ಹುಬ್ಬಳ್ಳಿ –
ಒಳಚರಂಡಿ ಕಾಮಗಾರಿ ಪರಿಶೀಲನೆ ಮಾಡಿದ ಪಾಲಿಕೆಯ ಸದಸ್ಯ ಅರ್ಜುನ ಪಾಟೀಲ್ – ಒಳಚರಂಡಿ,ರಸ್ತೆ ಅಭಿವೃದ್ದಿ ಕಾಮಗಾರಿ ವೀಕ್ಷಣೆ ಗುಣಮಟ್ಟ ಕೆಲಸ ಮಾಡುವಂತೆ ಸೂಚನೆ…..
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯ ಅರ್ಜುನ ಪಾಟೀಲ್ ಅವರು ಹಲವು ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು ತಮ್ಮ ಅನುದಾನದಲ್ಲಿ ಹುಬ್ಬಳ್ಳಿ ಉತ್ತರ ವಿಭಾಗ ವಲಯ ಕಚೇರಿ 4 ರ ಬೈರಿದೇವರಕೊಪ್ಪ ವಾರ್ಡ್ ನ 35 ರ ಚಿಕ್ಕೇರಿ ಪ್ಲಾಟ್ ನ ಶಂಕರಪ್ಪ ನಾಶಿಪುಡಿ ಅವರ ಮನೆಯಿಂದ ರೆಹೆಮಾನ್ ಅವರ ಮನೆಯವರೆಗಿನ ಅಂದಾಜು 15 ಲಕ್ಷದಲ್ಲಿ ನಡೆಯುತ್ತಿರುವ ಒಳಚರಂಡಿ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿ ಯನ್ನು ಪರಿಶೀಲನೆ ಮಾಡಿದರು.
ಇದೇ ವೇಳೆ ಸಾರ್ವಜನಿಕರೊಂದಿಗೆ ಸಂಪೂರ್ಣವಾಗಿ ಈ ಒಂದು ಕಾಮಗಾರಿಯನ್ನು ವೀಕ್ಷಣೆ ಮಾಡಿ ನಿಗದಿತ ಸಮಯದಲ್ಲಿ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚನೆಯನ್ನು ನೀಡಿದರು ಇದರೊಂದಿಗೆ ಗುಣಮಟ್ಟದ ಕೆಲಸವನ್ನು ಮಾಡುವಂತೆಯೂ ಕೂಡಾ ತಿಳಿಸಿದರು ಇದರ ನಡುವೆ ಸಾರ್ಜನಿಕರೊಂದಿಗೆ ಚರ್ಚೆ ಮಾಡಿ ಸಮಸ್ಯೆಗಳನ್ನು ಆಲಿಸಿದರು.
ಈ ಒಂದು ಸಂದರ್ಭದಲ್ಲಿ ಅರ್ಜುನ ಪಾಟೀಲ್ ಅವರೊಂದಿಗೆ ಬೀಷ್ಣು ಬೆಳಗಾಂವಕರ,ಬಸವರಾಜ ಅಂಬಿಗೇರಿ,ಸೇರಿದಂತೆ ವಾರ್ಡ್ನ ನಿವಾಸಿಗಳು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……



