This is the title of the web page
This is the title of the web page

Live Stream

[ytplayer id=’1198′]

September 2024
T F S S M T W
 1234
567891011
12131415161718
19202122232425
2627282930  

| Latest Version 8.0.1 |

ವಿಜಯನಗರ

ಸಡಗರ ಸಂಭ್ರಮದಿಂದ ನಡೆಯಿತು ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ – ರಾಜ್ಯಾಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯಿತು ವಾರ್ಷಿಕ ಸರ್ವ ಸದಸ್ಯರ ಮಹಾ ಸಭೆ…..

ಸಡಗರ ಸಂಭ್ರಮದಿಂದ ನಡೆಯಿತು ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ – ರಾಜ್ಯಾಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯಿತು ವಾರ್ಷಿಕ ಸರ್ವ ಸದಸ್ಯರ ಮಹಾ ಸಭೆ…..
WhatsApp Group Join Now
Telegram Group Join Now

ವಿಜಯನಗರ

ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಾಗೂ ವಾರ್ಷಿಕ ಸರ್ವ ಸದಸ್ಯರ ಮಹಾ ಸಭೆ ವಿಜಯನಗರ ದಲ್ಲಿ ನಡೆಯಿತು. ಹೌದು ವಿಜಯನಗರ ಕಾಲೇಜಿನ‌ ಗ್ರಂಥಾಲಯದ ಆವರಣದಲ್ಲಿರುವ ಸುವರ್ಣ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ವಿಜಯನಗರ ವತಿಯಿಂದ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯ ಕ್ರಮ ಹಾಗೂ ವಾರ್ಷಿಕ ಸರ್ವ ಸದಸ್ಯರ ಮಹಾ ಸಭೆ ನೆಡೆಯಿತು,

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಜಿ, ಮಲ್ಲಿಕಾರ್ಜುನ ಗೌಡ ವಹಿಸಿದ್ದರು, ಕಾರ್ಯಕ್ರಮ ವನ್ನು ನಗರಸಭಾ ಅಧ್ಯಕ್ಷೆ ಕುಮಾರಿ ಎ ಲತಾ ಉದ್ಘಾಟಿಸಿದರು,ಸಂಘದ ರಾಜ್ಯಾಧ್ಯಕ್ಷರಾದ ಸಿ,ಎಸ್ ಷಡಾಕ್ಷರಿ ಆಶಯ ನುಡಿಗಳನ್ನು ನುಡಿ ಯುತ್ತಾ 103 ವರ್ಷಗಳ ಸಂಘದ ಇತಿಹಾಸ ವನ್ನು ಸಭೆಗೆ ತಿಳಿಸಿ ಸಂಘದ ಮುಂದಿರುವ ಪ್ರಮುಖ ಬೇಡಿಕೆಗಳಾದ 7ನೇ ವೇತನದ ಆಯೋಗದ ಅಂತಿಮ ವರದಿ ಪಡೆದು ಅನು ಷ್ಠಾನ, NPS ರದ್ದು ಮಾಡಿ OPS ಜಾರಿಗೆ ಕ್ರಮ ವಹಿಸುವುದು

ಶೀಘ್ರವಾಗಿ ಆರೋಗ್ಯ ಸಂಜೀವಿನಿ ಯೋಜನೆ ಯ ಲೋಕಾರ್ಪಣೆ ಮುಂತಾದ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ಮತ್ತು ಉಪ ಮುಖ್ಯಮಂತ್ರಿಗಳಾದ ಡಿ,ಕೆ ಶಿವ ಕುಮಾರ್ ಇವರ ಬಳಿ ಸಂಘದ ನಿಯೋಗ ದೊಂದಿಗೆ ತೆರಳಿ ಈಗಾಗಲೇ ಚರ್ಚೆ ಮಾಡಿ ಮನವಿ ಮಾಡಿದ್ದು

ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ, ಮುಂದಿನ ದಿನಗಳಲ್ಲಿ ಸರ್ಕಾರ ವೇತನ ಆಯೋಗದಿಂದ ವರದಿ ಪಡೆದು ಅನುಷ್ಠಾನ ಮಾಡುವ ವಿಶ್ವಾಸ ಇದೆ ಇಷ್ಟರಲ್ಲೇ ರಾಜ್ಯ ಸರ್ಕಾರಿ ನೌಕರರು ಕುಟುಂಭಸ್ಥರು,ನಿವೃತ್ತ ನೌಕರರು,ಮತ್ತು ಸರ್ಕಾರಿ ಸ್ವಾಮ್ಯದ ಪ್ರಾಧಿಕಾರ, ವಿಶ್ವ ವಿದ್ಯಾನಿಲಯ ನೌಕರರ ಬೃಹತ್ ಸಮ್ಮೇ ಳನವನ್ನು ಸಂಘದಿಂದ ಆಯೋಜಿಸಲು ತೀರ್ಮಾನಿಸಿದ್ದು

ಈ ಸಮ್ಮೇಳನ ಸರ್ಕಾರಿ ನೌಕರರ ಬೇಕು ಬೇಡಿಕೆಗಳ ಹಕ್ಕೊತ್ತಾಯ ಸಮಾವೇಶ ಆಗಲಿದ್ದು ಲಕ್ಷಾಂತರ ನೌಕರರು ಸಾಗರೋಪಾದಿಯಲ್ಲಿ ಭಾಗವಹಿಸಿ ಯಶಸ್ವಿ ಮಾಡುವ ಜವಾಬ್ದಾರಿ ಎಲ್ಲಾ ನೌಕರರ ಮೇಲಿದೆ ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಶ್ರೀಮತಿ ಅನುರಾಧ ರವರು ಮಾತನಾಡಿ ಮಕ್ಕಳು ತಾವು ಇಷ್ಟಪಡುವ ಕೋಸ್೯ ಗಳನ್ನು ಆಯ್ಕೆ ಮಾಡಿಕೊಂಡು ಓದಲು ಪಾಲಕರು ಅವಕಾಶ ಮಾಡಿಕೊಡಬೇಕು

ಅಂದಾಗ ಮಾತ್ರ ಮಕ್ಕಳ ಭವಿಷ್ಯ ಉಜ್ವಲ ವಾಗುತ್ತದೆ ಎಂದು ತಿಳಿಸಿ ತಮ್ಮ ಅನುಭವದ ಮಾರ್ಗದರ್ಶನ ಮಾಡಿದರು, ಸಭೆಗೆ ಪೂರ್ವದಲ್ಲಿ ಮಕ್ಕಳಿಗೆ ತಮ್ಮ ಭವಿಷ್ಯವನ್ನು ಉಜ್ವಲವಾಗಿಸಿ ಕೊಳ್ಳುವ ಬಗ್ಗೆ ಡಾ! ಕೇದಾರೇಶ್ವರ ಡಂಡಿನ್ ಮತ್ತು ಡಾ! ಮುನಿವಾಸುದೇವ ರೆಡ್ಡಿ ಉಪನ್ಯಾಸ ನೀಡಿದರು,

ವೇದಿಕೆಯಲ್ಲಿ ಕೇಂದ್ರ ಸಂಘದ ಕಾರ್ಯದರ್ಶಿ ಡಾ! ಸದಾನಂದಪ್ಪ ನೆಲ್ಕುದ್ರಿ, ರಾಜ್ಯ ಕಾರ್ಯ ಧ್ಯಕ್ಷ ಮಲ್ಲಿಕಾರ್ಜುನ ಬಿ ಬಳ್ಳಾರಿ, ಬಳ್ಳಾರಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ, ಶಿವಾಜೀ ರಾವ್, ಮಾತನಾಡಿ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹಿಸಿದರು,

ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ತಿಮ್ಮೇಗೌಡ, ಹಿರಿಯ ಉಪಾಧ್ಯಕ್ಷರಾದ ರುದ್ರಪ್ಪ ಎಂ.ವಿ, ಎಸ್ ಬಸವರಾಜ, ರಾಜ್ಯ ಪರಿಷತ್ ಸದಸ್ಯರು, ಕೇಂದ್ರ ಸಂಘದ ಪದಾಧಿಕಾರಿಗಳು, ಜಿಲ್ಲಾ ಗೌರವಾಧ್ಯಕ್ಷ, ಹೆಚ್, ಜೀವಣ್ಣ, ಖಜಾಂಚಿ ರಾಘವೇಂದ್ರ ಹೆಗಡಿಯಾಳ, ರಾಜ್ಯ ಪರಿಷತ್ ಸದಸ್ಯರಾದ ಎಸ್, ಬಸವರಾಜ, ಜಿಲ್ಲಾ ಕಾರ್ಯ ದರ್ಶಿ ಕಡ್ಲಿ ವೀರಭದ್ರೇಶ,

