ಧಾರವಾಡ DC ಯಾಗಿ ಅಧಿಕಾರ ವಹಿಸಿಕೊಂಡ ಸ್ನೇಹಲ್ R – ನೂತನ ಜಿಲ್ಲಾಧಿಕಾರಿಯನ್ನು ಬರಮಾಡಿಕೊಂಡ ಜಿಲ್ಲೆಯ ಅಧಿಕಾರಿಗಳು…..

Suddi Sante Desk
ಧಾರವಾಡ DC ಯಾಗಿ ಅಧಿಕಾರ ವಹಿಸಿಕೊಂಡ ಸ್ನೇಹಲ್ R – ನೂತನ ಜಿಲ್ಲಾಧಿಕಾರಿಯನ್ನು ಬರಮಾಡಿಕೊಂಡ ಜಿಲ್ಲೆಯ ಅಧಿಕಾರಿಗಳು…..

ಧಾರವಾಡ

ಧಾರವಾಡ DC ಯಾಗಿ ಅಧಿಕಾರ ವಹಿಸಿಕೊಂಡ ಸ್ನೇಹಲ್ R – ನೂತನ ಜಿಲ್ಲಾಧಿಕಾರಿಯನ್ನು ಬರಮಾಡಿಕೊಂಡ ಜಿಲ್ಲೆಯ ಅಧಿಕಾರಿಗಳ

ಧಾರವಾಡ ಜಿಲ್ಲಾ ನೂತನ ಜಿಲ್ಲಾಧಿಕಾರಿಯಾಗಿ ಆರ್ ಸ್ನೇಹಲ್ ಅವರು ಅಧಿಕಾರವನ್ನು ಸ್ವೀಕರಿಸಿದರು ಕರ್ನಾಟಕ ಸರಕಾರದ ರಾಷ್ಟ್ರೀಯ ಜೀವನೊಪಾಯ ಅಭಿಯಾನದ ನಿರ್ದೆಶಕರಾಗಿದ್ದ ಮತ್ತು 2017-18 ರಲ್ಲಿ ಧಾರವಾಡ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಸೇವೆ ಸಲ್ಲಿಸಿರುವ ಹಿರಿಯ ಐಎಎಸ್ ಅಧಿಕಾರಿ ಸ್ನೇಹಲ್.ಆರ್ ಅವರು ಧಾರವಾಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡರು.

ಜಿಲ್ಲಾಧಿಕಾರಿಯಾಗಿದ್ದ ದಿವ್ಯ ಪ್ರಭು ಅವರನ್ನು ರಾಜ್ಯ ಸರಕಾರ ವರ್ಗಾವಣೆ ಮಾಡಿ ಆದೇಶಿಸಿದೆ.ವರ್ಗಾವಣೆಯ ಹಿನ್ನಲೆಯಲ್ಲಿ ಸ್ನೇಹಲ್.ಆರ್ ಅವರು ಇಂದು ಧಾರವಾಡ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ವರದಿ ಮಾಡಿಕೊಂಡರು.ನೂತನ ಜಿಲ್ಲಾಧಿ ಕಾರಿಗಳನ್ನು ಜಿಲ್ಲಾ ಪಂಚಾಯತ್ ಸಿಇಓ ಹಾಗೂ ಪ್ರಭಾರ ಜಿಲ್ಲಾಧಿಕಾರಿಯಾಗಿದ್ದ ಭುವನೇಶ ಪಾಟೀಲ್ ಅವರು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಗರೀಮಾ ಪವಾರ ಐಎಎಸ್ ಪ್ರೋಬೆಷನರಿ ಅಧಿಕಾರಿ ರೀತಿಕಾ ವರ್ಮಾ ಹಾಗೂ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಪುಸ್ತಕ ನೀಡಿ, ಸ್ವಾಗತಿಸಿದರು

ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿಗಳು ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ಜಿಲ್ಲಾ ಪದಾಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.