ಕೊಪ್ಪಳ –
ಶಾಲೆ ಮುಂದೆ ಮುಖ್ಯ ಶಿಕ್ಷಕನ ಎರಡನೇ ಪತ್ನಿ ಹೈಡ್ರಾಮಾ ಇಬ್ಬರ ಜಗಳದಲ್ಲಿ ವಿದ್ಯಾರ್ಥಿಗಳು ಹೈರಾಣು ಇಂತಹ ದೊಂದು ಘಟನೆ ಕೊಪ್ಪಳ ದಲ್ಲಿ ನಡೆದಿದೆ.ಶಾಲೆಯೆಂದರೆ ಜ್ಞಾನ ದೇಗುಲ, ಇಲ್ಲಿ ಮಕ್ಕಳನ್ನು ಏನು ನೋಡುತ್ತಾರೆ ಅದನ್ನೇ ಕಲಿಯುತ್ತಾರೆ. ಆದರೆ ಈ ಶಾಲೆಯೊಂದರಲ್ಲಿ ಮಕ್ಕಳು ಮುಂದೆಯೇ ಶಿಕ್ಷಕರು ಹಾಗೂ ಅವರ ಎರಡನೇ ಪತ್ನಿ ಜಗಳ ಮಾಡಿಕೊಂಡಿದ್ದಾರೆ
ಕೊಪ್ಪಳದ ಕೋಮಲಾಪೂರ ಗ್ರಾಮದ ಹಿರಿಯ ಪ್ರೌಢಶಾಲೆಯಲ್ಲಿ ಪ್ರತಿನಿತ್ಯ ಜಗಳ ನಡೆಯುತ್ತಿದೆ.ಮುಖ್ಯ ಶಿಕ್ಷಕನ ಎರಡನೇ ಪತ್ನಿ ಶಾಲೆಗೆ ಬಂದು ನಡೆಸುತ್ತಿರುವ ರಂಪಾಟದಿಂದ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ ಸಿದ್ದೇಶ ಶೆಟ್ಟರ್ ಎಂಬು ವವರು ಕೋಮಲಾಪೂರ ಹಿರಿಯ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಿದ್ದೇಶ ಅವರಿಗೆ ಈಗಾಗಲೇ ಮೊದಲ ಪತ್ನಿ ಇದ್ದಾರೆ. ಆದರೂ ನಾಲ್ಕು ವರ್ಷಗಳ ಹಿಂದೆ ಚನ್ನಮ್ಮ ಎಂಬುವವರನ್ನು ಎರಡನೇ ಮದುವೆಯಾಗಿದ್ದರು. ಕಳೆದ ಕೆಲವು ಸಮಯದಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದೆ.
ಕಳೆದ ನಾಲ್ಕೈದು ತಿಂಗಳಿಂದ ಎರಡನೇ ಪತ್ನಿ ಚನ್ನಮ್ಮ ಪ್ರತಿನಿತ್ಯ ಶಾಲೆಗೆ ಬರುತ್ತಿದ್ದಾರೆ. ಮುಖ್ಯ ಶಿಕ್ಷಕನ ಕೊಠಡಿಗೆ ನುಗ್ಗಿ ಜಗಳ ವಾಡುವುದು, ಕಿರುಚಾಡುವುದನ್ನು ಮಾಡುತ್ತಿದ್ದಾರೆ. ಇಂದು ಕೂಡ ಶಾಲೆಗೆ ನುಗ್ಗಿ ಹೈಡ್ರಾಮಾ ನಡೆಸಿದ್ದಾರೆ.ಶಿಕ್ಷಕನ ಕೌಟುಂಬಿಕ ಕಲಹ ಶಾಲಾ ಮಕ್ಕಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.
ಪ್ರತಿದಿನದ ಈ ಗಲಾಟೆಯಿಂದಾಗಿ ಮಕ್ಕಳಿಗೆ ಪಾಠ ಕೇಳಲು ಸಾಧ್ಯವಾಗುತ್ತಿಲ್ಲ. “ಇದು ಶಾಲೆಯೋ ಅಥವಾ ಜಗಳವಾಡುವ ಕಣವೋ?” ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ. ಕೂಡಲೇ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಈ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಅಥವಾ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ
ಸುದ್ದಿ ಸಂತೆ ನ್ಯೂಸ್ ಕೊಪ್ಪಳ…..



