪಡೆದು ಮಿಮಚಿದ್ದರು. ಇತ್ತ ಶೋಭನಾ ಆಶಾ ಸಹ ಒಂದೇ ಓವರ್ ನಲ್ಲಿ 2 ವಿಕೆಟ್ಗ ಪಡೆದು ಮಿಂಚಿದರು.
ಈ ಮೂಲಕ 10ರಲ್ಲಿ 9 ವಿಕೆಟ್ ಗಳು ಸ್ಪಿನ್ ಬೌಲರ್ ಗಳಿಗೆ ಬಿದ್ದರೆ ಒಂದು ವಿಕೆಟ್ ಸ್ಪಿನ್ ಓವರ್ ಬೌಲಿಂಗ್ ನಲ್ಲಿ ರನೌಟ್ ಆಗಿತ್ತು.ಟಾಸ್ ಗೆದ್ದು ಪವರ್ ಪ್ಲೇ ಸಮಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ ಬಳಿಕ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡಿತು. ಆರಂಭ ದಲ್ಲಿ ಶೇಫಾಲಿ ವರ್ಮಾ ಕೇವಲ 27 ಎಸೆತದಲ್ಲಿ 3 ಸಿಕ್ಸ್ 2 ಫೋರ್ ಮೂಲಕ 44 ರನ್ ಸಿಡಿಸಿ ಮಿಂಚಿದರು.
ಉಳಿಂದತೆ ಮೆಗ್ ಲ್ಯಾನಿಂಗ್ 23 ರನ್, ಆಲಿಸ್ ಕ್ಯಾಪ್ಸೆ 0 ರನ್, ಜೆಮಿಮಾ ರಾಡ್ರಿಗಸ್ 0 ರನ್, ಮರಿಜಾನ್ನೆ ಕಪ್ 8 ರನ್, ಜೆಸ್ ಜೊನಾಸೆನ್ 3 ರನ್, ರಾಧಾ ಯಾದವ್ 12 ರನ್, ಅರುಂಧತಿ ರೆಡ್ಡಿ 10 ರನ್, ತಾನಿಯಾ ಭಾಟಿಯಾ ಶೂನ್ಯ, ಶಿಖಾ ಪಾಂಡೆ 5 ರನ್, ಮಿನ್ನು ಮಣಿ 5 ರನ್ ಗಳಿಸಿದರು. ಈ ಮೂಲಕ ತಂಡದ ಮೊತ್ತ ಅಲ್ಪಮೊತ್ತಕ್ಕೆ ಕುಸಿಯಿತು. ಆರಂಭದ ಅಬ್ಬರ ಬಳಿಕ ಏಕಾಏಕಿ ಕುಸಿತ ಕಂಡಿತು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..