ಪದಾಧಿಕಾರಿಗಳಾದ ಲತಾ, ಕಾಳಪ್ಪಗೌಡ, ನಾಗಭೂಷಣ ಶೆಟ್ಟಿ, ಪಂಪಣ್ಣ, ಆರುಣ ಪತ್ತಾರ, ಅಮರನಾಥ, ಪರಶುರಾಮಪ್ಪ, ಹನುಮಂತಪ್ಪ, ಪ್ರಶಾಂತ್ ಜೋಷಿ, ಪ್ರಕಾಶ ಕುಲಕರ್ಣಿ, ಹೆಚ್ ಎಂ ಗುರುಬಸವರಾಜ, ತಾಲೂಕು ಅಧ್ಯಕ್ಷರು ಗಳಾದ ಎಂ.ಪಿ.ಎಂ ಅಶೋಕ್ ಹಡಗಲಿ,

ಜಗದೀಶ್ ಕೊಟ್ಟೂರು, ಶಿವರಾಜ ಪಿ ಕೂಡ್ಲಿಗಿ, ಎಂ.ಪಿ.ಎಂ ಮಂಜುನಾಥ ಹಗರಿ ಬೊಮ್ಮನಹಳ್ಳಿ, ಹರಪನಹಳ್ಳಿ ಪ್ರಭಾರಿ ಅಧ್ಯಕ್ಷರಾದ ಮನೋ ಹರ್ ಎನ್ ಜಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ, ಚನ್ನಬ ಸಪ್ಪ, ಜಿಲ್ಲಾ ಖಜಾನಾಧಿಕಾರಿ ಡಾ! ರಾಮಪ್ರ ಸಾದ್ ಟಿ, ಮುಂತಾದವರಿದ್ದರು ಕಾರ್ಯಕ್ರಮ ನಿರೂಪಣೆ ಶಿಕ್ಷಕರ ಸಂಘದ ಅಧ್ಯಕ್ಷ ಕೆ ಬಸವ ರಾಜ ನಿರ್ವಸಿದರು.

ಜಿಲ್ಲಾ ಕಾರ್ಯದರ್ಶಿ ಕಡ್ಲಿ, ವೀರಭದ್ರೇಶ ಸ್ವಾಗತಿಸಿ ವಂದಿಸಿದರು, ಜಿಲ್ಲಾ ಖಜಾಂಚಿ ರಾಘವೇಂದ್ರ ಹೆಗಡಿಯಾಳ ಸಭೆಗೆ ಲೆಕ್ಕ ಪತ್ರ ಮಂಡಿಸಿ ಸಭೆಯ ಅನುಮೋದನೆ ಪಡೆದು ಕೊಂಡರು, ನಂತರ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತರಾದ ಹೊಂ ಗಾಡ್೯ ಸಿಬ್ಬಂದಿ ಪಿ, ಕೊಟ್ರಪ್ಪ, ಕೆ ಬೆಟ್ಟದೇಶ‌

ನಾಟಕ ಸ್ಪರ್ಧೆ ಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಯಾದ ಕೊಟ್ಟೂರು ತಾಲೂಕು ಸರ್ಕಾರಿ ನೌಕರರಿಗೆ ಗೌರವ ಸ‌ನ್ಮಾನ ಮಾಡಲಾಯಿತು, ಪಿ.ಯು.ಸಿ ಮತ್ತು ಎಸ.ಎಸ್. ಎಲ್.ಸಿ ವಿಧ್ಯಾರ್ಥಿ ಗಳಿಗೆ ಪ್ರಶಸ್ತಿ ಪತ್ರ,ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು

ಸುದ್ದಿ ಸಂತೆ ನ್ಯೂಸ್ ವಿಜಯನಗರ ‌…..


Google News

 

 

WhatsApp Group Join Now
Telegram Group Join Now
Suddi Sante Desk