ಬೆಂಗಳೂರು –
ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾದ ಕಾಂಗ್ರೇಸ್ ಪಕ್ಷದ ಧಾರವಾಡ ಜಿಲ್ಲಾಧ್ಯಕ್ಷ ಅನಿಲಕುಮಾರ್ ಪಾಟೀಲ್ – ಕುತೂಹಲ ಕೆರಳಿಸಿದ ರಾಷ್ಟ್ರೀಯ ಅಧ್ಯಕ್ಷರ ಭೇಟಿ…..ಅರ್ಜುನ ಪಾಟೀಲ್, ಮೋಹನ ಹಿರೇಮನಿ,ಚಂದ್ರಶೇಖರ ಜುಟ್ಟಲ್ ಉಪಸ್ಥಿತಿ…..
ಕಾಂಗ್ರೇಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಮಲ್ಲಿಕಾರ್ಜನು ಖರ್ಗೆಯವರನ್ನು ಧಾರವಾಡ ಜಿಲ್ಲಾ ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷ ರಾಗಿರುವ ಅನಿಲಕುಮಾರ್ ಪಾಟೀಲ್ ಅವರು ಭೇಟಿಯಾ ದರು.ಬೆಂಗಳೂರಿನಲ್ಲಿ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾದ ಅನಿಲಕುಮಾರ್ ಪಾಟೀಲ್ ಅವರು ಹಲವು ವಿಚಾರಗಳ ಕುರಿತಂತೆ ಚರ್ಚೆಯನ್ನು ಮಾಡಿದರು.
ಒಂದು ಗಂಟೆಗಳ ಕಾಲ ಖರ್ಗೆಯವರ ನಿವಾಸದಲ್ಲಿ ಸುಧೀರ್ಘ. ವಾಗಿ ಚರ್ಚೆಯನ್ನು ಮಾಡಿ ಹಲವಾರು ವಿಚಾರಗಳ ಬಗ್ಗೆ ವಿಷಯ ಗಳ ಬಗ್ಗೆ ಚರ್ಚಿಸಿದರು.ಇನ್ನೂ ದಿಢೀರ್ ಆಗಿ ರಾಷ್ಟ್ರೀಯ ಅಧ್ಯಕ್ಷ ರನ್ನು ಧಾರವಾಡ ಜಿಲ್ಲಾ ಕಾಂಗ್ರೇಸ್ ಪಕ್ಷದ ಅಧ್ಯಕ್ಷರ ಭೇಟಿ ಸಾಕಷ್ಟು ಪ್ರಮಾಣದಲ್ಲಿ ತೀವ್ರ ಚರ್ಚೆಗೆ ಮತ್ತು ಕುತೂಹಲವನ್ನು ಕೆರಳಿಸಿದೆ ಪಕ್ಷದ ಸಂಘಟನೆ ಸೇರಿದಂತೆ ಹಲವಾರು ವಿಚಾರಗಳ ಕುರಿತಂತೆ ಅನಿಲಕುಮಾರ್ ಪಾಟೀಲ್ ಅವರು ರಾಷ್ಟ್ರೀಯ ಅಧ್ಯಕ್ಷರಿಗೆ ಮಾಹಿತಿಯನ್ನು ನೀಡಿ
ಕೆಲವೊಂದಿಷ್ಟು ಹೊಸ ಯೋಜನೆಗಳ ಬಗ್ಗೆ ಸುಧೀರ್ಘವಾಗಿ ಮಾತನಾಡಿದ್ದಾರೆ.ಈ ಒಂದು ಸಂದರ್ಭದಲ್ಲಿ ಪಾಲಿಕೆಯ ಸದಸ್ಯರಾದ ಅರ್ಜುನ ಪಾಟೀಲ್,ಮೋಹನ ಹಿರೇಮನಿ, ಕಾಂಗ್ರೇಸ್ ಪಕ್ಷದ ಮುಖಂಡರಾಗಿರುವ ಚಂದ್ರಶೇಖರ ಜುಟ್ಟಲ್ ಸೇರಿದಂತೆ ಹಲವರು ಉಫಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..



