This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

international News

ಗುತ್ತಿಗೆಗೆ 1 ಪರ್ಸೆಂಟ್ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಗ್ಯ ಸಚಿವರನ್ನೇ ಕಿತ್ತು ಹಾಕಿದ ಪಂಜಾಬ್ CM ದಿಟ್ಟ ನಿರ್ಧಾರಕ್ಕೆ ಎಲ್ಲೆಡೆ ಮೆಚ್ಚುಗೆಯ ಮಹಾಪೂರ

WhatsApp Group Join Now
Telegram Group Join Now

ಚಂಡೀಗಡ –

ಗುತ್ತಿಗೆಗಳಿಗೆ ಅಧಿಕಾರಿಗಳಿಂದ ಶೇಕಡ ಒಂದರಷ್ಟು ಕಮಿಷನ್‌ಗೆ ಬೇಡಿಕೆ ಇಟ್ಟಿರುವ ಆರೋಪದ ಮೇಲೆ ಪಂಜಾಬ್‌ನ ಆರೋಗ್ಯ ಸಚಿವ ಡಾ.ವಿಜಯ್‌ ಸಿಂಗಲಾ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ.ಅದರ ಬೆನ್ನಲ್ಲೇ ಪಂಜಾಬ್‌ ಪೊಲೀಸ್‌ನ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ವಿಜಯ್‌ ಅವರನ್ನು ಬಂಧಿಸಿದ್ದಾರೆ.
ಕಮಿಷನ್‌ಗೆ ಬೇಡಿಕೆ ಇಟ್ಟಿರುವ ಬಗ್ಗೆ ಬಲವಾದ ಪುರಾವೆ ಗಳು ಲಭ್ಯವಾಗಿದ್ದು ಸಂಪುಟದಿಂದ ಅವರನ್ನು ತೆಗೆದು ಹಾಕಿರುವುದಾಗಿ ಮುಖ್ಯಮಂತ್ರಿ ಭಗವಂತ್ ಮಾನ್‌ ಅವರ ಕಚೇರಿ ತಿಳಿಸಿದೆ.ತಮ್ಮದೇ ಪಕ್ಷದ ಶಾಸಕರಾಗಲಿ, ಸಚಿವರಾ ಗಲಿ ಯಾರಿಂದಲೇ ಭ್ರಷ್ಟಾಚಾರ ನಡೆದರೂ ಸರ್ಕಾರವು ಸಹಿಸುವುದಿಲ್ಲ ಎಂಬುದನ್ನು ಈ ಮೂಲಕ ಒತ್ತಿ ಹೇಳಲಾ ಗಿದೆ.ಭ್ರಷ್ಟಾಚಾರ ಆರೋಪದ ಮೇಲೆ ಆರೋಗ್ಯ ಸಚಿವ ರನ್ನು ವಜಾಗೊಳಿಸಲಾಗಿದೆ ಹಾಗೂ ಎಫ್‌ಐಆರ್‌ ದಾಖಲಿ ಸಲಾಗಿದೆ ಎಂದು ಪಂಜಾಬ್‌ ಸರ್ಕಾರದ ಅಧಿಕೃತ ಟ್ವಿಟರ್‌ ಖಾತೆ ಪ್ರಕಟಿಸಿದೆ.

