ಬರೇಲಿ –
ಅಂಬ್ಯೂಲೆನ್ಸ್ ವೊಂದು ಡಿವೈಡರ್ ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ 7 ಜನರು ಮೃತರಾಗಿರುವ ಘಟನೆ ಬರೇಲಿ ಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ ಹೌದು ದೆಹಲಿಯ ಪಹರ್ಗಂಜ್ನಿಂದ ಪಿಲಿಭಿತ್ಗೆ ಹೋಗುತ್ತಿದ್ದ ಆಂಬ್ಯು ಲೆನ್ಸ್ ಡಿವೈಡರ್ ಡಿಕ್ಕಿಯಾಗಿದ್ದಲ್ಲದೇ ಎದುರಿನಿಂದ ಬರು ತ್ತಿದ್ದ ಕ್ಯಾಂಟರ್ಗೂ(ಮಿನಿ ಟ್ರಕ್)ಡಿಕ್ಕಿ ಹೊಡೆದಿದೆ. ಪರಿ ಣಾಮ ರೋಗಿ ಸೇರಿ ಆಂಬ್ಯುಲೆನ್ಸ್ನಲ್ಲಿದ್ದ 7 ಮಂದಿ ದಾರು ಣವಾಗಿ ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರೆಲ್ಲರೂ ಪಿಲಿಭಿತ್ ನಿವಾಸಿ ಗಳೆಂದು ಇನ್ನೂ ಈ ಒಂದು ಸುದ್ದಿ ತಿಳಿದ ಫತೇಗಂಜ್ ಪಶ್ಚಿಮ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಗಾಯಾ ಳುಗಳನ್ನು ಆಸ್ಪತ್ರೆಗೆ ರವಾನಿಸಿದರು.ಆದರೆ ಅವರೆಲ್ಲರೂ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಮೃತದೇಹಗಳನ್ನು ಗುರುತಿಸುವಲ್ಲಿ ಪೊಲೀಸರು ನಿರತ ರಾಗಿದ್ದು ಭೋಜಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ರಾಂಪುರ ಗ್ರಾಮದ ನಿವಾಸಿ ಮೆಹದಿ ಹಸನ್ ಆಂಬ್ಯುಲೆನ್ಸ್ ಚಾಲಕ ಎಂದು ಗುರುತಿಸಲಾಗಿದೆ.ಬೆಳಗ್ಗೆ ಚಾಲಕ ಏಕಾಏಕಿ ನಿದ್ರೆಗೆ ಜಾರಿದ ಕಾರಣ ದುರ್ಘಟನೆ ಸಂಭವಿಸಿದೆ. ಇದರಿಂ ದಾಗಿ ಆಂಬ್ಯುಲೆನ್ಸ್ ಡಿವೈಡರ್ ಮೇಲೆ ಹತ್ತಿ ಕ್ಯಾಂಟರ್ ಗೆ ಡಿಕ್ಕಿ ಹೊಡೆದಿದೆ.ಅಪಘಾತದಲ್ಲಿ ಮೃತಪಟ್ಟವರಿಗೆ ಸಿಎಂ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ ಮೃತರ ಕುಟುಂಬ ಸದಸ್ಯರಿಗೆ ಸಂಪೂರ್ಣ ನೆರವು ಹಾಗೂ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆಯೂ ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.