ಬೆಂಗಳೂರು –
ಕರ್ನಾಟಕದಲ್ಲಿ 14 ಸಾವಿರ ಮಕ್ಕಳು ಶಾಲೆಯಿಂದ ದೂರ ಉಳಿದಿದ್ದದು ಭಾರತದಲ್ಲಿ ರಾಜ್ಯಕ್ಕೆ 3ನೇ ಸ್ಥಾನ ಇದೆ ಎಂಬ ಸ್ಪೋಟಕ ವಿಚಾರ ಬೆಳಕಿಗೆ ಬಂದಿದೆ ಉಚಿತ ಶಿಕ್ಷಣದ ಜೊತೆಗೆ ನಾನಾ ಸೌಲಭ್ಯಗಳ ಹೊರತಾಗಿಯೂ ಶಾಲೆಯತ್ತ ಮುಖ ಮಾಡದ ಮಕ್ಕಳ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ. ದೇಶಾದ್ಯಂತ ಈ ಸಮಸ್ಯೆ ಇದ್ದು, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಇತ್ತೀಚಿಗೆ ಈ ಬಗ್ಗೆ ಅಂಕಿಅಂಶಗಳನ್ನ ಬಹಿರಂಗ ಗೊಳಿಸಿದೆ.
ಆ ಪ್ರಕಾರ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಯಲ್ಲಿ ಕರ್ನಾಟಕ ದಕ್ಷಿಣ ಭಾರತದಲ್ಲಿಯೇ ಮೂರನೇ ಸ್ಥಾನದಲ್ಲಿದೆ. 2025–26ರಲ್ಲಿ ಕರ್ನಾಟಕದಲ್ಲಿ ಒಟ್ಟು 14,087 ಮಕ್ಕಳು ಶಾಲೆ ಯಿಂದ ಹೊರಗುಳಿದಿದ್ದು, ಅವರಲ್ಲಿ 6,462 ಮಂದಿ ಹೆಣ್ಣುಮಕ್ಕ ಳಾಗಿದ್ದಾರೆ. 2024–25ರಲ್ಲಿ ಈ ಸಂಖ್ಯೆ 9,422 ಇದ್ದು, ಅವರಲ್ಲಿ ಕೇವಲ 115 ಮಂದಿ ಮಾತ್ರ ಹುಡುಗಿಯರಾಗಿದ್ದರು. ಕಳೆದ ಶೈಕ್ಷಣಿಕ ವರ್ಷಕ್ಕೆ ಹೋಲಿಸಿದರೆ ಈ ಸಂಖ್ಯೆ ಪ್ರಸ್ತುತ ಹೆಚ್ಚಾಗಿದೆ.
ದೇಶವ್ಯಾಪಿ ಪಟ್ಟಿಯಲ್ಲಿ ಕರ್ನಾಟಕ 12ನೇ ಸ್ಥಾನದಲ್ಲಿದ್ದು, ಗುಜರಾತ್, ಅಸ್ಸಾಂ ಮತ್ತು ಉತ್ತರ ಪ್ರದೇಶಗಳು ಅಗ್ರಸ್ಥಾನದ ಲ್ಲಿವೆ. ದಕ್ಷಿಣ ಭಾರತದಲ್ಲಿ ಆಂಧ್ರ ಪ್ರದೇಶ ಮೊದಲ ಸ್ಥಾನದಲ್ಲಿದ್ದು, 46,463 ಮಕ್ಕಳು ಶಾಲೆಯತ್ತ ಇಲ್ಲಿ ಮುಖ ಮಾಡಿಲ್ಲ. ಆ ಪೈಕಿ 17,584 ಮಂದಿ ಹೆಣ್ಣುಮಕ್ಕಳಾಗಿದ್ದಾರೆ. ತಮಿಳುನಾಡು ಎರಡನೇ ಸ್ಥಾನದಲ್ಲಿದ್ದು, 19,897 ಮಕ್ಕಳು ಇಲ್ಲಿ ಶಾಲೆಯಿಂದ ಹೊರಗಿದ್ದಾರೆ. ತೆಲಂಗಾಣದಲ್ಲಿ ಈ ಸಂಖ್ಯೆ 4,753 ಇದ್ದು, ಅವರಲ್ಲಿ 2,006 ಹುಡುಗಿಯರು.
ಕೇರಳದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಅತಿ ಕಡಿಮೆ ಇದ್ದು, 1,773 ಮಕ್ಕಳು ಮಾತ್ರ ಶಿಕ್ಷಣದಿಂದ ವಂಚಿತ ರಾಗಿದ್ದಾರೆ. ಶೌಚಾಲಯಗಳು ಮತ್ತು ಕುಡಿಯುವ ನೀರಿನಂತಹ ಮೂಲಸೌಕರ್ಯದ ಕೊರತೆ, ಶಿಕ್ಷಕರ ಅಭಾವ, ಉಚಿತ ಹಾಗೂ ಕಡ್ಡಾಯ ಶಿಕ್ಷಣ 14 ವರ್ಷ ವಯಸ್ಸಿನವರೆಗೂ ಮಾತ್ರ ಸೀಮಿತ ವಾಗಿರುವುದು, ಬಾಲ್ಯವಿವಾಹ ಮತ್ತು ಹೆಣ್ಣುಮಕ್ಕಳ ಗರ್ಭಧಾರಣೆ ಮೊದಲಾದ ಕಾರಣಗಳಿಂದ ಸಾವಿರಾರು ಮಕ್ಕಳು ಶಾಲೆಗಳಿಂದ ಹೊರಗುಳಿಯುತ್ತಿದ್ದಾರೆ.
ಪ್ರಸ್ತುತ ಕರ್ನಾಟಕದಲ್ಲಿ 46,460 ಶಾಲೆಗಳಿದ್ದು, ಇಂದಿಗೂ ಸುಮಾರು 170 ಶಾಲೆಗಳಲ್ಲಿ ಶೌಚಾಲಯ ಸೌಲಭ್ಯಗಳಿಲ್ಲ ಎಂಬ ಮಾಹಿತಿಇದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..



