ಬೆಂಗಳೂರು –
ಆರ್ಥಿಕ ಇಲಾಖೆಯ ಕಾರ್ಯದರ್ಶಿಯವರನ್ನು ಭೇಟಿಯಾದ ರಾಜ್ಯ ಸರ್ಕಾರಿ ನೌಕರರ ಸಂಘಟನೆಯ ನಿಯೋಗ – ರಾಜ್ಯಾಧ್ಯಕ್ಷ ಷಡಾಕ್ಷರಿಯವರ ನೇತ್ರತ್ವದಲ್ಲಿ ಭೇಟಿ ನೌಕರರ ಹಲವು ಬೇಡಿಕೆ ಗಳ ಕುರಿತಂತೆ ಚರ್ಚೆ….. ಹೌದು ರಾಜ್ಯ ಆರ್ಥಿಕ ಇಲಾಖೆಯ ಕಾರ್ಯದರ್ಶಿ ಡಾ ಪಿ ಸಿ ಜಾಫರ್ ಅವರನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ನಿಯೋಗ ಭೇಟಿಯಾಗಿದೆ.ಹೌದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್ ಷಡಾಕ್ಷರಿ ರವರ ನಿಯೋಗವು ಆರ್ಥಿಕ ಇಲಾಖೆಯ ಕಾರ್ಯದರ್ಶಿಗಳಾದ ಡಾ.ಪಿ.ಸಿ. ಜಾಫರ್ ರವನ್ನು ಭೇಟಿ ಮಾಡಿದರು.
ಪ್ರಮುಖವಾಗಿ 2025ರ ಹೊಸ ಸಿ.ಜಿ.ಹೆಚ್.ಎಸ್ ದರಗಳನ್ನು ಪರಿಷ್ಕರಿಸುವ ಕಡತವು ಆರ್ಥಿಕ ಇಲಾಖೆಯಲ್ಲಿದ್ದು, ಶೀಘ್ರವಾಗಿ ಅನುಮೋದನೆ ನೀಡುವ ವಿಚಾರ ಕುರಿತಂತೆ ಒತ್ತಾಯವನ್ನು ಮಾಡಿದರು.ಇನ್ನೂ ವಾರ್ಷಿಕ ವೇತನ ಬಡ್ತಿಗೆ ಒಂದು ದಿನ ಹಿಂದೆ ನಿವೃತ್ತಿ ಹೊಂದುವ ನೌಕರರಿಗೆ (ಜೂನ್ ಮತ್ತು ಡಿಸೆಂಬರ್ ತಿಂಗಳಲ್ಲಿ) ಕಾಲ್ಪನಿಕವಾಗಿ ಒಂದು ವಾರ್ಷಿಕ ವೇತನ ಬಡ್ತಿಯನ್ನು ಮಂಜೂರು ಮಾಡುವ ಪ್ರಸ್ತಾವನೆ ಕೂಡಾ ಆರ್ಥಿಕ ಇಲಾಖೆಯ ಲ್ಲಿದ್ದು ಈ ಬಗ್ಗೆ ಈಗಾಗಲೇ ಸಭೆ ನಡೆದಿದ್ದು ಶೀಘ್ರವಾಗಿ ಸರ್ಕಾರಿ ಆದೇಶ ಹೊರಡಿಸಲಾಗುವುದೆಂದು ತಿಳಿಸಿದರು
ಇದರೊಂದಿಗೆ ಅಧಿಕಾರಿ,ನೌಕರರಿಗೆ ಸ್ಥಳ ತೋರಿಸದೆ ವರ್ಗಾವಣೆ ಗೊಳಿಸಿದ ಸಂದರ್ಭದಲ್ಲಿ ಮುಂದಿನ ಸ್ಥಳ ನಿಯುಕ್ತಿಗಾಗಿ ಸಕ್ಷಮ ಪ್ರಾಧಿಕಾರದಲ್ಲಿ ವರದಿ ಮಾಡಿಕೊಂಡ ಸಂದರ್ಭದಲ್ಲಿ ಹಲವಾರು ತಿಂಗಳು ವೇತನ ನೀಡದೆ ಇದ್ದು, ಇಂತಹ ನೌಕರರ ವೇತನವನ್ನು ಸೆಳೆಯಲು ಅನುಮತಿ ನೀಡಿ ಸೂಕ್ತ ಆದೇಶ ಹೊರಡಿಸುವಂತೆ ಮನವಿ ಮಾಡಲಾಯಿತು.
ಮೇಲ್ಕಂಡ ಎಲ್ಲಾ ವಿಷಯಗಳಿಗೆ ಮಾನ್ಯ ಆರ್ಥಿಕ ಇಲಾಖೆಯ ಕಾರ್ದರ್ಶಿಗಳು ಸಕರಾತ್ಮಕವಾಗಿ ಸ್ಪಂದಿಸಿ ಈ ಸಂಬಂಧ ಅಧಿಕೃತ ಸರ್ಕಾರಿ ಆದೇಶ ಹೊರಡಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಎಸ್ ಬಸವರಾಜು ಶಂಭುಗೌಡರವರು, ಉಪಾಧ್ಯಕ್ಷರಾದ ಮೋಹನ್ ಕುಮಾರ್, ಪ್ರಶಾಂತ್ ಕುಮಾರ್ ಹಾಗೂ ಪದಾಧಿಕಾರಿಗಳು ಸೇರಿದಂತೆ ಉಪಸ್ಥಿತರಿದ್ದರು
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..



