ಬೆಂಗಳೂರು –
ವಿಜಯಪುರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.ಆಡಳಿತ ಪಕ್ಷದ ಶಾಸಕ ರೊಬ್ಬರಿಂದ ಈ ಒಂದು ಹೇಳಿಕೆ ಹೊರಗೆ ಬರುತ್ತಿದ್ದಂತೆ ಇದೇ ವಿಚಾರ ಮುಂದಿಟ್ಟುಕೊಂಡು ಪ್ರತಿಪಕ್ಷ ಕಾಂಗ್ರೆಸ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ.ನಿನ್ನೆ ಈ ಹೀಗೆ ಸ್ಟೋಟಕ ಹೇಳಿಕೆ ನೀಡುತ್ತಿದ್ದಂತೆ ಇತ್ತ ಇಂದು ಮಾಜಿ ಸಚಿವ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಬಿಜೆಪಿಯ ಭ್ರಷ್ಟಾಚಾರದ ರೇಟ್ ಕಾರ್ಡ್ ಟ್ವೀಟ್ ಮಾಡಿದ್ದಾರೆ.
ಈ ಮೂಲಕ ಚರ್ಚೆಯ ಬಿಸಿ ಹೆಚ್ಚಿಸಿದ್ದಾರೆ.ಒಂದೊಂದು ಹುದ್ದೆಗೆ ವಿಭಾಗಕ್ಕೆ ಒಂದೊಂದು ರೇಟ್ ನಮೂದಿಸಿ ಇದರೊಂದಿಗೆ ಕೊನೆಯಲ್ಲಿ ವಿಧಾನಸೌಧವನ್ನು ‘ವ್ಯಾಪಾರ ಸೌಧ’ ಮಾಡಿದ್ದೇ ಬಿಜೆಪಿಯ ಸಾಧನೆ ಎಂದು ಮಾಜಿ ಸಚಿವರು ಟೀಕಿಸಿದ್ದಾರೆ.
ಇತ್ತ ಹುಬ್ಬಳ್ಳಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಬಗ್ಗೆ ಕೇಂದ್ರ ತನಿಖಾ ಸಂಸ್ಥೆಗಳಿಂದ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನೂ ಯಾವುದಕ್ಕೆ ಎಷ್ಟು ದರ ? ಪ್ರಿಯಾಂಕ್ ಖರ್ಗೆ ಮಾಡಿರುವ ಟ್ವೀಟ್ ಹೀಗಿದೆ ಬಿಜೆಪಿಯ ಭ್ರಷ್ಟಾಚಾರದ ರೇಟ್ ಕಾರ್ಡ್
- ಸಿಎಂ ಹುದ್ದೆಗೆ – 2500 ಕೋಟಿ
- PSI ಹುದ್ದೆಗೆ – 80 ಲಕ್ಷ
- ಮಂತ್ರಿಗಿರಿಗೆ – 50-70 ಕೋಟಿ
- ಕಾಮಗಾರಿಗಳಿಗೆ -ಶೇ 40
- ಮಠಗಳಿಗೆ – ಶೇ 30
- ವರ್ಗಾವಣೆ – FIXED RATE