ಮುಖ್ಯಮಂತ್ರಿ ಭಗವಂತ ಮಾನ್‌ ಅವರ ನಡೆಯನ್ನು ಶ್ಲಾಘಿಸಿರುವ ಎಎಪಿ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ‘ನೀವು ಕೈಗೊಂಡ ಕ್ರಮ ನನ್ನ ಕಣ್ಣಾಲಿಗಳನ್ನು ತೇವಗೊಳಿಸಿದವು.ಇಂದು ಇಡೀ ರಾಷ್ಟ್ರವು ಎಎಪಿ ಬಗ್ಗೆ ಹೆಮ್ಮೆ ಪಡುವಂತಾಗಿದೆ ಎಂದು ಟ್ವೀಟಿಸಿದ್ದಾರೆ.ಎರಡು ತಿಂಗಳ ಹಿಂದೆಯಷ್ಟೇ ಪಂಜಾಬ್‌ ನಲ್ಲಿ ಆಮ್‌ ಆದ್ಮಿ ಪಕ್ಷ (ಎಎಪಿ) ಸರ್ಕಾರ ರಚಿಸಿದೆ.52 ವರ್ಷದ ವಿಜಯ್ ಸಿಂಗ್ಲಾ ಅವರು ಮಾನ್ಸಾ ಕ್ಷೇತ್ರದ ಶಾಸಕ.ಅವರು ಪಂಜಾಬಿ ಗಾಯಕ ಮತ್ತು ಕಾಂಗ್ರೆಸ್ ಅಭ್ಯರ್ಥಿ ಶುಭದೀಪ್ ಸಿಂಗ್ ಸಿಧು ವಿರುದ್ಧ ಜಯ ಸಾಧಿಸಿದ್ದರು.ಪಂಜಾಬ್‌ನಲ್ಲಿ ಎರಡು ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 117 ಕ್ಷೇತ್ರಗಳ ಪೈಕಿ ಎಎಪಿ 92 ಸ್ಥಾನಗಳಲ್ಲಿ ಜಯ ಸಾಧಿಸಿ ಸರ್ಕಾರ ರಚಿಸಿತ್ತು.
ಭ್ರಷ್ಟಾಚಾರ ಆರೋಪ ಮತ್ತು ಕೈಗೊಂಡಿರುವ ಕ್ರಮಗಳ ಬಗ್ಗೆ ವಿಡಿಯೊ ಸಂದೇಶದಲ್ಲಿ ಪ್ರಸ್ತಾಪಿಸಿರುವ ಭಗವಂತ ಮಾನ್‌ ಎಎಪಿಯು ಪ್ರಮಾಣಿಕ ಪಕ್ಷವಾಗಿದೆ.ನಮ್ಮ ಸರ್ಕಾ ರವು ₹1ರಷ್ಟು ಭ್ರಷ್ಟಾಚಾರವನ್ನೂ ಸಹಿಸುವುದಿಲ್ಲ.ಈ ಭರವಸೆಯನ್ನು ರಾಜ್ಯದಾದ್ಯಂತ ಜನರ ಕಣ್ಣುಗಳಲ್ಲಿ ಕಂಡಿದ್ದೇನೆ ಅವರೆಲ್ಲವೂ ಭ್ರಷ್ಟಾಚಾರದ ಕೂಪದಿಂದ ಹೊರಬರಲು ಎದುರು ನೋಡುತ್ತಿದ್ದಾರೆ.ಪಂಜಾಬ್‌ಗೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುವಾಗಲೇ ಭ್ರಷ್ಟಾಚಾರದಿಂದ ಮುಕ್ತಗೊಳಿಸುವ ಗುರಿಯನ್ನು ಅರವಿಂದ್‌ ಕೇಜ್ರಿವಾಲ್‌ ನನಗೆ ಸ್ಪಷ್ಟಪಡಿಸಿದ್ದರು ಎಂದಿ ದ್ದಾರೆ.ಇತ್ತೀಚೆಗಷ್ಟೇ ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪವು ನನ್ನ ಗಮನಕ್ಕೆ ಬಂದಿತ್ತು.ಮಾಧ್ಯಮಗಳಿಗೆ ಆ ಬಗ್ಗೆ ತಿಳಿದಿರಲಿಲ್ಲ ಬೇಕಾದರೆ ನಾನು ಅದನ್ನು ಯಾರಿಗೂ ತಿಳಿಯದಂತೆ ತೇಲಿಸಿ ಬಿಡಬಹುದಿತ್ತು.ಹಾಗೇನಾದರೂ ನಾನು ಮಾಡಿದ್ದರೆ ನಮ್ಮ ಮೇಲೆ ನಂಬಿಕೆ ಇಟ್ಟಿರುವ ಲಕ್ಷಾಂ ತರ ಜನರಿಗೆ ದ್ರೋಹ ಬಗೆದಂತೆ ಆಗುತ್ತಿತ್ತು.ಹೀಗಾಗಿ ನಾನು ಸಚಿವರ ವಿರುದ್ಧ ಕಠಿಣ ಕ್ರಮಗೊಳ್ಳುತ್ತಿದ್ದೇನೆ ಎಂದು ವಿವರಿಸಿದ್ದಾರೆ.ಭ್ರಷ್ಟಾಚಾರ ಆರೋಪಗಳನ್ನು ವಿಜಯ್‌ ಸಿಂಗಲಾ ಅವರು ಒಪ್ಪಿಕೊಂಡಿರುವುದಾಗಿ ಭಗವಂತ ಮಾನ್‌ ಹೇಳಿದ್ದಾರೆ.ಭ್ರಷ್ಟಾಚಾರದ ಆರೋಪದ ಮೇಲೆ 2015ರಲ್ಲಿ ಅರವಿಂದ್ ಕೇಜ್ರಿವಾಲ್‌ ಅವರು ದೆಹಲಿ ಸಚಿವ ಸಂಪುಟದ ಆಹಾರ ಪೂರೈಕೆ ಸಚಿವರನ್ನು ತೆಗೆದು ಹಾಕಿದ್ದರು.ಆ ಪ್ರಕರಣವನ್ನು ಸಿಬಿಐಗೂ ವಹಿಸಿ ದ್ದರು.ಭ್ರಷ್ಟಾಚಾರದ ವಿರುದ್ಧ ತಮ್ಮದೇ ಪಕ್ಷದವರ ವಿರುದ್ಧವೂ ಕ್ರಮ ಕೈಗೊಳ್ಳುವ ತಾಕತ್ತು ಎಎಪಿಗೆ ಮಾತ್ರವೇ ಇರುವುದಾಗಿ ಪಕ್ಷದ ಸಂಸದ ರಾಘವ್‌ ಚಡ್ಡಾ ಟ್ವೀಟಿಸಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk