ಸ್ವಚ್ವತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವಚ್ಚತೆ ಮಾಡಿ ಜಾಗೃತಿ ಮೂಡಿಸಿದ ಜನಸೇವರ NH ಕೋನರಡ್ಡಿ – ಕಸಮುಕ್ತ ಆರೋಗ್ಯಕರ ಪರಿಸರ ಗ್ರಾಮಗಳ ನಿರ್ಮಾಣಕ್ಕೆ ಕರೆ ನೀಡಿದ ಶಾಸಕರಿಗೆ ಸಾಥ್ ನೀಡಿದ ಗ್ರಾಮಸ್ಥರು ಅಧಿಕಾರಿಗಳು…..

Suddi Sante Desk
ಸ್ವಚ್ವತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವಚ್ಚತೆ ಮಾಡಿ ಜಾಗೃತಿ ಮೂಡಿಸಿದ ಜನಸೇವರ NH ಕೋನರಡ್ಡಿ – ಕಸಮುಕ್ತ ಆರೋಗ್ಯಕರ ಪರಿಸರ ಗ್ರಾಮಗಳ ನಿರ್ಮಾಣಕ್ಕೆ ಕರೆ ನೀಡಿದ ಶಾಸಕರಿಗೆ ಸಾಥ್ ನೀಡಿದ ಗ್ರಾಮಸ್ಥರು ಅಧಿಕಾರಿಗಳು…..

ಶಿರಗುಪ್ಪಿ

ನವಲಗುಂದ ವಿಧಾನಸಭಾ ಮತಕ್ಷೇತ್ರದ ಶಿರಗುಪ್ಪಿ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು ತಾಲೂಕು ಮಟ್ಟದ ಅಧಿಕಾರಿ ಗಳು ಹಾಗೂ ಗ್ರಾಮಸ್ಥರೊಂದಿಗೆ ನಡೆದ ಸ್ವಚ್ಛತಾ ಆಂದೋಲನ ಕಾರ್ಯಕ್ರಮದಲ್ಲಿ ಶಾಸಕ ಎನ್ ಹೆಚ್ ಕೋನರಡ್ಡಿ ಯವರು ಸಕ್ರಿಯವಾಗಿ ಭಾಗವಹಿಸಿ ಕಸವನ್ನು ಸ್ವತಃ ಗುಡಿಸುವ ಮೂಲಕ ಸ್ವಚ್ಛತೆಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು

ಕಸಮುಕ್ತ ಹಾಗೂ ಆರೋಗ್ಯಕರ ಊರನ್ನು ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಊರಿನ ಸ್ವಚ್ಛತೆಯನ್ನು ಕಾಪಾಡು ವುದರಿಂದ ರೋಗ ರುಜಿನಗಳ ಹರಡುವಿಕೆಯನ್ನು ತಡೆದು, ಸುಂದರ ಹಾಗೂ ಸುರಕ್ಷಿತ ಪರಿಸರವನ್ನು ನಿರ್ಮಿಸಬಹುದು ಎಂಬ ಸಂದೇಶವನ್ನು ಈ ಕಾರ್ಯಕ್ರಮದ ಮೂಲಕ ಶಾಸಕರು ನೀಡಿದರು

ಪ್ರತಿಯೊಬ್ಬರೂ ಸ್ವಚ್ಛತೆಯ ಬಗ್ಗೆ ನಿರಂತರವಾಗಿ ಗಮನ ಹರಿಸಿ, ಸ್ವಚ್ಛ ಮತ್ತು ಆರೋಗ್ಯಕರ ಗ್ರಾಮ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂಬ ಮನವಿ ಮಾಡಲಾಯಿತು.ಈ ಒಂದು ಕಾರ್ಯಕ್ರಮ ದಲ್ಲಿ ತಾಲೂಕಿನ ಅಧಿಕಾರಿಗಳು ಗ್ರಾಮಸ್ಥರು ಸೇರಿದಂತೆ ಹಲವರು ಶಾಸಕರೊಂದಿಗೆ ಪಾಲ್ಗೊಂಡಿದ್ದರು.

 

ಸುದ್ದಿ ಸಂತೆ ನ್ಯೂಸ್ ಶಿರಗುಪ್ಪಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.