ಬಳ್ಳಾರಿ –
ಎಂಬಿಬಿಎಸ್ ವಿದ್ಯಾರ್ಥಿಯೊರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳ್ಳಾರಿ ಯಲ್ಲಿ ನಡೆದಿದೆ ಶ್ರೇಯಸ್ ಜೋಶಿ(25) ಆತ್ಮಹತ್ಯೆ ಮಾಡಿಕೊಂಡ ವೈದ್ಯಕೀಯ ವಿದ್ಯಾರ್ಥಿ ಯಾಗಿದ್ದಾನೆ.ಬಳ್ಳಾರಿ ವಿಮ್ಸ್ ಹಾಸ್ಟೆಲ್ ನಲ್ಲಿ ತನ್ನ ಕೋಣೆಯಲ್ಲಿ ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ.
ನೇಣು ಬಿಗಿದುಕೊಂಡಿದ್ದ ಶ್ರೇಯಸ್ ನನ್ನು ಕೂಡಲೇ ವಿಮ್ಸ್ ಆಸ್ಪತ್ರೆಗೆ ಸ್ನೇಹಿತರು ದಾಖಲಿಸಿದ್ದರು.ಚಿಕಿತ್ಸೆ ಫಲಿಸದೇ ಇಂದು ಬೆಳಿಗ್ಗೆ 6.30ಕ್ಕೆ ಕೊನೆಯುಸಿರೆಳೆದನು ವಿದ್ಯಾರ್ಥಿ.ಇತ್ತೀಚೆಗೆ ಶ್ರೇಯಸ್ ಎಂಬಿಬಿಎಸ್ ಫೈನಲ್ ಇಯರ್ ಪಾಸಾಗಿದ್ದನು ಶ್ರೇಯಸ್ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ರಾಜೇಶ್ವರ ಗ್ರಾಮದವನಾಗಿದ್ದು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದನಂತೆ ಶ್ರೇಯಸ್ ಬೈಪೋಲಾರ್ ಡಿಸಾರ್ಡರ್ ಕಾಯಿಲೆಯಿಂದ ನರಳಾಟ ದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಆತ್ಮಹತ್ಯೆಗೆ ಶರಣಾಗುವ ಮುನ್ನ ತನ್ನ ಅಕ್ಕ ಶ್ರದ್ದಾ ಗೆ ಕಾಲ್ ಮಾಡಿದ್ದ ಶ್ರೇಯಸ್ ಸಧ್ಯ ಈ ಒಂದು ಕುರಿತು ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